ನುಗ್ಗೆ ಸೊಪ್ಪಿನ ಔಷಧಿ ಗುಣಗಳು

ನುಗ್ಗೆ ಸೊಪ್ಪಿನ ಔಷಧಿ ಗುಣಗಳು : ಇದರ ವೈಜ್ಞಾನಿಕ ಹೆಸರು ಮೋರಿಂಗ್ ಒಲಿಫೆರ್. ಸಾಮಾನ್ಯವಗಿ ನುಗ್ಗೆ ಕಾಯಿಯ ಬಗ್ಗೆ ಎಲ್ಲರಿಗೂ ತಿಳಿದೇ ಇರುತ್ತದೆ. ನುಗ್ಗೆ ಕಾಯಿಯನ್ನು ಹೆಚ್ಚಾಗಿ ನಾವು ಅಡುಗೆಯಲ್ಲಿ ಬಳಸುತ್ತೇವೆ. ಆದರೆ ನುಗ್ಗೆ ಸೊಪ್ಪನ್ನು ನಾವು ಬಳಸುವುದು ಕಡಿಮೆ. ಕೆಲವರಂತೂ ನುಗ್ಗೆ ಮರವನ್ನೇ ನೋಡಿರುವುದಿಲ್ಲ. ಆದ್ದರಿಂದ ಅದರ ಸೊಪ್ಪಿನ ಬಳಕೆಯನ್ನೂ ಮಾಡಿರುವುದಿಲ್ಲ. ನಿಮಗೆ ನುಗ್ಗೆ ಸೊಪ್ಪಿನ ಔಷಧೀಯ ಗುಣಗಳು ತಿಳಿದರೆ, ಇದರಿಂದ ಇಷ್ಟೆಲ್ಲಾ ಲಾಭವಿದೆಯೇ ಎಂದು ಆಶ್ಚರ್ಯವಾಗುತ್ತದೆ. ನುಗ್ಗೆ ಮರವು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಎಲ್ಲರ ಮನೆಯಲ್ಲಿಯೂ ಕಾಣಬಹುದು. ಆದರೆ ಈಗಿನ ದಿನಗಳಲ್ಲಿ ಜವಾರಿ ನುಗ್ಗೆಯ ಮರ ಬೆಳೆಸುವಿಕೆ ಕಡಿಮೆಯಾಗುತ್ತಿದೆ. ಎಲ್ಲಿ ನೋಡಿದರು ಹೈಬ್ರಿಡ್ ತಳಿಯ ಮರಗಳದ್ದೇ ಕಾರುಬಾರು. ಆದರೆ ಜವಾರಿ ನುಗ್ಗೆಯಲ್ಲಿರುವಷ್ಟು ಔಷಧಿ ಗುಣಗಳು, ಹೈಬ್ರಿಡ್ ತಳಿಯಲ್ಲಿ ಇರುವುದಿಲ್ಲ.ಅಂತಹ ಔಷಧಿ ಗುಣಗಳ ಬಗ್ಗೆ ಈ ಕೆಳಗೆ ತಿಳಿಯಿರಿ:

01.ನುಗ್ಗೆ ಸೊಪ್ಪು ಮಧುಮೇಹ ನಿಯಂತ್ರಕವಾಗಿದೆ:ಈಗಿನ ದಿನಗಳಲ್ಲಿ ಮಧುಮೇಹ ಖಾಯಿಲೆಯುನ್ನು ಹೊಂದಿರುವವರ ಸಂಖ್ಯೆ ಹೆಚ್ಚಾಗುತ್ತಿದೆ, ಕಾರಣ ಅಧಿಕ ಸಕ್ಕರೆ ಅಂಶಗಳನ್ನು ಹೊಂದಿರುವ ಪದಾರ್ಥಗಳ ಸೇವನೆ. ಇದರಿಂದ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯ ಪ್ರಮಾಣ ಕಡಿಮೆಯಾಗುತ್ತಿದೆ. ನೊಗ್ಗೆಸೂಪ್ಪು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಆದ್ದರಿಂದ ನಾವು ನುಗ್ಗೆಸೊಪ್ಪನ್ನು ಪ್ರತಿದಿನ ಆಹಾರದಲ್ಲಿ ಅಳವಡಿಸಿಕೊಳ್ಳುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿರಿಸಬಹುದು. ನುಗ್ಗೆ ಸೊಪ್ಪು ಸಕ್ಕರೆ ಅಂಶವನ್ನು ಹೊಂದಿರದೆ ಇರುವುದು ತುಂಬಾ ಉಪಯುಕ್ತವಾಗಿದೆ.

02.ಅಧಿಕ ರಕ್ತದೊತ್ತಡದ ನಿವಾರಣೆಗೆ ನುಗ್ಗೆಸೊಪ್ಪು:ಅಧಿಕ ರಕ್ತದೊತ್ತಡವೆಂದರೆ ಹೈ ಬಿಪಿ. ಇದು ಹೃದಯಾಘಾತಕ್ಕೆ ಮೂಲ ಕಾರಣವಾಗಿದೆ. ನುಗ್ಗೆ ಸೊಪ್ಪು ರಕ್ತನಾಳಗಳ ಹಿಗ್ಗುವಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದರಿಂದ ದೇಹದಲ್ಲಿ ರಕ್ತ ಸಂಚಾರ ಸುಗಮವಾಗಿ ಆಗುತ್ತದೆ. ಆದ್ದರಿಂದ ನಾವು ನುಗ್ಗೆ ಸೊಪ್ಪನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಕೆಯಲ್ಲಿಡುವುದು ಉತ್ತಮ.

03.ದೇಹದ ತೂಕ ಇಳಿಸಲು ನುಗ್ಗೆಸೊಪ್ಪು ಸಹಾಯಕವಾಗಿದೆ:ಈಗೀನ ಕಾಲದಲ್ಲಿ ಸ್ಥೂಲ ಕಾಯ ಹೊಂದಿರುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ಜಂಕ್ ಫುಡ್ ಗಳ ಬಳಕೆಯಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ನ ಅಂಶ ಹೆಚ್ಚಾಗಿ, ಇದು ಅನೇಕ ರೋಗಗಳಿಗೆ ಅಹ್ವಾನ ನೀಡುತ್ತದೆ. ಆದ್ದರಿಂದ ನುಗ್ಗೆ ಸೊಪ್ಪಿನ ಬಳಕೆಯನ್ನು ಹೆಚ್ಚಿಸಿದಲ್ಲಿ ನಾವು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ನುಗ್ಗೆ ಸೊಪ್ಪನ್ನು ನಾವು ಸಾಂಬಾರ್, ಸೂಪ್, ಪಲ್ಯ ಅಥವಾ ಜ್ಯೂಸು ಮಾಡಿಕೊಂಡು ಸೇವಿಸಬಹುದು.

04.ಮೂತ್ರದಲ್ಲಿನ ಕಲ್ಲು ನಿವಾರಣೆಗೆ ನುಗ್ಗೆ ಸೊಪ್ಪು ಸಹಕಾರಿಯಾಗಿದೆ:ನುಗ್ಗೆ ಸೊಪ್ಪನ್ನು(ಬೇಕಾದಲ್ಲಿ ಸ್ವಲ್ಪ ಕ್ಯಾರೆಟ್ ಸೇರಿಸಿ) ಜ್ಯೂಸು ಮಾಡಿಕೊಂಡು ಕುಡಿಯುವುದರಿಂದ ಇದು ಮೂತ್ರದಲ್ಲಿನ ಕಲ್ಲು ನಿವಾರಣೆಗೆ ಸಹಾಯಕವಾಗುತ್ತದೆ.

05.ನುಗ್ಗೆಸೊಪ್ಪು ರಕ್ತಹೀನತೆಯನ್ನು ನಿವಾರಿಸುತ್ತದೆ:ನುಗ್ಗೆ ಸೊಪ್ಪು ಪಾಲಕ್ ಸೊಪ್ಪಿಗಿಂತಲೂ 6 ರಷ್ಟು ಹೆಚ್ಚು ಕಬ್ಬಿಣದ ಅಂಶವನ್ನು ಹೊಂದಿದೆ. ಇದು ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಆದ್ದರಿಂದ ಇದು ರಕ್ತಹೀನತೆಯನ್ನು ನಿವಾರಣೆ ಮಾಡುತ್ತದೆ. ಎರಡು ಚಮಚ ನುಗ್ಗೆ ಸೊಪ್ಪಿನ ರಸವನ್ನು ಒಂದು ಲೋಟ ಬಿಸಿ ಹಾಲಿಗೆ ಸೇರಿಸಿ, ರಾತ್ರೆ ಮಲಗುವ ಮೊದಲು ಕುಡಿಯುವುದರಿಂದ ರಕ್ತ ಕೂಡ ಶುದ್ಧಿಯಾಗುತ್ತದೆ.

06.ಕೂದಲಿನ ಆರೋಗ್ಯಕ್ಕೂ ನುಗ್ಗೆಸೊಪ್ಪು ಉಪಯುಕ್ತ:ನುಗ್ಗೆ ಸೊಪ್ಪಿನ ಎಲೆಗಳನ್ನ ನೀರಿನಲ್ಲಿ ಹಾಕಿ ಕಿವುಚಿ, ಆ ನೀರನ್ನು ತಲೆಗೆ ಹಾಕಿಕೊಂಡು 30 ನಿಮಿಷಗಳ ಬಳಿಕ ತಲೆ ಸ್ನಾನ ಮಾಡುವುದರಿಂದ, ಕೂದಲಿನ ಸಮಸ್ಯೆ ದೂರವಾಗಿ ಆರೋಗ್ಯಕರ ಕೊಡಲು ನಮ್ಮದಾಗುತ್ತದೆ.

07.ಹೃದಯ ಸಮಸ್ಯೆಗೆ ನುಗ್ಗೆಸೊಪ್ಪಿನಿಂದ ಪರಿಹಾರ:ನುಗ್ಗೆ ಸೊಪ್ಪು ದೇಹದಲ್ಲಿನ ಕೊಬ್ಬಿನ ಅಂಶಗಳನ್ನು ಹೀರಿಕೊಳ್ಳುವ ಗುಣಗಳನ್ನು ಹೊಂದಿದ್ದು, ರಕ್ತ ನಾಳವು ಬ್ಲಾಕ್ ಆಗುವುದನ್ನು ಇದು ತಡೆಯುತ್ತದೆ. ಆದ್ದರಿಂದ ನಾವು ನುಗ್ಗೆ ಗಿಡದ ಹೂವನ್ನು ಅಥವಾ ಎಲೆಯನ್ನು ವಾರಕ್ಕೊಮ್ಮೆಯಾದರೂ ಪಲ್ಯ, ಸಾಂಬಾರ್ ಅಥವಾ ಇನ್ನಿತರ ಯಾವುದೇ ಖಾದ್ಯಗಳನ್ನು ತಯಾರಿಸಿಕೊಂಡು ಸೇವಿಸುವುದರಿಂದ ಹೃದಯ ರೋಗದ ಸಮಸ್ಯೆಯಿಂದ ದೂರವಿರಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group