ಔಷಧ ತಯಾರಿಕೆಗೆ ಬಳಕೆಯಾಗುವ ಕೆಲವು ಸಸ್ಯಗಳು…

#ಅಲೋವೇರಾ: ಇದೊಂದು ಅದ್ಭುತ ಸಸ್ಯವೇ ಸರಿ. ಇದನ್ನು ಎಲ್ಲಿ ಬೇಕಾದರೂ ಸುಲಭವಾಗಿ ಬೆಳೆಯಬಹುದಾಗಿದೆ. ಇದಕ್ಕೆ ಸೂರ್ಯನ ತಾಪಮಾನ ಅಗತ್ಯ. ಮನೆಯಲ್ಲಿ ಬೆಳೆಸಲೇಬೇಕಾದ ಸಸ್ಯವಾಗಿದೆ ಇದು. ಸೊಳ್ಳೆಗಳ ನಿವಾರಣೆಗೆ ಇದು ಸಹಕಾರಿ. ಇದನ್ನು ಸೌಂದರ್ಯ ಅಂಶವಾಗಿ ಬಳಸುವುದರ ಜೊತೆಗೆ ಹೊಟ್ಟೆಗೂ ಸೇವಿಸಬಹುದಾಗಿದೆ.ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿರುವ ಈ ಸಸ್ಯವು ನೈಸರ್ಗಿಕ ಬೂಸ್ಟರ್ ಎಂದೆನಿಸಿದೆ.

#ಪುದೀನಾ: ವಿಶ್ವದ ಔಷಧಿಯ ಸಸ್ಯಗಳಲ್ಲಿ ಪುದೀನಾ ಕೂಡ ಒಂದು. ಯಾವುದೇ ವಾತಾವರಣಕ್ಕೂ ಹೊಂದಿಕೊಳ್ಳುವ ಸಸ್ಯವಾಗಿದೆ ಪುದೀನಾ ಮ್ಯಾಂಗನೀಸ್, ವಿಟಮಿನ್ ಎ, ವಿಟಮಿನ್ ಸಿ ಯನ್ನು ಇದು ಒಳಗೊಂಡಿದೆ. ಜಜ್ಜಿದ ಪುದೀನಾ ಎಲೆಗಳನ್ನು ಸ್ನಾಯು ಸೆಳೆತದಂತ ನೋವಿಗೆ ಉಪಶಮನವಾಗಿ ಬಳಸಿಕೊಳ್ಳಬಹುದಾಗಿದೆ. ಇದೊಂದು ಅದ್ವಿತೀಯ ಬಾಯಿ ಸ್ವಚ್ಛಕ ಕೂಡ ಹೌದು. ಹೊಟ್ಟೆ ಉಬ್ಬರ, ಕರುಳಿನ ಸಮಸ್ಯೆಗಳು, ಹೊಟ್ಟೆನೋವಿಗೆ ಇದು ಉತ್ತಮ ಔಷಧಿ ಎಂದೆನಿಸಿದೆ

#ಒಂದೆಲಗ: ಅಥವಾ ಬ್ರಾಹ್ಮಿಸ್ಮರಣೆಯನ್ನು ಉತ್ತಮಗೊಳಿಸುವ ಸಸ್ಯ ಇದಾಗಿದೆ. ಅಲ್ಸರ್, ಚರ್ಮ ಸಂಬಂಧಿ ರೋಗಗಳು, ಕ್ಯಾಪಿಲರಿ ಸೂಕ್ಷ್ಮತೆಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಯವ್ವೌನವನ್ನು ಕಾಪಾಡಿಕೊಳ್ಳಬೇಕೆಂಬ ಉದ್ದೇಶ ನಿಮ್ಮದಾಗಿದ್ದರೆ ಈ ಸಸ್ಯ ಅತ್ಯುತ್ತಮ ಎಂದೆನಿಸಿದೆ. ನೀವು ಇದನ್ನು ಸುಲಭವಾಗಿ ಮನೆಗಳಲ್ಲಿ ಬೆಳೆಸಿಕೊಳ್ಳಬಹುದಾಗಿದೆ. ನರಗಳು ಮತ್ತು ಮೆದುಳನ್ನು ಪುನರುಜ್ಜೀವನಗೊಳಿಸುವಲ್ಲಿ ಇದು ಸಹಕಾರಿಯಾಗಿದೆ.

#ಬೇವು: ಔಷಧೀಯ ಗುಣಗಳಿಂದ ಅನಾದಿ ಕಾಲದಿಂದಲೂ ಬೇವು ಮನ್ನಣೆಯನ್ನು ಗಳಸಿಕೊಂಡಿದೆ. ಮರದ ರೂಪದಲ್ಲಿ ಇದನ್ನು ಬೆಳೆಯಲಾಗುತ್ತದೆ. ಅಂತೆಯೇ ಮನೆಯಲ್ಲಿ ಚಟ್ಟಿಯಲ್ಲಿ ಇದನ್ನು ಬೆಳೆಸಿಕೊಳ್ಳಬಹುದಾಗಿದೆ. ದೇಹದ ಹೊರಗೆ ಮತ್ತು ಒಳಗೆ ಕೂಡ ಔಷಧೀಯ ರೂಪದಲ್ಲಿ ಈ ಸಸ್ಯ ಸಹಾಯ ಮಾಡುತ್ತದೆ. ಬೇವನ್ನು ಜಜ್ಜಿ ಸೇವಿಸಿದಲ್ಲಿ ಹೊಟ್ಟೆಯ ಹಲವಾರು ಬೇನೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಹಿರಿಯರಿಗೆ ಮತ್ತು ಕಿರಿಯರಿಗೆ ಇದು ಅತ್ಯಂತ ಉತ್ತಮವಾಗಿದೆ.

#ಲಿಂಬೆ: ಬಾಮ್ಮನೆಯಲ್ಲಿ ಬೆಳೆಸಬಹುದಾದ ಔಷಧೀಯ ಸಸ್ಯವಾಗಿದೆ ಇದು. ಇದು ಲಿಂಬೆಯ ಸುವಾಸನೆಯನ್ನು ಒಳಗೊಂಡಿದೆ ಆದ್ದರಿಂದ ಈ ಗಿಡಕ್ಕೆ ಈ ಹೆಸರು ಬಂದಿದೆ. ಈ ಎಲೆಗಳನ್ನು ಜಜ್ಜಿ ದೇಹಕ್ಕೆ ಹಚ್ಚುವುದರಿಂದ ಸೊಳ್ಳೆಗಳಿಂದ ರಕ್ಷಣೆಯನ್ನು ಪಡೆದುಕೊಳ್ಳಬಹುದಾಗಿದೆ. ತಲೆನೋವು, ಶೀತ, ಮೈಕೈನೋವು, ಖಿನ್ನತೆಗೆ ಇದು ಅತ್ಯುತ್ತಮ ರಕ್ಷಣೆಯನ್ನು ನೀಡುತ್ತದೆ.

#ಅಶ್ವಗಂಧ: ಪುರಾತನ ಔಷಧೀಯ ಸಸ್ಯವಾಗಿ ಅಶ್ವಗಂಧ ಪ್ರಸಿದ್ಧವಾಗಿದೆ. ಇದು ಒತ್ತಡ ನಿವಾರಕ ಹೌದು ಮತ್ತು ಔಷಧೀಯ ಗುಣಗಳಿಂದ ಸಂಪನ್ನವಾಗಿದೆ. ಸಂತಾನಕ್ಕಾಗಿ, ಗಾಯವನ್ನು ಗುಣಪಡಿಸಲು, ರೋಗನಿರೋಧಕ ಸಸ್ಯವಾಗಿ ಇದನ್ನು ಬೆಳೆಸಬಹುದಾಗಿದೆ. ಹೃದಯಕ್ಕೆ ಅತ್ಯುತ್ತಮ ಔಷಧವಾಗಿದೆ. ಕಣ್ಣಿನ ಆರೋಗ್ಯವನ್ನು ಇದು ಕಾಪಾಡುತ್ತದೆ. ಖಿನ್ನತೆ ಮತ್ತು ಆತಂಕವನ್ನು ಇದು ದೂರಮಾಡುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮತ್ತು ರಕ್ತದ ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಈ ಸಸ್ಯ ನೆರವಾಗಲಿದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group