ಜೂನ್ 05 ವಿಶ್ವ ಪರಿಸರ ದಿನ;

ಸಕಲ ಜೀವರಾಶಿಯ ದೃಷ್ಟಿಯಿಂದ ಪರಿಸರ ರಕ್ಷಣೆ ಆದ್ಯ ಕರ್ತವ್ಯವಾಗಿದೆ. ಪರಿಸರಕ್ಕೆ ಮುಖ್ಯವಾಗಿ ಹಾನಿಯಾಗುತ್ತಿರುವುದೇ ಮನುಷ್ಯರಿಂದ, ಮನುಷ್ಯ ಆ ತಪ್ಪನ್ನು ತಿದ್ದಿಕೊಳ್ಳಬೇಕಾಗಿದೆ. ಪರಿಸರ ರಕ್ಷಣೆಗೆ ಮನುಷ್ಯ ತುಂಬಾ ಶ್ರಮಿಸಬೇಕಾಗಿಲ್ಲ, ಅನಗ್ಯತವಾಗಿ ಅದನ್ನು ಹಾಳು ಮಾಡದಿರುವುದು ಹಾಗೂ ಪ್ರತೀಯೊಬ್ಬರು ಒಂದೊಂದು ಗಿಡ ನೆಟ್ಟು ಬೆಳೆಸಿದರೆ ಸಾಕು ಪರಿಸರ ಸಮೃದ್ಧಿಯಾಗಿರುತ್ತದೆ.ಅನೇಕ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಭೂಮಿಯನ್ನು ಸೇರುತ್ತಿವೆ, ಇವೆಲ್ಲಾ ಭೂಮಿಗೆ ಮಾರಕವಾಗಿದೆ, ಈ ಬಗ್ಗೆ ಪರಿಣಾಮಕಾರಿಯಾದ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬೇಕಾಗಿದೆ, ಅನಗ್ಯತ ತ್ಯಾಜ್ಯ ನದಿಗಳಿಗೆ ಸೇರದಂತೆ ಎಚ್ಚರವಹಿಸಬೇಕಾಗಿದೆ, ಆದಷ್ಟು ವಾಯು ಮಾಲಿನ್ಯ ಕಡಿಮೆ ಮಾಡಬೇಕು. ಗಿಡ ಮರಗಳು ಹೆಚ್ಚಾದರೆ ವಾಯು ಶುದ್ಧವಾಗುವುದು.ಪಟ್ಟಣಗಳಲ್ಲಿ, ಪ್ಲಾಸ್ಟಿಕ್, ನಿರುಪಯುಕ್ತ ವಸ್ತು, ಇತ್ಯಾದಿ, ದಿನೇ ದಿನೇ ಹೆಚ್ಚಾಗಿ ಸಂಗ್ರಹಣೆಯಾಗಿ, ಭೂಮಿಯಲ್ಲಿ ಸೇರಿಕೊಂಡು ಮಣ್ಣು ಮಲಿನಗೊಳ್ಳುತ್ತಿದೆ.ಇದರಿಂದ ಹೊರಬರುವ ವಿಷಕಾರಿ ವಸ್ತುಗಳಿಂದ ಪಾದರಸ, ಸೀಸ, ಕ್ಯಾಡ್ಮಿಯಂ, ಕ್ರೋಮಿಯಂ ಮುಂತಾದವುಗಳು ಜೀವಿ ಸಂಕುಲನ ಮತ್ತು ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಸರ್ಕಾರ ಮತ್ತು ಅನೇಕ ಸಂಸ್ಥೆಗಳು ಇವುಗಳನ್ನು ಉತ್ತಮ ರೀತಿಯ ವಿಲೇವಾರಿ ಮತ್ತು ಮರುಬಳಕೆ ಮಾಡಿ ಮನುಕುಲಕ್ಕೆ ತೊಂದರೆ ಬಾರದ ಹಾಗೆ ಕಸದಿಂದ ರಸ ಎಂಬಂತೆ ಉಪಯುಕ್ತ ವಸ್ತುಗಳನ್ನಾಗಿ ಮಾಡಲಾಗುತ್ತಿದೆ.ಇದರಿಂದ ಸ್ವಚ್ಚ ಭಾರತದ ನಿರ್ಮಾಣವಾಗುತ್ತಿದೆ.
2018ರಲ್ಲಿ ಪ್ಲಾಸ್ಟಿಕ್ ಮಾಲಿನ್ಯ ನಿವಾರಿಸಿ ಎಂಬ ಧ್ಯೇಯವನ್ನು ಹೊಂದಿತ್ತು… ಜನರು ಕೂಡ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿದ್ದರು.. ತರಕಾರಿ ತರಲು, ಸಾಮಾನುಗಳನ್ನು ತರಲು ಕೈ ಚೀಲ ಹಿಡಿದು ಹೋಗುತ್ತಿದ್ದರು. ಇದೀಗ ಕೋವಿಡ್ 19 ಬಂದಾಗಿನಿಂದ ಅಗ್ಯತವಾಗಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ಪ್ಲಾಸ್ಟಿಕ್ ಫೇಸ್ ಶೀಲ್ಡ್ ಬಳಸುವುದು, ಅಲ್ಲದೆ ಮಾಸ್ಕ್, ಗ್ಲೌಸ್ ಅಂಥ ತ್ಯಾಜ್ಯ ಕೂಡ ಹೆಚ್ಚಾಗಿದೆ ಸೂಕ್ತವಾದ ಪರ್ಯಾಯ ಮಾರ್ಗಗಳನ್ನು ಕಂಡು ಕೊಳ್ಳುವ ಮೂಲಕ ಈ ಭೂಮಿಯನ್ನು ರಕ್ಷಣೆ ಮಾಡಬೇಕಾಗಿದೆ.ಪ್ರತಿಯೊಬ್ಬರು ನಮ್ಮ ಸುತ್ತ-ಮುತ್ತ ಗಿಡ ನೆಟ್ಟು ಬೆಳೆಸೋಣ… ಆಗ ಇಡೀ ನಾಡೇ ಹಸಿರಾಗಿ ಇರುವುದು.