ಸಾವಯವ ಉತ್ಪನ್ನಗಳ ಖರೀದಿಗೆ ಇಲ್ಲಿದೆ 05 ಬೆಸ್ಟ್ ಸಂಸ್ಥೆಗಳ ಪರಿಚಯ

ಸೂಪರ್ ಮಾರ್ಕೆಟ್ಗೆ ತೆರಳುವ ಗ್ರಾಹಕರು ತಮ್ಮ ಬಾಸ್ಕೆಟ್ನಲ್ಲಿರುವ ಸಾದಾ ಹಣ್ಣಿಗಿಂತ ಒಂದಷ್ಟು ಹಣ ಹೆಚ್ಚು ನೀಡಿ ಸಾವಯವ ಕೃಷಿಯಲ್ಲಿ ಬೆಳೆದ ಹಣ್ಣುಗಳನ್ನು ಖರೀದಿಸುವುದು ಅವರ ಆರೋಗ್ಯಕ್ಕೆ ಅತ್ಯುತ್ತಮ ವಿಧಾನ. ಸಾವಯವ ಉತ್ಪನ್ನಗಳ ಬಳಕೆ ಗ್ರಾಹಕರು ತೆಗೆದುಕೊಳ್ಳುವ ಆರೋಗ್ಯಕಾರಿ ನಿರ್ಧಾರ. ರಾಸಾಯನಿಕ ವಸ್ತುಗಳನ್ನು ವಾತಾವರಣದಿಂದ ದೂರವಿಟ್ಟಷ್ಟೂ ಆರೋಗ್ಯ ಉತ್ತಮವಾಗುತ್ತದೆ ಇದರಿಂದ ಪರಿಸರ ನಾಶವೂ ತಪ್ಪುತ್ತದೆ. ಈ ವಾದವನ್ನು ನೀವು ಒಪ್ಪುತ್ತೀರಾದರೇ, ನಿಮಗೆ ಸಾವಯವ ಉತ್ಪನ್ನಗಳ ಖರೀದಿಯಲ್ಲಿ ಆಸಕ್ತಿಯಿದೆ ಎಂದಾದರೆ, ನಿಮಗಾಗಿ ಇಲ್ಲಿ 05 ವಿವಿಧ ಆರ್ಗ್ಯಾನಿಕ್ ಉತ್ಪನ್ನಗಳನ್ನು ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಸಂಸ್ಥೆಗಳ ಪರಿಚಯವಿದೆ.
1. ಆರ್ಗ್ಯಾನಿಕ್ ಶಾಪ್, :ಸ್ವಾಭಾವಿಕ ಹಾಗೂ ಬಯೋ ಗೊಬ್ಬರಗಳ ಮೂಲಕ ಉತ್ಪಾದಿಸಿದ ಉತ್ಪನ್ನಗಳಿಗೆ ಆನ್ಲೈನ್ ಮಾರುಕಟ್ಟೆ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ತಲುಪುತ್ತಿವೆ. ಇಂತಹ ಸಂಸ್ಥೆಗಳಿಗೆ ನೆರವು ನೀಡುವ ಯೋಜನೆಯೇ ದಿ ಆರ್ಗ್ಯಾನಿಕ್ ಶಾಪ್. ಮನುಜ್ ತೆರಪಂಥಿ ಸ್ಥಾಪಿಸಿದ ಸಂಸ್ಥೆಯಿದು. ಇದರ ಮೂಲಕ ಇ-ಕಾಮರ್ಸ್ ಸಂಸ್ಥೆಯಲ್ಲಿ ಕೇವಲ ಭಾರತೀಯ ಮಾರುಕಟ್ಟೆಯಲ್ಲಿ ಮಾತ್ರವಲ್ಲ ಯುರೋಪಿಯನ್ ಮಾರುಕಟ್ಟೆಯಲ್ಲೂ ಸಾವಯವ ಕೃಷಿಯ ಹಾಗೂ ಸಹಜ ಸ್ವಾಭಾವಿಕ ಗೊಬ್ಬರದ ಉತ್ಪನ್ನಗಳ ಪೂರೈಕೆಯಿದೆ.
2. ನ್ಯಾಚುರಲಿ ಯುವರ್ಸ್ : ಫೆಬ್ರವರಿ 2010ರಲ್ಲಿ ಪ್ರಿಯಾ ಪ್ರಕಾಶ್ ಹಾಗೂ ವಿನೋದ್ ಕುಮಾರ್ ಸ್ಥಾಪಿಸಿದ ಸಂಸ್ಥೆಯಿದು. ಒಂದೇ ಸ್ಥಳದಲ್ಲಿ ಹಲವು ಬಗೆಯ ಅತ್ಯುತ್ತಮ ಗುಣಮಟ್ಟದ ಹಾಗೂ ಸ್ವಾಭಾವಿಕ ಮಾದರಿಯ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುವುದು ಈ ಸಂಸ್ಥೆಯ ಉದ್ದೇಶ. ಈ ಪ್ರಾರಂಭಿಕ ಸಂಸ್ಥೆ ಇ-ಕಾಮರ್ಸ್ ವೇದಿಕೆಯ ಮೂಲಕ ನೂರು ವರ್ತಕರಿಗೆ ಸಾವಯವ ಹಾಗೂ ಪರಿಶುದ್ಧ ಅಕ್ಕಿ, ಎಣ್ಣೆ, ಪ್ಯಾಕೇಜ್ಡ್ ಪೊಂಗಲ್ ಹಾಗೂ ಕೀರುಗಳೂ ಸೇರಿದಂತೆ ಹಲವು ಉತ್ಪನ್ನಗಳನ್ನು ಒದಗಿಸುತ್ತಿದೆ.
3. ನ್ಯೂಟ್ರಿಬಕೇಟ್ಧ್ರುವ್ ಹಾಗೂ ಪ್ರಂಗ್ನಾ ಜಗ್ಗಿ ಸ್ಥಾಪಿಸಿದ ಆರೋಗ್ಯಕಾರಿ ಆಹಾರ ಒದಗಿಸುವ ಸಂಸ್ಥೆಯೇ ನ್ಯೂಟ್ರಿಬಕೇಟ್. ಇದು ಜನರಿಗೆ ಅತ್ಯುತ್ತಮ ಗುಣಮಟ್ಟದ, ಆರೋಗ್ಯಕಾರಿ ಹಾಗೂ ಪೌಷ್ಠಿಕಾಂಶಯುಕ್ತ ಆಹಾರ ಒದಗಿಸುವ ಕೆಲಸ ಮಾಡುತ್ತಿದೆ. ದೈಹಿಕ ಆರೋಗ್ಯಕ್ಕಾಗಿ ಅತ್ಯುತ್ತಮ ದರ್ಜೆಯ ಸಾವಯವ ಹಾಗೂ ಪೌಷ್ಠಿಕ ಆಹಾರ ಅತ್ಯಗತ್ಯ. ಇಂತಹ ಉತ್ಪನ್ನಗಳಿಂದ ಮಾತ್ರ ಸರಳ, ಸುಭದ್ರ ಹಾಗೂ ಪರಿಣಾಮಕಾರಿಯಾದ ಪ್ರಭಾವ ಬೀರುತ್ತದೆ. ಹಾಗಾಗಿ ಹೆಚ್ಚು ಹೆಚ್ಚು ಸಾವಯವ ಕೃಷಿ ಹಾಗೂ ಸಾವಯವ ಬಳಕೆಗೆ ಆದ್ಯತೆ ನೀಡಬೇಕು ಅನ್ನುವುದು ಅವರ ಆಗ್ರಹ.
4 ಐ ಸೇ ಆರ್ಗ್ಯಾನಿಕ್: ಸಂಸ್ಥಾಪಕ ಇಶ್ಮಿತ್ ಕಪೂರ್, ತಮ್ಮ ಪದವಿ ಮುಗಿಸಿದ್ದು ಬ್ರಿಟೀಷ್ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ. ಬಳಿಕ ಉದ್ಯೋಗಶೀಲತೆ ಕಲಿಕೆಯನ್ನು ಕಲಿತಿದ್ದು ಬ್ರೌನ್ ಯುನಿವರ್ಸಿಟಿಯಲ್ಲಿ. ಹಲವಾರು ರೈತ ಸಂಘಗಳೊಂದಿಗೆ ಸಂಪರ್ಕ ಹೊಂದಿರುವ ಈ ಸಂಸ್ಥೆ ಅತ್ಯುತ್ತಮ ಸಂವಹನ ವ್ಯವಸ್ಥೆಯನ್ನು ಹೊಂದಿದೆ. ಜನಗಳು ಹೆಚ್ಚು ಹೆಚ್ಚು ಆರ್ಗ್ಯಾನಿಕ್ ಉತ್ಪನ್ನಗಳನ್ನು ಸೇವಿಸಬೇಕೆಂದರೇ, ರೈತರು ಸಾವಯವ ಉತ್ಪನ್ನಗಳ ಬೆಳೆಯಲು ಗಮನ ಹರಿಸಬೇಕು. ಸಾವಯವ ಉತ್ಪನ್ನಗಳನ್ನು ಖರೀದಿಸಲು ಮುಂದಾಗುವ ಗ್ರಾಹಕರ ಬೇಡಿಕೆಗೆ ತಕ್ಕ ಪೂರೈಕೆ ಸಾವಯವ ಉತ್ಪನ್ನಗಳನ್ನೆ ಬೆಳೆಯುವ ರೈತರು ಮಾಡಬೇಕು. ಈ ನಿಟ್ಟಿನಲ್ಲಿ ರೈತರನ್ನು ಪ್ರೋತ್ಸಾಹಿಸಬೇಕು ಅನ್ನುವ ಬಲವಾದ ನಿಲುವ ಈ ಸಂಸ್ಥೆಯದ್ದು.
5. ದಿ ಆರ್ಗ್ಯಾನಿಕ್ ಲೈಫ್: ಸಂಸ್ಥೆಯ ಸಂಸ್ಥಾಪಕರು ಮಲ್ಲೇಶ್ ತಿಗಲಿ. ಇದೊಂದು ಆನ್ಲೈನ್ ಮಾರುಕಟ್ಟೆಯಾಗಿದ್ದು, ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡುವ ಜೊತೆಗೆ ಸಾವಯವ ಉತ್ಪನ್ನಗಳ ಮಾರಾಟದ ಕ್ರಮವನ್ನೂ ಪ್ರೋತ್ಸಾಹಿಸುತ್ತಿದೆ. ಸುಮಾರು 100 ಬೇರೆ ಬೇರೆ ವರ್ಗಗಳ ಸುಮಾರು 1500 ಸಾವಯವ ಉತ್ಪನ್ನಗಳ ಮಾರಾಟ ವ್ಯವಸ್ಥೆ ಇದರಲ್ಲಿದೆ. ಇದು ಅತ್ಯುತ್ತಮ ದರ್ಜೆಯ ಸಾವಯ ಉತ್ಪನ್ನಗಳನ್ನು ಕೂಲಂಕೂಷವಾಗಿ ಪರೀಕ್ಷಿಸಿಯೇ ಗ್ರಾಹಕರಿಗೆ ತಲುಪಿಸುತ್ತಿದೆ.