ನೋಣಿ ಹಣ್ಣಿನ ಔಷಧೀಯ ಗುಣಗಳು:

ಈ ಹಣ್ಣಿನಲ್ಲಿರುವ ವಿಟಮಿನ್ ಗಳನ್ನು ಸಹಸ್ರಾರು ವರ್ಷಗಳ ಹಿಂದೆಯೇ ಋಷಿ ಮುನಿಗಳು ಉಪಯೋಗಿಸುತ್ತಿದ್ದರು ಎಂದು ತಿಳಿದುಬಂದಿದೆ.ಈ ಹಣ್ಣಿನ ರಸದಲ್ಲಿ ವಿಟಮಿನ್ ಎ, ಬಿ, ಬಿ2, ಬಿ6, ಬಿ12, ಸಿ, ಇ, ಕ್ಯಾಲ್ಸಿಯಂ, ಐರನ್, ಮ್ಯಾಗ್ನಿಸಿಯಂ, ಪೋಲಿಕ್ ಆಸಿಡ್, ಪ್ಯಾಟೋಲೆನಿಕ್ ಆಸಿಡ್, ಫಸ್ ಫಿರೋಸ್, ಜಿಂಕ್ ಕಾಪಾರ್ 160*ವಿಟಮಿನ್ಸ್ ಪೈಟ್ರೊ ನ್ಯೂಟ್ರಿಶೀಯನ್ ಹೊಂದಿರುತ್ತದೆ. ಈ ಎಲ್ಲಾ ಅಂಶಗಳನ್ನು ಹೊಂದಿರುವ ನೋಣಿ ಹಣ್ಣು ದೇಹದಲ್ಲಿರುವ ಹೆಚ್ಚು ಪ್ರಮಾಣದ ಸಕ್ಕರೆ ಅಂಶವನ್ನು ಹತೋಟಿಗೆ ತರುತ್ತದೆ. ಹಾಗೂ ಹೃದ್ರೋಗಿಗಳಿಗೆ ವರದಾನವಾಗಿದೆ.
- ಔಷಧೀಯ ಗುಣಗಳು:
ನೋಣಿ ರಸವನ್ನು ಗಂಟು ನೋವು, ಕೈ ಮಡಚುವ ತೊಂದರೆ, ಕಾಲು ನೋವು ಮತ್ತು ಮಂಡಿ ನೋವಿಗೆ ಪರಿಹಾರವಾಗಿ ಉಪಯೋಗಿಸುತ್ತಿದ್ದಾರೆ.ಉಸಿರಾಟದ ಸಮಸ್ಯೆ ನಿವಾರಣೆಗೂ ಇದು ಉಪಯುಕ್ತ. ಮುರಿದ ಎಲುಬುಗಳನ್ನು ಮರುಜೋಡಿಸಲು ಹಾಗೂ ಡಯಾಬಿಟಿಸ್, ಏರು ರಕ್ತದೊತ್ತಡ ನಿಯಂತ್ರಣಕ್ಕೂ ಬಳಕೆಯಾಗುತ್ತಿದೆ. ಮಲಬದ್ಧತೆಯ ಸಮಸ್ಯೆ ಇರುವವರೂ ನೋಣಿ ರಸ ಸೇವಿಸಬಹುದು.ಅನೇಕ ವಿಶ್ವವಿದ್ಯಾನಿಲಯಗಳು ಸಂಶೋಧನೆ ಸಮೀಕ್ಷೆಗಳ ಪ್ರಕಾರ, ನೋಣಿಯ ರಸ ಆರೋಗ್ಯವರ್ಧಕ ಎಂಬುದು ದೃಢಪಟ್ಟಿದೆ. ಕೀಲು ನೋವು, ಹ್ರದಯ ಸಂಬಂಧ ಕಾಯಿಲೆ, ಖಿನ್ನತೆ ಹಾಗೂ ನಿದ್ರಾಹೀನತೆಯಿಂದ ತೊಂದರೆ ಅನುಭವಿಸುತ್ತಿರುವವರು ಇದರ ಮೊರೆಹೋಗಬಹುದು.
- ಸೇವಿಸುವ ಕ್ರಮ:
ನೋಣಿಯನ್ನು ಔಷಧಿಯಾಗಿ ಸೇವಿಸಬಯಸುವವರು ಮೊದಲ ಮೂರು ದಿನ ಬೆಳಗಿನ ಉಪಹಾರಕ್ಕೆ ಮುಂಚಿತವಾಗಿ ಒಂದು ಟೀ ಸ್ಪೂನ್ ಸೇವಿಸಬೇಕು. ಒಂದು ತಿಂಗಳ ಸೇವನೆಯ ನಂತರ ಉಪಹಾರಕ್ಕೆ ಮುಂಚೆ ಎರಡೂ ಸ್ಪೂನ್, ಮಧ್ಯಾಹ್ನ ಊಟಕ್ಕಿಂತ ಮುಂಚೆ ಎರಡು ಸ್ಪೂನ್ ರಸ ಸೇವಿಸಬೇಕು. ನೋಣಿಯ ಎಲೆಯೂ ಉಪಯುಕ್ತ. ಇದರ ಎಲೆಯಿಂದ ತಗೆದ ರಸ ಅನೇಕ ರೀತಿಯ ಚರ್ಮ ರೋಗಗಳನ್ನು ನಿವಾರಿಸಿದೆ. ಎಲೆಯ ಕಷಾಯ ಜ್ವರ ನಿವಾರಕ