ಜೂನ್ 21-ಅಂತರಾಷ್ಟ್ರೀಯ ಯೋಗ ದಿನ;

ಬಾಹ್ಯ ಸೌಂದರ್ಯ ಎಷ್ಟು ಮುಖ್ಯವೋ ಹಾಗೆಯೇ ಆಂತರಿಕ ಸೌಂದರ್ಯ ಕೂಡ ದೇಹಕ್ಕೆ ಮುಖ್ಯವಾಗಿರುತ್ತದೆ. ಪ್ರತಿ ನಿತ್ಯವೂ ಮನುಷ್ಯನ ಜೀವನದಲ್ಲಿ ವ್ಯಾಯಾಮ ಎನ್ನುವುದು ಪ್ರಮುಖ ಪಾತ್ರವನ್ನು ವಹಿಸುತ್ತದೆ.ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. ಇದನ್ನು ಬೇಸಿಗೆ ಅಯನ ಸಂಕ್ರಾಂತಿ ದಿನವೆಂದು (ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನ) ಕರೆಯಲಾಗುತ್ತದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ. ಇದು ದಕ್ಷಿಣಯಾನಕ್ಕೆ ಪರಿವರ್ತನೆ ಎಂದು ಗುರುತಿಸಲಾಗುತ್ತದೆ.

ಯೋಗ ವ್ಯಾಯಾಮ ಮಾತ್ರವಲ್ಲದೆ ನಿಮ್ಮೊಂದಿಗೆ, ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡುಹಿಡಿಯಲು ನೆರವಾಗುತ್ತದೆ. ನಮ್ಮ ಜೀವನಶೈಲಿ ಹಾಗೂ ಪ್ರಜ್ಞೆ ರಚಿಸುವ ಮೂಲಕ ಹಮಾಮಾನ ಬದಲಾವಣೆ ನಿಭಾಯಿಸಲು ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ

  • ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಮಹತ್ವ:

2015ರ ನಂತರ ಯೋಗ ಮಾಡುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳು ಮತ್ತು ಅದರ ವಿವಿಧ ಅಭ್ಯಾಸಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜೂನ್ 21 ರಂದು ಪ್ರಪಂಚದಾದ್ಯಂತ ವಾರ್ಷಿಕವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಇದನ್ನು ಅಭ್ಯಾಸ ಮಾಡುವುದರಿಂದ ಪಡೆಯಬಹುದಾದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸುವುದು ಇದರ ಉದ್ದೇಶವಾಗಿದೆ. ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ಉದ್ದದ ದಿನವಾದ್ದರಿಂದ ಜೂನ್ 21 ರ ದಿನಾಂಕವನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದರು.

  • ಅಂತರಾಷ್ಟ್ರೀಯ ಯೋಗ ದಿನದ ಉದ್ದೇಶ:

ಯೋಗ ದಿನ ಘೋಷಣೆಯ ಹಿಂದೆ ಒಂದೇ ಉದ್ದೇಶವಿದೆ, ಧರ್ಮ ಜಾತಿಗಿಂತ ಮೇಲೇರಿ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಆರಂಭವಾಗಿದೆ. ಯೋಗವು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಯೋಜನಗಳನ್ನು ಹೊಂದಿದೆ, ಇದು ಅನೇಕ ಸಮಸ್ಯೆಗಳ ಅಂತ್ಯವಾಗಿದೆ. ಆದ್ದರಿಂದ, ಎಲ್ಲ ಧರ್ಮಗಳು ಮತ್ತು ಜಾತಿಗಳಲ್ಲಿ ಯೋಗದ ಬಗ್ಗೆ ಜಾಗೃತಿ ಇರಬೇಕು.

  • ಅಂತರಾಷ್ಟ್ರೀಯ ಯೋಗ ದಿನದ ಅಮೂಲ್ಯ ಪದಗಳು:

#ಯೋಗ ಮಾಡುವುದರಿಂದ ದೇಹಕ್ಕೆ ಶಕ್ತಿ ಮತ್ತು ಮಾನಸಿಕ ಶಕ್ತಿ ಸಿಗುವುದಲ್ಲದೆ, ಮನಸ್ಸಿಗೆ ಶಾಂತಿಯೂ ಸಿಗುತ್ತದೆ. ಆದ್ದರಿಂದ, ಪ್ರತಿದಿನ ಯೋಗ ಮಾಡುವುದರಿಂದ, ವ್ಯಕ್ತಿಯು ಮಾನಸಿಕವಾಗಿ ಶಾಂತ ಮತ್ತು ಆರೋಗ್ಯವಾಗಿರುತ್ತಾನೆ

#ಯೋಗದ ಸಹಾಯದಿಂದ, ಒಬ್ಬ ವ್ಯಕ್ತಿಯು ಸರಿಯಾದದ್ದನ್ನು ಸರಿಪಡಿಸುವ ಶಕ್ತಿಯನ್ನು ಪಡೆಯುತ್ತಾನೆ ಮತ್ತು ಸರಿಯಾಗಿಲ್ಲದ ವಿಷಯಗಳನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಪಡೆಯುತ್ತಾನೆ.

#ಯೋಗವು ಧರ್ಮವಲ್ಲ, ಅದು ವಿಜ್ಞಾನ, ಯೋಗಕ್ಷೇಮದ ವಿಜ್ಞಾನ, ಯೌವ್ವನದ ವಿಜ್ಞಾನ, ದೇಹ, ಮನಸ್ಸು ಮತ್ತು ಆತ್ಮವನ್ನು ಸಂಯೋಜಿಸುವ ವಿಜ್ಞಾನ.

#ಬಹಳಷ್ಟು ಆಹಾರವನ್ನು ಸೇವಿಸುವ ಜನರು ಯೋಗವನ್ನು ಮಾಡಲು ಸಾಧ್ಯವಿಲ್ಲ, ಆಹಾರವನ್ನು ತಿನ್ನದವರು, ಯೋಗವು ಅವರಿಗೂ ಸಾಧ್ಯವಿಲ್ಲ. ಇದರ ಜೊತೆಯಲ್ಲಿ, ಹೆಚ್ಚು ನಿದ್ರೆ ಮಾಡುವವರಿಗೆ ಅಥವಾ ಹೆಚ್ಚು ಎಚ್ಚರಗೊಳ್ಳುವವರಿಗೆ ಯೋಗ ಮಾಡಲು ಸಾಧ್ಯವಿಲ್ಲ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group