ಇಂದು ವಿಶ್ವ ಬೈಸಿಕಲ್ ದಿನ:

ಇಂದು ವಿಶ್ವ ಬೈಸಿಕಲ್ ದಿನ ಉತ್ತಮ ಆರೋಗ್ಯಕ್ಕಾಗಿ ಸೈಕ್ಲಿಂಗ್ ಪ್ರಮುಖ ಪಾತ್ರ ವಹಿಸಲಿದೆ. ಪ್ರತಿ ದಿನವೂ ಇಂಧನ ದರ ಹೆಚ್ಚಾಗುತ್ತಲೆ ಇದ್ದು ಜನಸಾಮಾನ್ಯರ ಮೆಲೆ ಭಾರಿ ಹೊಡೆತ ಬಿದ್ದಿದೆ ಕರೋನಾದಂತಹ ಸಂಕಷ್ಟದ ಸಮಯದಲ್ಲಿ ತಮ್ಮವಾಹನಗಳನ್ನು ಬಳಸುವುದೆ ಕಷ್ಟವಾಗಿದೆ.ದೆಶದ ಹಲವು ನಗರಗಳಲ್ಲಿ ಇಂಧನ 100 ರೂ ದಾಟಿದೆ ಬೆಂಗಳೂರಲ್ಲಿ ಸೆಂಚುರಿಗೆ ಇನ್ನೂ 3 ರೂ ಬಾಕಿ ಇದೆ ಇನ್ನು ಕೆಲವೆ ದಿನಗಳಲ್ಲಿ ಸೆಂಚುರಿ ಭಾರಿಸಲಿದೆ. ಈಗಾಗಲೆ ಕೆಲ ವಾಹನ ಸವಾರರು ತಮ್ಮ ವಾಹನಗಳನ್ನು ಮೂಲೆಗೆ ತಳ್ಳಿ ವಿದ್ಯುತ್ ಚಾಲಿತ ವಾಹನಗಳನ್ನು ಖರಿದಿಸಿದ್ದಾರೆ. ಆದರೆ ಅದಕ್ಕೂ ವಿದ್ಯುತ್ ಎಂಬ ಶಕ್ತಿ ಬೆಕು ಆದರೆ ಬೈಸಿಕಲ್ ಗೆ ದೆಹದಲ್ಲಿ ಶಕ್ತಿ ಇದ್ದರೆ ಸಾಕು ಚಕ್ರಗಳು ಉರಳಿ ನಿಮ್ಮ ನಷ್ಟ ವನ್ನು ತಪ್ಪಿಸುವುದರ ಜೊತೆಗೆ ದೈಹಿಕ ಆರೋಗ್ಯಕ್ಕೆ ಸಹಕಾರಿ ಯಾಗಲಿದೆ.
ಕೆಲ ವಿದೇಶಗಳಲ್ಲಿ ಶ್ರಿಮಂತರು ಕಚೆರಿಗಳಿಗೆ ಸೈಕಲ್ ನಲ್ಲೆ ತೆರಳುತ್ತಾರೆ.ಆದ್ರೆ ನಮ್ಮ ರಾಜ್ಯದಲ್ಲಿ ಪ್ರತಿಷ್ಟೆಗೆ ಬಿದ್ದು ಸೈಕಲ್ ಬಳಸುತ್ತಿಲ್ಲ ಅಷ್ಟೇ ಮಕ್ಕಳು ಮಾತ್ರ ಬಳಸುವ ವಸ್ತು ವಾಗಿದೆ.ಆದರೆ ಇತ್ತಿಚಿನ ಮಾಯವಾಗಿದ್ದ ಸೈಕಲ್ ಗಳು ಬೆಂಗಳೂರಲ್ಲಿ ಕಂಡು ಬರುತ್ತಿವೆ. ಸೈಕಲ್ ತುಳಿಯುವುದರಿಂದ ಇರುವ ಲಾಭ ತಿಳಿದರೆ ಎಲ್ಲರೂ ಸೈಕಲ್ ಬಳಸುವುದರಲ್ಲಿ ಸಂದೆಹ ವಿಲ್ಲ.
ಸಕ್ಕರೆಕಾಯಿಲೆ.ಬಿಪಿ.ತೂಕ ಇಳಿಸುವುದು.ಕೈ ಕಾಲುಗಳಿಗೆ ಶಕ್ತಿ ಸೆರಿದಂತೆ ಹಲವಾರು ಪ್ರಯೊಜನ ಗಳು ಸೈಕ್ಲಿಂಗ್ ಮಾಡುವುದರಿಂದ ದೊರೆಯಲಿದೆ.ಪ್ರತಿ ದಿನ ಕೆಲಸ ಕಾರ್ಯ ಗಳಿಗೆ ಸೈಕಲ್ ಬಳಸಿದರೆ ಯಾವ ಕಾಯಿಲೆಯೂ ನಿಮ್ಮ ಬಳಿ ಸುಳಿಯುವುದಿಲ್ಲ.ಅಲ್ಲದೆ ಪರಿಸರ ಮಾಲಿನ್ಯ ಶೂನ್ಯವಾಗಿ ಬಿಡುತ್ತದೆ. ವಾಹನದಟ್ಟಣೆ ನಿಲುಗಡೆ ಸಮಸ್ಯೆ ನಿವಾರಣೆಯಾಗಲಿದೆ ಇಷ್ಟೋಂದು ಅನುಕೂಲ ವಿರುವ ಸೈಕಲ್ ಅನ್ನು ಯಾಕೆ ಎಲ್ಲರೂ ಬಳಸಬಾರದು ಈ ಉದ್ದೆಶದಿಂದಲೆ ವಿಶ್ವ ಸಂಸ್ಥೆ ಈ ದಿನ ವನ್ನು ವಿಶ್ವ ಸೈಕ್ಲಿಂಗ್ ದಿನ ವನ್ನಾಗಿ ಘೋಷಿಸಿದೆ. ಜನರು ಪ್ರತಿ ದಿ ಜಿಮ್ ಅಂತ ಹೊಗೊದು ತಪ್ಪುತ್ತದೆ ಕೆಲಸದ ಜೊತೆ ಆರೋಗ್ಯವೂ ವೃದ್ದಿಯಾಗುತ್ತದೆ.