ಮೆಣಸಿನಕಾಯಿ ಬೆಳೆಯಲ್ಲಿ ಬರುವ ಕೀಟಗಳು ಮತ್ತು ರೋಗಗಳ ನಿಯಂತ್ರಣ

ಕೋಲಾರ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ಮೆಣಸಿನಕಾಯಿ ಬೆಳೆಯಲ್ಲಿ ಬರುವ ಕೀಟಗಳು ಮತ್ತು ರೋಗಗಳ ನಿಯಂತ್ರಣಗಳ ಬಗ್ಗೆ ಕೆಲವು ಔಷಧ ಹಾಗೂ ಅವುಗಳನ್ನು ಎಷ್ಟು ಪ್ರಮಾಣದಲ್ಲಿ ಗಿಡಗಳಿಗೆ ಉಪಯೋಗಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದೆ
ಮಾಹಿತಿ ಈ ಕೆಳಗಿನಂತಿದ್ದು, ಇವುಗಳು ಮೆಣಸಿನ ಕಾಯಿ ಬೆಳೆಯುವ ರೈತರಿಗೆ ಉಪಯುಕ್ತವಾಗಲಿದೆ.
ಕೀಟಗಳು: ಥ್ರಿಪ್ಸ್ ನಿಯಂತ್ರಣಕ್ಕಾಗಿ 2 ಗ್ರಾಂ ಡೈಮಿಥೋಯೇಟ್ 30 ಇ.ಸಿ. ಅಥವಾ 2 ಮಿ.ಲೀ.ಫಿಪ್ರೋನಿಲ್ ಅಥವಾ 1 ಗ್ರಾಂ ಅಸಿಫೇಟ್ 75 ಎಸ್.ಪಿ. ಅಥವಾ 1.5 ಮಿ.ಲೀ.ಮಾನೋಕ್ರೋಟಫಾಸ್ 36 ಡಬ್ಲ್ಯು.ಎಸ್.ಸಿ. ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆಮಾಡಬೇಕು.
ನುಸಿ ನಿಯಂತ್ರಣಕ್ಕಾಗಿ 2.5 ಮಿ.ಲೀ.ಡೈಕೊಫಾಲ್ 18.5 ಇ.ಸಿ. ಅಥವಾ 0.5 ಮಿ.ಲೀ.ಅಭಾಮೆಕ್ಟಿನ್ 1.9 ಇ.ಸಿ. ಅಥವಾ 1 ಮಿ.ಲೀ.ಪೆನ್ ಅಜಾಕ್ವಿನ್ 10 ಇ.ಸಿ. ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು.ಹೇನುಗಳ ನಿಯಂತ್ರಣಕ್ಕಾಗಿ 2 ಮಿ.ಲೀ. ಡೈಮಿಥೋಯೇಟ್ 30 ಇ.ಸಿ. ಅಥವಾ 1 ಮಿ.ಲೀ.ಫೆನ್ವಲರೇಟ್ 20 ಇ.ಸಿ. ಅಥವಾ 1 ಗ್ರಾಂ ಅಸಿಫೇಟ್ 75 ಎಸ್.ಪಿ. ಅಥವಾ 0.5 ಮಿ.ಲೀ. ಇಮಿಡಾಕ್ಲೋಪ್ರಿಡ್ 17.8.ಎಸ್.ಎಲ್. ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.ಕಾಯಿಕೊರಕ ಹುಳುವಿನ ನಿಯಂತ್ರಣಕ್ಕಾಗಿ 1 ಮಿ.ಲೀ. ಫೆನ್ವಲರೇಟ್ 20 ಇ.ಸಿ. ಅಥವಾ 0.75 ಮಿ.ಲೀ.ಇಂಡಾಕ್ಸೋಕಾರ್ಬ 14.5 ಎಸ್.ಸಿ. ಅಥವಾ 0.3 ಮಿ.ಲೀ.ಸ್ಪೈನೊಸಾಡ್ 2.5 ಎಸ್.ಸಿ. ಅಥವಾ 1 ಮಿ.ಲೀ.ಸೂಪರ್‌ಮೆಥ್ರಿನ್ 25 ಇ.ಸಿ. ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.
ರೋಗಗಳು: ಸಸಿ ಸಾಯುವ ರೋಗದ ನಿಯಂತ್ರಣಕ್ಕೆ ಬಿತ್ತನೆಯಾದ 3 ವಾರಗಳ ನಂತರ ಸಸಿ ಮಡಿಗಳಿಗೆ 1 ಮಿ.ಲೀ ಮಾನೊಕ್ರೊಟೋಫಾಸ್ ಅಥವಾ 1.7 ಮಿ.ಲೀ.ಡೈಮಿಥೋಯೇಟ್ 30 ಇ.ಸಿ. ಅನ್ನು 1.5 ಗ್ರಾಂ ಮ್ಯಾಂಕೋಜೆಬ್‌ದೊಂದಿಗೆ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು.
ನಾಟಿ ಮಾಡಿದ 7 ರಿಂದ 11 ವಾರಗಳ ನಂತರ ಬೆಳೆಗೆ 2 ಗ್ರಾಂ ಮ್ಯಾಂಕೋಜೆಬ್ ಅಥವಾ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಜೊತೆಗೆ 2 ಮಿ.ಲೀ.ಡೈಕೋಫಾಲ್ 30 ಇ.ಸಿ. ಅಥವಾ 1 ಮಿ.ಲೀ.ಮಾನೊಕ್ರೊಟೋಫಾಸ್ 30 ಎಸ್.ಎಲ್. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ದುಂಡಾಣು ಸೊರಗು ರೋಗದ ನಿಯಂತ್ರಣಕ್ಕೆ 0.5 ಗ್ರಾಂ ಸ್ಟ್ರೆಪ್ಟೋಸೈಕ್ಲೀನ್ ಮತ್ತು 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು.ಎಲೆ ಚುಕ್ಕೆ ರೋಗದ ನಿಯಂತ್ರಣಕ್ಕೆ ಪ್ರತಿ ಲೀಟರ್ ನೀರಿಗೆ 2 ಮಿ.ಲೀ.ಕ್ಲೋರೋಥಲೋನಿಲ್ ಅನ್ನು ಬೆರೆಸಿ ಸಿಂಪಡಿಸಬೇಕು..
ಎಲೆ ಮುರುಟು ರೋಗದ ನಿಯಂತ್ರಣಕ್ಕೆ 1.7 ಮಿ.ಲೀ.ಡೈಮಿಥೋಯೇಟ್ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸ್ಪ್ರೆ ಮಾಡಬೇಕು.,ಬೂದಿ ರೋಗ ಮತ್ತು ಚಿಬ್ಬು ರೋಗದ ನಿಯಂತ್ರಣಕ್ಕೆ 3 ಗ್ರಾಂ ಕಾರ್ಬನ್‌ಡೈಜಿಮ್ ಅಥವಾ 2 ಗ್ರಾಂ ಮ್ಯಾಂಕೋಜೆಬ್ ಅಥವಾ 2 ಮಿ.ಲೀ.ಕ್ಲೋರೋಥಲೋನಿಲ್ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು
ಹೆಚ್ಚಿನ ಮಾಹಿತಿಗಾಗಿ ಕೋಲಾರ ತೋಟಗಾರಿಕೆ ಮಾಹಿತಿ ಮತ್ತು ಸಲಹಾ