ನವಜಾತ ಶಿಶುಗಳ ಏಚ್ಚರಿಕೆಯ ಕುರಿತು!

ನವಜಾತ ಶಿಶುಗಳಿಗೆ ತಾಯಿಯ ಎದೆ ಹಾಲು ಅಮೃತ ಇದ್ದಂತೆ. ಆದರೆ, ಕೆಲವು ತಾಯಂದಿರಲ್ಲಿ ಎದೆ ಹಾಲಿನ ಕೊರತೆ ಅನುಭವಿಸುತ್ತಾರೆ. ಅಂತಹವರು ಪರ್ಯಾಯವಾಗಿ ಬಾಟಲಿ ಹಾಲನ್ನು ನೀಡಬೇಕಾಗುತ್ತದೆ. ತಾಯಿಯ ಹಾಲಿನಲ್ಲಿ ಇರುವಷ್ಟು ಪೌಷ್ಟಿಕಾಂಶ ಬಾಟಲಿ ಹಾಲಿನಲ್ಲಿ ಇರುವುದಿಲ್ಲ. ಹಾಗಾಗಿ ಬಾಟಲಿ ಹಾಲವನ್ನು ಕುಡಿದ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗುವ ಸಾಧ್ಯತೆಗಳಿರುತ್ತವೆ. ಇನ್ನು ಕೆಲವು ತಾಯಂದಿರು ಕೆಲಸದ ಒತ್ತಡ ಹಾಗೂ ಸೌಂದರ್ಯದ ಪ್ರಜ್ಞೆಯಿಂದಾಗಿ ಮಕ್ಕಳಿಗೆ ಬಾಟಲಿ ಹಾಲು ನೀಡುತ್ತಿರುತ್ತಾರೆ. ಆದರೆ, ಬಾಟಲಿ ಹಾಲು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ. ನವಜಾತ ಶಿಶುವಿಗೆ ತಾಯಿಯ ಎದೆಹಾಲು ಕುಡಿಯುವುದು ತಿಳಿದಿರುವುದಿಲ್ಲ. ನಿಧಾನವಾಗಿ ಕಲಿಯುತ್ತದೆ. ಆದರ ಕಲಿಕೆ ಹಾಗೂ ಹಸಿವಿನ ಅಗತ್ಯತೆಗೆ ಅನುಗುಣವಾಗಿ ಹಾಲಿನ ಪ್ರಮಾಣವೂ ಹೆಚ್ಚಾಗುತ್ತದೆ. ತಾಯಿ ಸ್ವೀಕರಿಸಿದ ಆಹಾರಗಳೊಂದಿಗೆ ಮಗುವಿಗೆ ಸಂಪೂರ್ಣ ಆಹಾರ ದೊರೆಯುತ್ತದೆ. ಜೊತೆಗೆ ದೇಹದ ಅಂಗಾಂಗಗಳ ಬೆಳವಣಿಗೆಯು ಆರೋಗ್ಯಕರ ರೀತಿಯಲ್ಲಿ ಉಂಟಾಗುತ್ತದೆ. ಅಲ್ಲದೆ ಹಂತ ಹಂತವಾದ ಬೆಳವಣಿಗೆಯು ನೈಸರ್ಗಿಕವಾಗಿ ನಡೆಯುತ್ತದೆ. ಮಗು ತಾಯಿತ ಎದೆಹಾಲನ್ನು ಹೀರುವುದರಿಂದ ಶುಶ್ರೂಷೆಯ ಕ್ರಿಯೆಯು ಉತ್ತಮವಾಗುವುದು.
ಹಾಲುಣ್ಣುವ ಪ್ರಕ್ರಿಯೆಯಿಂದ ಮಗುವಿನ ದವಡೆಯು ಗಟ್ಟಿಯಾಗುವುದು. ಜೊತೆಗೆ ತನ್ನ ಶಕ್ತಿಯನ್ನು ಬಳಸುವುದರ ಮೂಲಕ ದೇಹದ ಶಕ್ತಿಯನ್ನು ವಿನಿಯೋಗಿಸುವುದು. ಜೊತೆಗೆ ಹಸಿವೆ ಅನುಗುಣವಾಗಿ ಆರೋಗ್ಯಕರವಾದ ಆಹಾರವನ್ನು ಪಡೆದುಕೊಳ್ಳಲು ಯಶಸ್ವಿಯಾಗುವುದು. ತಾಯಿಯ ದೇಹದಲ್ಲಿ ಇರುವ ಕೊಬ್ಬಿನಾಂಶಗಳನ್ನು ಹೀರಿಕೊಂಡು ಹಾಲು ಉತ್ಪಾದನೆಯ ಪ್ರಕ್ರಿಯೆ ನಡೆಯುತ್ತದೆ. ಮಗು ಹೆಚ್ಚೆಚ್ಚು ಹಾಲು ಕುಡಿದ ಹಾಗೆ ತಾಯಿಯ ದೇಹದಲ್ಲಿ ಇರುವ ಅನಗತ್ಯವಾದ ಕೊಬ್ಬು ಕರಗುವುದು. ಜೊತೆಗೆ ಸಡಿಲವಾದ ಅಂಗಾಂಗ ಮತ್ತು ನರ ವ್ಯವಸ್ಥೆ ಪುನರ್ ಯೌವನ ಪಡೆದುಕೊಳ್ಳುವುದು. ಜೊತೆಗೆ ಗರ್ಭಾವಸ್ಥೆಯ ಪೂರ್ವದಲ್ಲಿ ಇದ್ದ ದೈಹಿಕ ಆರೋಗ್ಯ ಸ್ಥಿತಿಯನ್ನು ತಾಯಿ ಪಡೆದುಕೊಳ್ಳಬಹುದಾಗಿದೆ.
- ಎಷ್ಟು ನಿಮಿಷ ಹಾಲುಣಿಸಬೇಕು…?
ಒಂದು ಮೊಲೆಯ ಹಾಲನ್ನು ಕನಿಷ್ಠ 15-20 ನಿಮಿಷ ಆದರೂ ಕೊಟ್ಟು ಆದ ಬಳಿಕ ಇನ್ನೊಂದು ಮೊಲೆಯ ಹಾಲನ್ನು ಕೊಡಲು ಆರಂಭಿಸಬೇಕು. ಒಂದೇ ಸಲ ಎರಡೂ ಮೊಲೆಗಳನ್ನು ಚೀಪಿಸಬೇಕು ಎಂದೇನಿಲ್ಲ. ಒಂದು ಸಲಕ್ಕೆ ಒಂದು ಮೊಲೆಯ ಹಾಲಿನಿಂದ ಮಗು ತೃಪ್ತಿಗೊಂಡರೆ, ಇನ್ನೊಂದು ಮೊಲೆಯ ಹಾಲನ್ನು ಮತ್ತೂಮ್ಮೆ ಹಾಲುಣಿಸುವಾಗ ಕೊಟ್ಟರಾಯಿತು. ಒಂದು ಮೊಲೆಯಿಂದ ಸಂಪೂರ್ಣವಾಗಿ ಹಾಲು ಕೊಟ್ಟ ಅನಂತರವೇ ಇನ್ನೊಂದು ಮೊಲೆಯನ್ನು ಚೀಪಿಸಬೇಕು.