ವಿಶ್ವದಲ್ಲಿ ಕೋಟ್ಯಂತರ ನಕ್ಷತ್ರ ಪುಂಜಗಳಿವೆ, ನಮ್ಮ ನಕ್ಷತ್ರ ಪುಂಜದಲ್ಲಿ ಕೋಟ್ಯಾಂತರ ಗ್ರಹಗಳಿವೆ. ಆದರೆ ಅವುಗಳಲ್ಲಿ ವಾಸಿಸಲು ಯೋಗ್ಯವಾದ ಗ್ರಹ ಭೂಮಿಯೊಂದೆ.ಜಾಗತಿಕ ತಾಪಮಾನ, ಮಾಲಿನ್ಯ, ಸಂಪನ್ಮೂಲಗಳ ಅತಿಯಾದ ಬಳಕೆಯಿಂದಾಗಿ ಭೂಮಿ ಇಂದು ವಿನಾಶದೆಡೆಗೆ ಸಾಗುತ್ತಿದೆ. ಇದಕ್ಕೆಲ್ಲ ಮಾನವನ ದುರಾಸೆಯೇ ಕಾರಣ. ಆಧುನಿಕತೆ ಬೆಳೆದಂತೆಲ್ಲ ಭೂಮಿ ಮೇಲೆ ನಿರಂತರವಾಗಿ ಶೋಷಣೆ ನಡೆಯುತ್ತಿದೆ
1.ಜೀವಿಗಳಿಗೆ ಮಾರಕವಾಗಿದೆ :
ಭೂಮಿಯು ಸುಮಾರು 8 ಮಿಲಿಯನ್ ಪ್ರಬೇಧದ ಜೀವಿಗಳು, ಮನುಷ್ಯರು ಮತ್ತು ಸಸ್ಯವರ್ಗವನ್ನು ಒಳಗೊಂಡಿದೆ. ಆದರೆ ಅವುಗಳಿಗೆ ಮಾನವ ನಿರ್ಮಿತ ಅಂಶಗಳು ಅಪಾಯವನ್ನು ತಂದೊಡ್ಡಿದೆ. ಭೂಮಿಯ ಮೇಲೆ ಹೆಚ್ಚುತ್ತಿರುವ ಸಂಪನ್ಮೂಲಗಳ ಮೇಲಿನ ಶೋಷಣೆ ಮತ್ತು ಮಾಲಿನ್ಯವು ಪರಿಸರಕ್ಕೆ ಹಲವು ಸಮಸ್ಯೆಗಳನ್ನು ಸೃಷ್ಟಿಸುವುದರಿಂದ ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೂ ಮಾರಕವಾಗಿದೆ.ಭೂಕಂಪ, ಪ್ರವಾಹ, ಬರಗಾಲಗಳಂತಹ ಅಪಾಯಕಾರಿ ಕ್ರಿಯೆಗಳು ಉದ್ಭವಿಸುತ್ತಿದೆ. ಇಂದು ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಪ್ರತಿವರ್ಷ 7 ಮಿಲಿಯನ್ ಜನರು ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಸಾವಿಗೀಡಾಗುತ್ತಿದ್ದಾರೆ.
2.ಜಾಗತಿಕ ತಾಪಮಾನ ಏರಿಕೆ
ಅರಣ್ಯನಾಶದಿಂದಾಗಿ ಇಂದು ಮಳೆಯ ಕೊರತೆ ಮತ್ತು ಜಾಗತಿಕ ತಾಪಮಾನ ಏರುತ್ತಲೇ ಇದೆ. ಅಧಿಕ ತಾಪಮಾನದಿಂದಾಗಿ ಭೂಮಿಯ ಮೇಲಿನ ಹಿಮ ರಾಶಿಯು ಕರಗಿ ಪ್ರವಾಹವಾಗುವುದರ ಜೊತೆಗೆ ಸಮುದ್ರದಲ್ಲಿ ನೀರಿನ ಪ್ರಮಾಣ ಏರಿಕೆಯಾಗಿ ಕರಾವಳಿ ತೀರ ಪ್ರದೇಶಗಳಿಗೆ ಅಪಾಯವನ್ನು ತಂದೊಡ್ಡಿದೆ. ಇಂದು ಭೂಮಿಯ ಮೇಲಾಗುತ್ತಿರುವ ಶೋಷಣೆಗಳನ್ನು ತಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಪ್ರತೀವರ್ಷ ಸುಮಾರು 90 ಬಿಲಿಯನ್ ಟನ್‍ಗಳಷ್ಟು ಸಂಪನ್ಮೂಲಗಳನ್ನು ಭೂಮಿಯಿಂದ ಹೊರತೆಗೆಯಲಾಗುತ್ತಿದೆ ಹಾಗೂ ಸುಮಾರು ಶೇ 70 ರಷ್ಟು ಸಂಪನ್ಮೂಲಗಳನ್ನು ಅತಿಯಾಗಿ ಬಳಸಲಾಗುತ್ತಿದೆ
3.ನೀರು ಮತ್ತು ಆಹಾರ ಸಮಸ್ಯೆಗಳು
ಪ್ರತಿ ವರ್ಷ 12 ಶತಕೋಟಿ ಟನ್‍ಗಳಷ್ಟು ತ್ಯಾಜ್ಯ ಭೂಮಿಯ ಮೇಲೆ ಸೃಷ್ಟಿಯಾಗುತ್ತಿದೆ. ಇದರಲ್ಲಿ 50 ಮಿಲಿಯನ್ ಟನ್‍ನಷ್ಟು ಇ-ತ್ಯಾಜ್ಯ ಸೇರಿದೆ. 2050ರ ವೇಳೆಗೆ ವಿಶ್ವದಲ್ಲಿನ ಜನಸಂಖ್ಯೆ ಆಹಾರಕ್ಕಾಗಿ ಹಲವು ಸಮಸ್ಯೆಗಳನ್ನು ಎದುರಿಸಲಿದೆ. 2070ರ ವೇಳೆಗೆ ಸಮುದ್ರದಲ್ಲಿನ ಹವಳದ ದಿಬ್ಬಗಳು ಸಂಪೂರ್ಣವಾಗಿ ಮಾಯವಾಗಲಿದೆ. ಮೇಲಿನ ಎಲ್ಲಾ ಸಮಸ್ಯೆಗಳು ಸೃಷ್ಟಿಯಾಗಿರುವುದು ಮನುಷ್ಯನ ದುರಾಸೆಯಿಂದಲೇ ಆಗಿವೆ. ಆದ್ದರಿಂದ ಭವಿಷ್ಯದಲ್ಲಿ ಕಾಡುವ ಪರಿಸರ ಸಮಸ್ಯೆಗಳನ್ನು ತಡೆಯಲು ಮನುಷ್ಯನಿಂದಲೇ ಸಾಧ್ಯವಾದ್ದರಿಂದ ನಾವೆಲ್ಲರು ಮಾಡಬೇಕಾದ ಕೆಲಸಗಳೆಂದರೆ- ಯಾವ ವಸ್ತುವನ್ನು ಪುನರ್ಬಳಕೆ ಮಾಡಲು ಸಾಧ್ಯವಿಲ್ಲವೋ ಆ ವಸ್ತುವನ್ನು ಬಳಸಲೇಬಾರದು