ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ?

ಕಾಮಧೇನು ಎಂದು ಕರೆಯಲ್ಪಡುವಂತಹ ದನದ ಹಾಲು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹಿಂದಿನಿಂದಲೂ ನಾವು ಕೇಳುತ್ತಿರುವಂತಹ ಮಾತು. ಹಾಲಿನಲ್ಲಿರುವಂತಹ ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಇದು ನಮ್ಮ ಆರೋಗ್ಯವನ್ನು ಸದಾ ಕಾಪಾಡುವುದು.
#ರಾತ್ರಿ ಮಲಗುವ ಮೊದಲು ಹಾಲಿನ ಸೇವನೆ:ಭಾರತೀಯರು ಸಾವಿರಾರು ವರ್ಷಗಳಿಂದಲೂ ನಂಬಿಕೊಂಡು ಬಂದಿರುವಂತಹ ಆಯುರ್ವೇದದ ಪ್ರಕಾರ ರಾತ್ರಿ ವೇಳೆ ಒಂದು ಲೋಟ ಬಿಸಿ ಹಾಲು ಕುಡಿದರೆ ಒಳ್ಳೆಯ ನಿದ್ರೆ ಬರುವುದು. ವಸಂತ್ ಲಾಡ್ ಎಂಬವರು ಬರೆದಿರುವ ಆಯುರ್ವೇದಿಕ್ ಮನೆಮದ್ದು ಎನ್ನುವ ಪುಸ್ತಕದಲ್ಲಿ ಹೀಗೆ ಬರೆದಿರುವರು “ಒಂದು ಲೋಟ ಬಿಸಿ ಹಾಲಿಗೆ ಶುಂಠಿ, ಏಲಕ್ಕಿ ಮತ್ತು ಅರಶಿನ ಹಾಕಿ ಕುಡಿಯಲು ಮರೆಯಬೇಡಿ. ರಾತ್ರಿ ಮಲಗುವ ಮೊದಲು ಬಿಸಿ ಹಾಲು ಕುಡಿದರೆ ಅದರಿಂದ ನಿದ್ರೆಯು ಬರುವುದು. ಆಯುರ್ವೇದದ ಪ್ರಕಾರ ಹಾಲು ಶುಕ್ರ ಧಾತುವನ್ನು ಪೋಷಿಸುತ್ತದೆ. ಇದು ದೇಹದ ಸಂತಾನೋತ್ಪತ್ತಿಯ ಅಂಗಾಂಶವಿದೆ.
#ಹಾಲಿನಲ್ಲಿರುವ ಕ್ಯಾಲ್ಸಿಯಂ: ಹಾಲಿನಲ್ಲಿರುವಂತಹ ಅಮಿನೋ ಆಮ್ಲವನ್ನು ಟ್ರೈಪ್ಟೊಫಾನ್ ಎಂದು ಕರೆಯಲಾಗುತ್ತದೆ. ಇದು ಒಳ್ಳೆಯ ನಿದ್ರೆಗೆ ತುಂಬಾ ಸಹಕಾರಿ. ಇದರಲ್ಲಿ ಇರುವಂತಹ ಮೆಲಟೊನಿನ್ ಎನ್ನುವ ಅಂಶವು ನಿದ್ರೆ ಹಾಗೂ ಎದ್ದೇಳುವ ನಿಯಂತ್ರಿಸುವುದು. ಹಾಲಿನಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಇರುವ ಕಾರಣದಿಂದಾಗಿ ಇದು ಮೂಳೆಗಳ ಆರೋಗ್ಯ ಕಾಪಾಡಲು ಅತೀ ಅಗತ್ಯವಾಗಿದೆ. ರಾತ್ರಿ ವೇಳೆ ದೈಹಿಕ ಚಟುವಟಿಕೆಯು ಕಡಿಮೆ ಇರುವ ಕಾರಣದಿಂದಾಗಿ ಕ್ಯಾಲ್ಸಿಯಂ ಹೀರುವಿಕೆ ಕೂಡ ಸರಿಯಾಗಿ ಆಗುವುದು.
#ಮಲಬದ್ಧತೆ ಇರುವವರಿಗೆ: ಮಲಬದ್ಧತೆ ಹಾಗೂ ಅನಿಯಮಿತ ತಿನ್ನುವ ಅಭ್ಯಾಸ ಇರುವಂತಹ ವ್ಯಕ್ತಿಗಳಿಗೆ ನಾನು ಹಾಲನ್ನು ಸೇವಿಸಲು ಸಲಹೆ ನೀಡುತ್ತೇನೆ. ಹಾಲಿನಲ್ಲಿ ಹೀರಿಕೊಳ್ಳುವ ಮತ್ತು ಹೀರಿಕೊಳ್ಳದ ನಾರಿನಾಂಶವಿದೆ. ಹೀರಿಕೊಳ್ಳುವ ನಾರಿನಾಂಶವು ಸಣ್ಣ ಮಟ್ಟದಲ್ಲಿ ಬೇಕಾಗಿದೆ. ಇದು ಸಕ್ಕರೆ ಹಾಗೂ ಕೊಬ್ಬಿನೊಂದಿಗೆ ಸೇರಿಕೊಂಡು ಜೀರ್ಣಕ್ರಿಯೆ ನಿಧಾನವಾಗಿಸುವುದು. ಮಲಬದ್ಧತೆ ಇರುವವರಿಗೆ ಹಾಲು ಅತಿ ಪರಿಣಾಮಕಾರಿ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಡುತ್ತಾರೆ
#ರಾತ್ರಿ ವೇಳೆ ಹಾಲನ್ನು ಯಾಕೆ ಸೇವಿಸಬಾರದು
ಮಲಬದ್ಧತೆ ಹಾಗೂ ಅನಿಯಮಿತ ತಿನ್ನುವ ಅಭ್ಯಾಸ ಇಲ್ಲದೆ ಇರುವಂತಹವರಿಗೆ ವೈದ್ಯರು ರಾತ್ರಿ ವೇಳೆ ಹಾಲು ಕುಡಿಯಲು ಸಲಹೆ ಮಾಡುವುದಿಲ್ಲ. ಹಾಲು ಒಂದು ಸಂಪೂರ್ಣ ಊಟವೆಂದು ಪರಿಗಣಿಸಲಾಗಿದೆ. ಇದರಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು ಇವೆ. ಹಾಲಿನಲ್ಲಿ ಲ್ಯಾಕ್ಟೋಸ್ ಮತ್ತು ಪ್ರೋಟೀನ್(ಕ್ಯಾಸಿನ್, ಅಲ್ಬಲಿನ್ ಮತ್ತು ಗ್ಲೋಬ್ಯುಲಿನ್ಸ್) ಇದೆ. ಡಿಸ್ಚಾರ್ರೈಡ್(ಸಕ್ಕರೆಯ ಒಂದು ವಿಧಾನ)ವಾಗಿರುವ ಲ್ಯಾಕ್ಟೋಸ್ ಇರುವ ಕಾರಣದಿಂದಾಗಿ ಇದನ್ನು ಮಲಗುವ ಮೊದಲು ಕುಡಿಯಲು ಹೇಳಲಾಗುವುದಿಲ್ಲ. ಯಾಕೆಂದರೆ ಇದು ನಿಮ್ಮ ದೇಹವು ಶಕ್ತಿ ಪಡೆಯುವುದನ್ನು ತಡೆಯುವುದು. ರಾತ್ರಿ ವೇಳೆ ಯಕೃತ್ ವಿಷಕಾರಿ ಅಂಶಗಳನ್ನು ಹೊರಹಾಕುವ ಕಾರ್ಯ ಮಾಡುವ ಕಾರಣದಿಂದ ತುಂಬಾ ಚಟುವಟಿಕೆಯಿಂದ ಇರುವುದು. ಹಾಲು ಸೇವನೆಯಿಂದ ಯಕೃತ್ ನ ಕ್ರಿಯೆಗೆ ಪರಿಣಾಮವಾಗುವುದು. ಇದರಿಂದಾಗಿ ನಮ್ಮ ದೇಹದಲ್ಲಿ ವಿಷಕಾರಿ ಅಂಶಗಳು ಉಳಿದುಕೊಳ್ಳುವಂತಹ ಸಾಧ್ಯತೆಗಳು ಹೆಚ್ಚಾಗುವುದು.