ಮಹಿಳೆಯರಲ್ಲಿ ಕಾಡುವ ಮುಟ್ಟಿನ ಹೊಟ್ಟೆ ನೋವಿನ ಸಮಸ್ಯೆಗೆ ಮನೆಯಲ್ಲಿಯೇ ಮಾಡಬಹುದಾದ ಮನೆಮದ್ದುಗಳು!

ಮಹಿಳೆಯರ ಮಾಸಿಕ ದಿನಗಳ ಮುನ್ನಾ (ಮುಟ್ಟಿನ ದಿನ) ಮತ್ತು ನಂತರದ ದಿನಗಳಲ್ಲಿ ಕಾಡುವ ನೋವು ಅನುಭವಿಸಿದವರಿಗೇ ಗೊತ್ತು. ಇದರ ಕಾರಣ ನಿತ್ಯದ ಅವಶ್ಯಕ ಕೆಲಸಗಳಿಗೆಲ್ಲಾ ಆಗುವ ತೊಂದರೆ ಮತ್ತು ವಿಶೇಷವಾಗಿ ಉದ್ಯೋಗಸ್ಥ ಮಹಿಳೆಯರು ಹೆಚ್ಚಿನ ತೊಂದರೆ ಮತ್ತು ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ದೇಹದಲ್ಲಿ ಸ್ರವಿಸುವ ಹಲವಾರು ಹಾರ್ಮೋನುಗಳ ಕಾರಣ ಮಾನಸಿಕ ಉದ್ವೇಗ, ಅತಿಸೂಕ್ಷ್ಮಸಂವೇದನೆ, ಬದಲಾಗುವ ಮನೋಭಾವ, ಸುಸ್ತು, ಎಗರಾಡುವ ಪ್ರವೃತ್ತಿ, ಶೀಘ್ರವಾಗಿ ಸಿಟ್ಟಿಗೇಳುವ, ಕಿರಿಕಿರಿ ಅನುಭವಿಸುವ, ಮಾನಸಿಕ ಖಿನ್ನತೆ, ಏಕಾಗ್ರತೆಯಲ್ಲಿ ಕೊರತೆ ಮೊದಲಾದವು ಮಾನಸಿಕ ತೊಂದರೆಗಳಾದರೆ ಕೆಳಹೊಟ್ಟೆಯಲ್ಲಿ ಅತೀವ ನೋವು, ಹೊಟ್ಟೆಯುಬ್ಬರಿಕೆ, ಮುಖದಲ್ಲಿ ಮೊಡವೆಗಳು ಮೊದಲಾದವು ದೈಹಿಕ ತೊಂದರೆಗಳಾಗಿವೆ. ತಿಂಗಳ ಮುಟ್ಟಿನ ತಡವಾಗುವಿಕೆಗಾಗಿ.
- ಶುಂಠಿ ಮತ್ತು ಜೀರಿಗೆಯನ್ನು ಕುದಿಸಿ ಕುಡಿಯಿರಿ:
ಶುಂಠಿ ಒಂದೆರಡು ಶುಂಠಿಯ ತುಂಡನ್ನು ಜಜ್ಜಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಕೆಲವು ನಿಮಿಷಗಳವರೆಗೆ ಹಾಗೆಯೇ ಕಾಯಿಸಿದ ನಂತ್ರ ಅದ್ರ ಡಿಕಾಕ್ಷನ್ ತೆಗೆದುಕೊಳ್ಳಿ ಆರಿಸಿ ಕುಡಿಯಿರಿ. ಹಾಗೆಯೇ ಕುಡಿಯಲು ಸಾಧ್ಯವಾಗಿಲ್ಲ ಅಂದ್ರೆ ಜೇನುತುಪ್ಪ ಇಲ್ಲ ಸಕ್ಕರೆ ಅಥ್ವಾ ಬೆಲ್ಲ ಸೇರಿಸಿಯೂ ಸೇವಿಸಬಹುದು. ಆ ದಿನಗಳಲ್ಲಿ ನಿಮ್ಮನ್ನ ಅತಿಯಾಗಿ ಕಾಡುವ ರಕ್ತಸ್ರಾವ ಸಮಸ್ಯೆಗೆ ಇದು ಕೂಡ ಉತ್ತಮ ರೀತಿಯಲ್ಲಿ ಪರಿಹಾರ ನೀಡಬಲ್ಲದು.ಒಂದು ಕಪ್ ನೀರಿಗೆ ಸ್ವಲ್ಪ ಜೀರಿಗೆಯನ್ನು ಹಾಕಿ ಚೆನ್ನಾಗಿ ಕುದಿಸಿಕೊಂಡು ಅದನ್ನು ಕುಡಿಯುವುದರಿಂದ ಮುಟ್ಟಿನ ಸೆಳೆತ, ಆಯಾಸ ಕಡಿಮೆಯಾಗುತ್ತದೆ. ಈ ನೀರನ್ನು ಐದು ನಿಮಷಗಳ ಕಾಲ ಕುದಿಸಿ ತಣಿಸಿದ ನಂತರ ಸೇವಿಸಿ.
- ಕ್ಯಾರೆಟ್ ಜ್ಯೂಸು ಅಥವಾ ಪಪ್ಪಾಯಿ ಹಣ್ಣು:
ಕ್ಯಾರೆಟ್ ಗಳು ಕೇವಲ ನಿಮ್ಮ ಕಣ್ಣುಗಳಿಗೆ ಆನಂದ ನೀಡುವುದು ಮಾತ್ರವಲ್ಲ, ಅವು ನಿಮ್ಮ ಮುಟ್ಟಿನ ಸಮಯದ ನೋವು ನೀವು ನಿವಾರಿಸಬಲ್ಲ ಶಕ್ತಿಯನ್ನೂ ಹೊಂದಿವೆ. ಋತುಚಕ್ರದ ಸಮಯದಲ್ಲಿ ರಕ್ತದ ಹರಿವು ಸುಲಭವಾಗಿ ಆಗಲು ವೈದ್ಯರು ಇಂದು ಲೋಟ ಕ್ಯಾರೆಟ್ ರಸವನ್ನು ಕುಡಿಯಲು ಸಲಹೆ ನೀಡುತ್ತಾರೆ.ವಿಶೇಷವಾಗಿ ಮುಟ್ಟಿಗಿಂತ ಮೊದಲು ಪಪ್ಪಾಯಿಯನ್ನು ಸೇವಿಸುವುದು ಒಳ್ಳೆಯದು. ಪಪ್ಪಾಯಿ ಮುಟ್ಟಿನ ನೋವಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಕಿಣ್ವ, (ಪಪಿಯನ್) ಗಳನ್ನು ಒಳಗೊಂಡಿದೆ. ಇದು ಮುಟ್ಟಿನ ಸಂದರ್ಭದಲ್ಲಿ ರಕ್ತದ ಹರಿವನ್ನು ಸಹನೀಯ ಮತ್ತು ಸುಲಭವಾಗಿ ಆಗುವಂತೆ ಮಾಡುತ್ತದೆ.
- ಮೋಸಂಬಿ ಜ್ಯೂಸ್ ಕುಡಿಯಬೇಕು ಕಾಫಿಯನ್ನು ಕುಡಿಯಬಾರದು:
ಕೆಲವು ಹುಡುಗಿಯರಲ್ಲಿ ಕಾಫಿಯ ಸೇವನೆಯು ನೋವಿನ ಹೆಚ್ಚಳಕ್ಕೆ ಕಾರಣವಾಗಬಲ್ಲದು. ಒಂದು ವೇಳೆ ನೀವು ಕಾಫಿಯನ್ನು ಕುಡಿಯುವವರಾಗಿದ್ದು, ನೋವುಭರಿತ ಮುಟ್ಟಿನ ದಿನಗಳನ್ನು ಎದುರಿಸುತ್ತಿದ್ದಲ್ಲಿ, ಒಂದು ತಿಂಗಳ ಮಟ್ಟಿಗೆ ಕಾಫಿಯ ಸೇವನೆಯನ್ನು ತ್ಯಜಿಸಿರಿ ಹಾಗೂ ಏನಾದರೂ ಬದಲಾವಣೆಗಳು ಕಂಡಬರುತ್ತವೆಯೇ ಎಂಬುದನ್ನು ಗಮನಿಸಿರಿ.ಒಂದು ವೇಳೆ ಹೀಗೆ ಮಾಡುವುದರಿಂದ ನೋವಿನ ತೀವ್ರತೆಯು ಕಡಿಮೆಗೊಂಡರೆ, ನೀವು ಕಾಫಿಯ ಸೇವನೆಯನ್ನೇ ಬಿಟ್ಟುಬಿಡುವುದರ ಕುರಿತು ಆಲೋಚಿಸುವುದು ಒಳಿತು.
ವಿಶೇಷವೇನೆಂದರೆ ಮುಟ್ಟಿನ ಸಮಯದಲ್ಲಿ ತುಂಬಾ ಹೊಟ್ಟೆ ನೋವು ಇದ್ದರೆ ಈ ಸಲಹೆಗಳನ್ನು ಪಾಲಿಸಿ ಸ್ವಲ್ಪಮಟ್ಟಿಗಾದರೂ ಕಮ್ಮಿ ಆಗುತ್ತದೆ ಮತ್ತು ಪಪ್ಪಾಯಿ ಹಣ್ಣು ಕೆಲವರಿಗೆ ಈ ಸಮಯದಲ್ಲಿ ಆಗುವುದಿಲ್ಲ ಅದನ್ನು ನೀವು ನೋಡಿಕೊಂಡು ಸೇವಿಸಬಹುದು.