ಇಂತಹ ಔಷದಿ ಸಸ್ಯಗಳನ್ನು ಮನೆಯಲ್ಲಿ ತಪ್ಪದೆ ಬೆಳೆಸಿ..

ಹಿಂದಿನ ಕಾಲದಲ್ಲಿ ಮನೆಯ ಹಿತ್ತಲಿನಲ್ಲಿಯೇ ತರಕಾರಿ ಹಣ್ಣು ಹಂಪಲುಗಳ ಜೊತೆಗೆ ಔಷಧೀಯ ಸಸ್ಯಗಳನ್ನು ಕೂಡ ಹಿರಿಯವರು ಬೆಳೆಸುತ್ತಿದ್ದರು. ಇದರಿಂದ ಮನೆಯ ಔಷಧೋಪಚಾರದ ಸಮಸ್ಯೆಯೂ ಬಗೆಹರಿಯುತ್ತಿತ್ತು ಜೊತೆಗೆ ಮನೆಗೂ ಕೀಟಗಳಿಂದ ಸಂರಕ್ಷಣೆ ದೊರೆಯುತ್ತಿತ್ತು. ಆದರೆ ಇಂದಿನ ಅಪಾರ್ಟ್‌ಮೆಂಟ್ ಯುಗದಲ್ಲಿ ಹಿತ್ತಲು ಎಂಬುದಕ್ಕೆ ಜಾಗವೇ ಇಲ್ಲದಂತಾಗಿದೆ. ಅದಾಗ್ಯೂ ಪಾಟ್‌ಗಳಲ್ಲಿ ಬೆಳೆಯಬಹುದಾದ ಔಷಧೀಯ ಸಸ್ಯಗಳನ್ನು ನಾವು ಇಂದಿನ ಲೇಖನದಲ್ಲಿ ನೀಡುತ್ತಿದ್ದೇವೆ….
#ತುಳಸಿ ಎಲೆಗಳನ್ನು ಜಜ್ಜಿ ಸೇವಿಸಿ:ಹಿಂದೂ ಧರ್ಮದಲ್ಲಿ ತುಳಸಿಗೆ ಹೆಚ್ಚಿನ ಸ್ಥಾನವಿದೆ. ಪವಿತ್ರ ಗಿಡವೆಂಬ ಮನ್ನಣೆ ಇದೆ. ತನ್ನ ಔಷಧೀಯ ಗುಣಗಳಿಂದ ಇದು ಸಸ್ಯ ಜಗತ್ತಿನ ರಾಣಿ ಎಂದೆನಿಸಿದೆ. ಇದನ್ನು ಹರ್ಬಲ್ ಚಹಾ ರೂಪದಲ್ಲಿ ಅಂತೆಯೇ ಹಸಿಯಾಗಿ ಕೂಡ ಸೇವಿಸಬಹುದು. ತುಳಸಿಯಲ್ಲಿ ಹಲವಾರು ವಿಧಗಳಿದ್ದು ರಾಮ ತುಳಸಿ, ವನ ತುಳಸಿ, ಕೃಷ್ಣ ತುಳಸಿ, ಕರ್ಪೂರ ತುಳಸಿ ಎಂಬವುಗಳಿವೆ. ದೇಹದ ಹೊರಗಿನ ಸಮಸ್ಯೆಗಳಿಗೆ ಕರ್ಪೂರ ತುಳಸಿಯನ್ನು ಬಳಸಬಹುದಾಗಿದೆ. ಕಿವಿ ನೋವಿಗೆ ಇಯರ್ ಡ್ರಾಪ್ಸ್‌ನಂತೆ ಇದು ಕೆಲಸ ಮಾಡುತ್ತದೆ. ಸೂಕ್ಷ್ಮಾಣುಜೀವಿಗಳ ವಿರುದ್ಧ ಹೋರಾಡುವ ಶಕ್ತಿಯನ್ನು ತುಳಸಿ ಪಡೆದುಕೊಂಡಿದ್ದು ಜ್ವರ, ಸಾಮಾನ್ಯ ಶೀತಕ್ಕೆ ಉತ್ತಮ ಔಷಧಿ ಎಂದೆನಿಸಿದೆ.ರಾಮ ತುಳಸಿಯು ತೀವ್ರ ಉಸಿರಾಟ ಸಮಸ್ಯೆಗಳಿಗೆ ಇದು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ತುಳಸಿಯ ರಸವನ್ನು ಶೀತ, ಜ್ವರ, ಬ್ರಾಂಕೈಟಿಸ್ ಮತ್ತು ಕೆಮ್ಮಿಗೆ ನೀಡಲಾಗುತ್ತದೆ. ಮಲೇರಿಯಾವನ್ನು ಗುಣಪಡಿಸಲು ಇದು ಸಹಕಾರಿಯಾಗಿದೆ. ಅಜೀರ್ಣ, ತಲೆನೋವು, ನಿದ್ರಾಹೀನತೆ ಮತ್ತು ಕಾಲಾರಾಗೆ ಇದು ಪರಿಣಾಮಕಾರಿ ಔಷಧಿಯಾಗಿದೆ. ಪ್ರತೀ ದಿನ ಮಿಲಿಯಗಟ್ಟಲೆ ಜನರು ಶುದ್ಧ ತಾಜಾ ತುಳಸಿಯನ್ನು ಹಾಗೆಯೇ ಸೇವಿಸುತ್ತಾರೆ.
#ಮೆಂತೆ:ಭಾರತದಲ್ಲಿ ಹೆಚ್ಚು ಸಾಮಾನ್ಯವಾಗಿರುವ ಸಾಂಬಾರು ಪದಾರ್ಥವಾಗಿದೆ ಮೆಂತ್ಯ. ಮೆಂತ್ಯ ಬೀಜ ಮತ್ತು ಎಲೆಗಳೆರಡರಲ್ಲೂ ಅತೀ ಹೆಚ್ಚು ಪೌಷ್ಟಿಕಾಂಶಗಳಿವೆ. ದೇಹಕ್ಕೆ ಶೀತಕಾರಿಯಾಗಿ ಇದು ಪರಿಣಮಿಸಿದೆ. ಮಡಿಕೆಗಳಲ್ಲಿ ಯಾವುದೇ ವಾತಾವರಣದಲ್ಲಿ ಇವುಗಳನ್ನು ಬೆಳೆಸಬಹುದಾಗಿದೆ. ತೂಕ ಹೆಚ್ಚಲು ಮತ್ತು ದೇಹದಾರ್ಢ್ಯದ ಸಮಯದಲ್ಲಿ ಇದನ್ನು ಸೇವಿಸುತ್ತಾರೆ. ಶ್ವಾಸಕೋಶದ ಕ್ಯಾನರ್‌ನಂತಹ ಅಪಾಯಕಾರಿ ಕಾಯಿಲೆಯನ್ನು ದೂರಮಾಡಲು ಮೆಂತೆ ಸಹಕಾರಿಯಾಗಿದೆ. ಜೀರ್ಣಕ್ರಿಯೆಯನ್ನು ಇದು ಉತ್ತಮಗೊಳಿಸುತ್ತದೆ. ಋತುಚಕ್ರದ ನೋವು ಮತ್ತು ಹೆರಿಗೆಯ ನೋವಿನ ಸಮಯದಲ್ಲಿ ಇದನ್ನು ನೋವು ಶಮನಕವಾಗಿ ಬಳಸಲಾಗುತ್ತದೆ. ಉರಿಯೂತ, ಹೊಟ್ಟೆಯ ಹುಣ್ಣು ಮತ್ತು ಕರುಳಿನ ಕಾಯಿಲೆಯನ್ನು ನಿವಾರಿಸುವಲ್ಲಿ ಮೆಂತೆ ಸಿದ್ಧಹಸ್ತ ಎಂದೆನಿಸಿದೆ. ಕೆಟ್ಟ ಉಸಿರಾಟಕ್ಕೂ ಇದು ಶಮನಕಾರಿಯಾಗಿದೆ. ಮನೆಯಲ್ಲಿ ಬೆಳೆಸಬಹುದಾದ ಸಸ್ಯ ಇದಾಗಿದೆ.
#ಲಿಂಬೆ ಹುಲ್ಲು:ಮನೆಯಲ್ಲೇ ಬೆಳೆಸಬಹುದಾದ ಇನ್ನೊಂದು ಸಸ್ಯವಾಗಿದೆ ಲಿಂಬೆ ಹುಲ್ಲು. ಸಣ್ಣ ಚಟ್ಟಿಯಲ್ಲಿ ಕೂಡ ಇದನ್ನು ಬೆಳೆಯಬಹುದಾಗಿದೆ. ಆರೋಗ್ಯಕಾರಿ ಪ್ರಯೋಜನಕಗಳನ್ನು ಈ ಹುಲ್ಲು ಒಳಗೊಂಡಿದೆ. ಚಹಾ, ಸಲಾಡ್, ಸೂಪ್ ಮತ್ತು ಎಲ್ಲಾ ಅಡಿಗೆ ಖಾದ್ಯಗಳಲ್ಲಿ ಇದನ್ನು ಬೆಳೆಸಬಹುದಾಗಿದೆ. ಲಿಂಬೆಯ ಅದ್ವಿತೀಯ ಸುವಾಸನೆಯನ್ನು ಈ ಹುಲ್ಲು ಹೊಂದಿದೆ.ನರ ಮತ್ತು ಒತ್ತಡ ಸಂಬಂಧಿ ಪರಿಸ್ಥಿತಿಗಳಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿ ಬಳಸಲ್ಪಡುತ್ತದೆ. ಹೆಚ್ಚಿನ ಜ್ವರದ ತಾಪವನ್ನು ಇದು ಕಡಿಮೆ ಮಾಡುತ್ತದೆ. ಉಸಿರಾಟಿ ಸಮಸ್ಯೆಗಳು ಮತ್ತು ಗಂಟಲು ನೋವಿಗೆ ಹೆಚ್ಚು ಪರಿಣಾಮಕಾರಿ ಔಷಧಿ ಎಂದೆನಿಸಿದೆ. ಕಿಬ್ಬೊಟ್ಟೆಯ ನೋವು, ತಲೆನೋವು, ಜಂಟಿ ನೋವು, ಸ್ನಾಯು ನೋವು, ಜೀರ್ಣಕ್ರಿಯೆ ಸಮಸ್ಯೆ, ಸ್ನಾಯು ಸೆಳೆತ, ಹೊಟ್ಟೆನೋವಿಗೆ ಪರಿಣಾಮಕಾರಿ ಎಂದೆನಿಸಿದೆ.