ಧ್ಯಾನದ ಬಗ್ಗೆ ಮಾಹಿತಿ ನೀಡುವ ನಾಲ್ಕು ಅತ್ಯುತ್ತಮ ಆಪ್‌ಗಳು!

ಇತ್ತಿಚಿನ ದಿನಗಳಲ್ಲಿ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದ ಮೇಲಂತೂ ಪ್ರತಿಯೊಂದಕ್ಕೂ ಕೆಲಸಕ್ಕೂ ಉಪಯೋಗವಾಗಬಲ್ಲ ಆಪ್‌ಗಳು ಇಂದು ಲಭ್ಯವಿವೆ. ಎಲ್ಲವೂ ಆಪ್ ಆಧಾರಿತವಾಗಿದ್ದು, ನೀವು ಕೆಲಸ ಮಾಡುವುದರಿಂದ ಹಿಡಿದು, ನೀವು ತಿನ್ನುವ ಆಹಾರವನ್ನು ಆರ್ಡರ್ ಮಾಡುವವರೆಗೂ ಕೂಡ ಅಪ್‌ಗಳಿವೆ. ಸದ್ಯ ಈ ಯಾಂತ್ರಿಕೃತ ಬದುಕಿನಲ್ಲಿ ಒತ್ತಡ ಅನ್ನೊದು ಎಲ್ಲರಿಗೂ ಸಹಜವಾಗಿದೆ. ಈ ಒತ್ತಡವನ್ನ ನಿವಾರಿಸಿಕೊಳ್ಳಬೇಕು ಅಂದ್ರೆ ಯೋಗ, ವ್ಯಾಯಾಮ, ಧ್ಯಾನಕ್ಕಿಂತ ಮತ್ತೊಂದು ಮದ್ದಿಲ್ಲ, ಆದ್ರೆ ನಮಗೆ ಯೋಗ, ಧ್ಯಾನ ಬರೋದಿಲ್ಲ ಅಂತಾ ಕೂರಬೇಡಿ. ಯಾಕಂದ್ರೆ ನಿಮಗೆ ಧ್ಯಾನವನ್ನು ಹೇಳಿಕೊಡುವ ಆಪ್‌ಗಳು ಇಂದು ಪ್ಲೇ ಸ್ಟೋರ್‌ನಲ್ಲಿ ಲಬ್ಯವಿವೆ.
#ಹೆಡ್‌ಸ್ಪೇಸ್ ಆಪ್:ಈ ಆಪ್ ಧ್ಯಾನ ಮತ್ತು ನಿದ್ರೆ ಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿಸುತ್ತದೆ. ನಿಮ್ಮ ಗೊಂಧಲದ ಮನಸ್ಸನ್ನು ಏಕಾಗ್ರತೆಗೆ ತರಲು, ಹಾಗೂ ನಿಮ್ಮಲ್ಲಿರುವ ಆತಂಕ ಮತ್ತು ಒತ್ತಡವನ್ನು ನಿರ್ವಹಿಸಲು ಹೆಡ್‌ಸ್ಪೇಸ್ ಅಪ್ಲಿಕೇಶನ್ ನಿಮಗೆ ಸಹಾಯ ಮಾಡುತ್ತದೆ. ಅಲ್ಲದೆ ಈ ಅಪ್ಲಿಕೇಶನ್ ನಿಮ್ಮಲ್ಲಿ ಪ್ರತಿನಿತ್ಯ ಆಗುತ್ತಿರುವ ಬದಲಾವಣೆಯ ಬಗ್ಗೆ ಮಾಹಿತಿಯನ್ನ ನೀಡುತ್ತಿರುತ್ತದೆ.ಅಲ್ಲದೆ ಈ ಅಪ್ಲಿಕೇಶನ್ ನಿದ್ರೆ, ಒತ್ತಡ, ಆತಂಕ, ಕೆಲಸ, ಟ್ರಾವೆಲ್,ಸ್ಪೋರ್ಟ್ಸ್, ಕಮ್ಯೂನಿಕೇಶನ್ ವಿಚಾರಗಳನ್ನ ಅರಿಯುವ ಧ್ಯಾನದ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತದೆ.
#ಸೆರೆನಿಟಿ ಆಪ್:ಇದು ಮನಸ್ಸಿನಲ್ಲಿ ಪ್ರಶಾಂತತೆಯನ್ನು ತಂದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಗೈಡ್ ಮಾಡುವ ಅತ್ಯುತ್ತಮ ಧ್ಯಾನದ ಆಪ್ ಆಗಿದೆ. ಈ ಅಪ್ಲಿಕೇಶನ್‌ನ ನಲ್ಲಿ ನಿಮಗೆ ಉಚಿತವಾಗಿ ಧ್ಯಾನದ ಬಗ್ಗೆ ಮಾಹಿತಿಯನ್ನ ನೀಡಲಾಗುತ್ತೆ. ಅಲ್ಲದೆ ಪ್ರತಿನಿತ್ಯವೂ ಒಂದೊಂದು ಸೂತ್ರವನ್ನು ಹೇಳಿಕೊಡಲಾಗುತ್ತೆ. ಜೊತೆಗೆ ಅಪ್ಲಿಕೇಶನ್ ಟ್ರ್ಯಾಕ್ ಮಾಡಲು ದೈನಂದಿನ ಸೂಚನೆಗಳನ್ನ ನೀಡಲಿದೆ. ಇದರಿಂದ ನಿಮ್ಮ ಮನಸ್ಸಿನಲ್ಲಿ ಕಾಡುವ ಕೆಲ ಆತಂಕಗಳಿಗೆ ಪರಿಹಾರ ಸಿಗಲಿದೆ.
#ಡೀಪ್ ಮೇಡಿಟೇಶನ್ ಆಪ್:ಈ ಆಪ್ ಹೆಸರೇ ಸೂಚಿಸುವಂತೆ ದೀರ್ಘವಾದ ದ್ಯಾನ, ವಿಶ್ರಾಂತಿ ಮತ್ತು ನಿದ್ರೆಯ ಬಗ್ಗೆ ಕುರಿತು ಮಾಹಿತಿ ನೀಡುವ ಆಪ್ ಆಗಿದೆ. ಈ ಅಪ್ಲಿಕೇಶನ್ ನಲ್ಲಿ ಧ್ಯಾನಕ್ಕೆ ಸಂಬಂಧಿಸಿದ 15 ರೀತಿಯ ಧ್ಯಾನಗಳು ಮತ್ತು ಉಸಿರಾಟ, ವಿಶ್ರಾಂತಿ ಮತ್ತು ಕ್ಲಾಸಿಕ್ ಸೆಷನ್‌ಗಳ ಕುರಿತ ಮಾಹಿತಿ ಸಿಗಲಿದೆ. ಈ ಧ್ಯಾನಗಳಿಂದ ನಿಮಗೆ ಆತಂಕವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಪ್ಯಾನಿಕ್ ಅಟ್ಯಾಕ್‌ಗಳನ್ನು ಮಿವಾರಿಸುವಲ್ಲಿ ಮತ್ತು ಒತ್ತಡವನ್ನು ನಿಯಂತ್ರಣದಲ್ಲಿಡಲು ಇದು ಸಹಾಯ ಮಾಡುತ್ತದೆ.
#ಮೇಡಿಟೇಶನ್ ಮ್ಯೂಸಿಕ್:ಈ ಅಪ್ಲಿಕೇಶನ್‌ನಲ್ಲಿ ಧ್ಯಾನಕ್ಕಾಗಿ ಉತ್ತಮ ಗುಣಮಟ್ಟದ ಸಂಗೀತವನ್ನ ಕೇಳಬಹುದು. ಅಲ್ಲದೆ ಧ್ಯಾಣದ ಸಂಧರ್ಭದಲ್ಲಿ ಮ್ಯೂಸಿಕ್ ಅನ್ನು ನಿಯಂತ್ರಿಸಬಲ್ಲ ನಿಗಙಧಿತ ಟೈಮರ್ ಅನ್ನು ಸಹ ನೀಡಲಾಗಿದೆ. ಇದರಲ್ಲಿ ಕೇವಲ ಟ್ಯಾಪ್ ಮಾಡುವ ಮೂಲಕವೇ ಸಂಗೀತಕ್ಕೆ ಸಂಬಂಧಿಸಿದ ಮ್ಯೂಸಿಕ್ ಹಾಗೂ ಮಾಹಿತಿಯನ್ನು ಕೇಳಬಹುದಾಗಿದೆ. ಇದು ಡಾರ್ಕ್ ಮೋಡ್‌ನಲ್ಲಿ ಬರುವ ಫ್ರೀ ಅಪ್ಲಿಕೇಶನ್ ಆಗಿದೆ.