ಮಳೆ ನೀರು ಸಂಗ್ರಹಣೆಯ ವಿವಿಧ ವಿಧಾನಗಳು

ಅಂತರ್ಜಲ ಮರುಪೂರಣ ಅಚನಾ ವಿಧಾನಗಳನ್ನು ಬಲಕೆಯಲ್ಲಿರುವ ಪದ್ಧತಿಯನುಸಾರ ನೇರ ಮತ್ತು ಬಳಸು ವಿಧಾನವೆಂದು ಎರಡು ಗುಂಪುಗಳಾಗಿ ವಿಂಗಡಿಸಬಹುದಾಗಿದೆ. ಬಳಕೆಯಲ್ಲಿರುವ ವಿವಿಧ ವಿಧಾನಗಳನ್ನು ಈ ಕೆಳಗೆ ವಿವರಿಸಲಾಗಿದೆ.
1. ತಡೆ ಆಣೆ (ಚೆಕ್ ಡ್ಯಾಂ):ಇದು ಆಳವಾದ ಹಳ್ಳಗಳಿಗೆ ಅಡ್ಡವಾಗಿ ಕಟ್ಟಿದ ಕಲ್ಲು, ಸಿಮೆಂಟ್, ಗಾರೆಯ ರಚನೆಯಾಗಿದ್ದು ಇದನ್ನು ಕೆಳಗಿನ ಉದ್ದೇಶಗಳಿಗಾಗಿ ಕಟ್ಟಲಾಗುತ್ತದೆ.ಉದ್ದೇಶಗಳು1. ಹರಿದು ಹೋಗುವ ನೀರನ್ನು ತಡೆಗಟ್ಟಿ ಭೂಮಿಯಲ್ಲಿ ಇಂಗುವಂತೆ ಮಾಡಿ ಭೂಮಿಯಲ್ಲಿಯ ಅಂತರ್ಜಲ ಪಾತಳಿಯನ್ನು ಹೆಚ್ಚಿಸುವುದು.2. ಹಳ್ಳಿಗಳಲ್ಲಿ ಹೆಚ್ಚು ದಿನಗಳವರೆಗೆ ದನ-ಕರುಗಳಿಗೆ ಕುಡಿಯಲು ಮತ್ತು ಗೃಹ ಬಳಕೆಗೆ ನೀರು ಲಭ್ಯವಾಗುವಂತೆ ಮಾಡುವುದು.3. ರಕ್ಷಣಾತ್ಮಕ ನೀರಾವರಿಗೆ ನೀರನ್ನು ಬಳಸಿ ಕೃಷಿ ಉತ್ಪಾದನೆ ಹೆಚ್ಚಾಗಲು ನೆರವಾಗುವುದು.
2. ನಾಲಾ ಬದು/ ಜಿನಗು ಕರೆ/ ನಾಲಾ ಬಂಡಿಂಗ್ಅಂತರ್ಜಲದ ಮರು ಪೂರಣದ ದಿಶೇಯಲ್ಲಿ ಒಂದು ಹೆಜ್ಜೆಯಾಗಿ ಬಸಿಯುವ ಹಳ್ಳದ ಮಣ್ಣಿನ ಒಡ್ಡುಗಳ ನಿರ್ಮಾಣ ಕಾರ್ಯವನ್ನು ಕೈಕೊಳ್ಳಲಾಗುತ್ತಿದೆ.
ನಾಲಾ ಬದುವಿನ ಉದ್ದೇಶಗಳೆಂದರೆ • ಸಂಗ್ರಹಿಸಿದ ನೀರು ಭೂಮಿಯಲ್ಲಿ ಇಂಗುವಂತೆ ಮಾಡಿ ಭೂಮಿಯಲ್ಲಿ ನೀರಿನ ಪ್ರಮಾಣ ಹೆಚ್ಚಿಗೆ ಮಾಡುವುದು• ಅಂತರ್ಜಲ ಅಸಮತೋಲನ ನಿವಾರಿಸುವುದು• ಈ ರೀತಿ ಬದುವನ್ನು ಕಟ್ಟುವ ಸ್ಥಳವು ಹೆಚ್ಚು ನೀರು ಇಂಗುವ ಮತ್ತು ಬಸಿಯುವ ಗುಣವುಳ್ಳದ್ದಾಗಿರಬೇಕು. ಒಟ್ಟಿನಲ್ಲಿ ಕೆಳಗಡೆಯ ಕ್ಷೇತ್ರವಾದಲ್ಲಿ ಬಾವಿಗಳು ಇರಬೇಕು ಹಾಗೂ ಒಡ್ಡು ನಿರ್ಮಿಸಬೇಕಾದ ಸ್ಥಳದಲ್ಲಿ ಎರಡೂ ಬದಿಗೂ ದಿನ್ನೆ ಇರತಕ್ಕದ್ದು
3. ಇಂಗು ಕೊಳಗಳು:ಇವುಗಳು ಹೆಚ್ಚು ಆಳವಿಲ್ಲದ ತಗ್ಗುಗಳಾಗಿದ್ದು, ಪ್ರಾಕೃತಿಕವಾಗಿ ಹರಿದು ಹೋಗುವಂತಹ ತೊರೆಗಳ ಹರಿವಿನ ಪ್ರದೇಶದಲ್ಲಿ ನಿರ್ಮಿಸಬಹುದಾಗಿದೆ. ಭೌಗೋಳಿಕವಾಗಿ ಸಮತಟ್ಟು ಪ್ರದೇಶ ಅಥವಾ ಕಿರು ಇಳಿಜಾರು ಪ್ರದೇಶದಲ್ಲಿ ಇಂಗು ಕೊಳಗಳನ್ನು ನಿರ್ಮಿಸಬಹುದಾಗಿದೆ. ಆಯ್ಕೆ ಮಾಡಲಾಗುವ ಸ್ಥಳಗಳು ಹೆಚ್ಚು ನೀರು ಇಂಗುವುದಕ್ಕೆ ಸಹಕರಿಸುವಂತಿರಬೇಕು ಹಾಗೂ ನೀರು ಹೆಚ್ಚಾಗಿ ಆವಿಯಾಗುವುದಕ್ಕೆ ಅವಕಾಶವಿರಬಾರದು. ಇಳಿಜಾರು ಪ್ರದೇಶಗಳಲ್ಲಿ ಇಂಗು ಕೊಳ ನಿರ್ಮಿಸಿದಲ್ಲಿ ಇಂಗಿದ ನೀರು ಇಳಿಜಾರಿನಲ್ಲಿ ಹರಿದು ಹೋಗಿ ಹೆಚ್ಚು ನೀರು ಇಂಗಲು ಅವಕಾಶ ಮಾಡಿಕೊಟ್ಟಂತಾಗುತ್ತದೆ
4. ತೊರೆ ಕಾಲುವೆ ವಿಧಾನ: (ಗುಂಡಿ ಮತ್ತು ಉಳುಮೆ ಸಾಲು ವಿಧಾನಗಳು)ಈ ವಿಧಾನದಲ್ಲಿ ನೀರು ಬಸಿಯುವಂತೆ ಮಾಡಲು ನೀರು ಶೇಖರಣಾ ಸ್ಥಳದ ವಿಸ್ತೀರ್ಣ ಹಾಗೂ ನೀರು ನಿಲ್ಲುವ ಕಾಲಮಿತಿ ಹೆಚ್ಚಾಗಿರಬೇಕಾಗುತ್ತದೆ. ಈ ವಿಧಾನವನ್ನು ಅಳವಡಿಸಿದ ಪ್ರದೇಶದ ಮೇಲ್ಹರಿವಿನಲ್ಲಿ ನೀರು ಶೇಖರಣಾ ವ್ಯವಸ್ಥೆಯಿದ್ದಲ್ಲಿ ತೊರೆಗಳ ಮೂಲಕ ನೀರು ನಿರಂತರವಾಗಿ ಹರಿದು ಬರುತ್ತಿದ್ದು, ಇಂಗುವಿಕೆಗೆ ಸಹಕಾರಿಯಾಗುತ್ತದೆ. ತೊರೆಯಲ್ಲಿ ಹೆಚ್ಚು ಛಿದ್ರತೆ ಹಾಗೂ ಶಿಥಿಲಯಿರುವ ಕಲ್ಲುಗಳಿದ್ದಲ್ಲಿ, ಇಂಗುವಿಕೆಗೆ ಬಹಳ ಅನುಕೂಲವಾಗುತ್ತದೆ. ತೊರೆಯ ಅಗಲವನ್ನು ಹೆಚ್ಚಿಸುವುದು, ಮಟ್ಟಮಾಡುವುದು, ಅಲ್ಲಲ್ಲಿ ತಗ್ಗು ತೆಗೆಯುವುದು, ಸಾಧ್ಯವಿರುವಡೆ ಚಿಕ್ಕ ಚೆಕ್ ಡ್ಯಾಂಗಳ ನಿರ್ಮಾಣ, ಮುಂತಾದವುಗಳಿಂದ ನೀರು ಶೇಖರಣೆಗೊಂಡು ಇಂಗುವಿಕೆಗೆ ಸಹಕಾರಿಯಾಗುತ್ತದೆ. ತೊರೆಯ ಇಕ್ಕೆಲಗಳಲ್ಲಿ ಗೋಡೆಗಳ ನಿರ್ಮಾಣದಿಂದ ನೀರು ಹರಡಿ ಹೋಗದಂತೆ ಮಾಡಿ ನಿಶ್ಚಲ ಮಾರ್ಗದಲ್ಲಿ ಹರಿದು ಹೋಗುವುದಕ್ಕೆ ಅವಕಾಶ ಕಲ್ಪಿಸಿದಂತಾಗುತ್ತದೆ.
5. ಕೃಷಿ ಹೊಂಡ:ಕೃಷಿ ಹೊಂಡಗಳನ್ನು ಜಮೀನಿನ ಅತಿ ಇಳಿಜಾರಿನ ಪ್ರದೇಶದಲ್ಲಿ ನಿರ್ಮಿಸಲಾಗುವುದು. ಸಾಮಾನ್ಯವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಒಂದು ಹೆಕ್ಟೇರ್ ಜಲಾನಯನ ಪ್ರದೇಶಕ್ಕೆ 150 ಘ.ಮೀ. ಸಾಮಥ್ರ್ಯದ ಕೃಷಿ ಹೊಂಡ ಬೇಕಾಗುವುದು. ಕೃಷಿ ಹೊಂಡದಲ್ಲಿಯ ನೀರನ್ನು ಬೆಳೆಗಳಿಗೆ ಜೀವರಕ್ಷಕ ನೀರನ್ನು ಪೂರೈಸಲು, ದನಕರುಗಳಿಗೆ ನೀರುಣಿಸಲು, ಉಳ್ಳಾಗಡ್ಡಿ, ಮೆಣಸಿನಕಾಯಿ ಅಥವಾ ಇನ್ನಿತರೇ ಸಸಿ ಮಡಿಗಳನ್ನು ಮಾಡಲು (ನಿರ್ವಹಿಸಲು) ಉಪಯೋಗಿಸಬಹುದು.