ಕೈಕಾಲಿನ ಸೌಂದರ್ಯಕ್ಕೆ ಇಲ್ಲಿವೆ ಕೆಲವು ಸಲಹೆ

ಮುಖದ ಸೌಂದರ್ಯ ಮಾತ್ರ ನೋಡಿಕೊಂಡರೆ ಸಾಲದು. ಕೈಕಾಲುಗಳು ಚಂದ ಇರಬೇಡವೆ? ಬೇಕಲ್ವ? ಮನೆಯಲ್ಲಿಯೇ ಹೆಚ್ಚು ಖರ್ಚಿಲ್ಲದ ಉಪಚಾರದಿಂದಸುಂದರವಾದ ಕೈಕಾಲುಗಳನ್ನು ಹೊಂದಬಹುದು. ಅಥವಾ ಕೈ ಕಾಲುಗಳನ್ನು ಸುಂದರವಾಗಿಸಬಹುದು.ಮೊದಲಿಗೆ ಕೈಯ ಸೌಂದರ್ಯದ ಬಗ್ಗೆ ನೋಡೋಣ :ನಿಮ್ಮ ಮನೆಗೆಲಸ ಮುಗಿದು ಆರಾಮಾಗಿ ಕೂತಾಗ ೨-೩ ಹನಿ ತೆಂಗಿನ ಎಣ್ಣೆಯನ್ನು ಕೈಗೆ ತೆಗೆದುಕೊಂಡು ಸುಮ್ಮನೆ ಕೈಗಳಿಗೆ ಮಸಾಜ್ ಮಾಡ್ತಾ ಇರಿ. ಆಮೇಲೆ ಉಗುರು ಬೆಚ್ಚಗಿನ ನೀರಿನಲ್ಲಿ ಕೈಯನ್ನು ತೊಳೆದುಕೊಳ್ಳಿ. ಅಥವಾ ಉಗುರುಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಹೊತ್ತು ಕೈಯನ್ನು ಬಿಟ್ಟು ನಂತರ ತೊಳೆದುಕೊಳ್ಳಿ. ಹೀಗೆ ದಿನಾ ಮಾಡ್ತಾ ಇರಿ. ಮಧ್ಯೆ ಒಮ್ಮೊಮ್ಮೆ ಸಾಧ್ಯವಾಗದಿದ್ದರೂ ಅಡ್ಡಿಯಿಲ್ಲ.ನಿಮ್ಮ ಕೈ ಮಿರುಗುತ್ತದೆ (glow)ತೆಂಗಿನ ಎಣ್ಣೆಯೇ ಆಗಬೇಕೆಂದಿಲ್ಲ. ಸ್ವಲ್ಪ ಹಾಲು ಅಥವಾ ಕೆನೆಯೂ ಆಗುತ್ತದೆ. ಸಾಧ್ಯವಾದಷ್ಟು ಮಸಾಜ್ ಮಾಡಬೇಕು. ಸ್ವಲ್ಪ ಅಕ್ಕಿ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಹಾಲು ಸೇರಿಸಿ ಚೆನ್ನಾಗಿ ಕಲಸಿ ಕೈಗಳಿಗೆ ಹಚ್ಚಿ, ಸಾಧ್ಯವಾದರೆ ಚೆನ್ನಾಗಿ ಮಸಾಜ್ ಮಾಡಿ, ಇಲ್ಲ ಪರವಾಗಿಲ್ಲ. ಹಚ್ಚಿ ಕಾಲು ಘಂಟೆ ಬಿಟ್ಟು ಚೆನ್ನಾಗಿ ತೊಳೆದುಕೊಳ್ಳಿ.ಇದು ವಾರಕ್ಕೊಮ್ಮೆ ಮಾಡಿದರೆ ಸಾಕು. ಇದರಿಂದ ಸನ್ ಟ್ಯಾನ್ ಹೋಗುತ್ತದೆ.ಗೋಧಿ ಮೈಬಣ್ಣ ಇದ್ದವರು ಸ್ವಲ್ಪ ಬಿಳಿಯಾಗುತ್ತಾರೆ. ನೀವು ಮುಖಕ್ಕೆ ಅಂದವಾಗಿರಲು ಏನೇನು ಹಚ್ಚುತ್ತೀರಿ ಆದನ್ನು ಕೈಗೂ ಹಚ್ಚಬಹುದು. ಮುಖದ ಚರ್ಮ ತುಂಬಾ ಸೂಕ್ಷ್ಮ. ಕೈಯ ಚರ್ಮ ಅಷ್ಟೊಂದು ಸೂಕ್ಷ್ಮ ಇಲ್ಲ. ಉಗುರುಗಳನ್ನು ನಿಯಮಿತವಾಗಿ ಕತ್ತರಿಸಿ.
ಇನ್ನು ಕಾಲಿನ ಚಂದ ನೋಡೋಣ. ಕಾಲಿಗೆ ತೆಂಗಿನ ಎಣ್ಣೆಯನ್ನು ಮಂಡಿಯ ತನಕ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ೨೦ ನಿಮಿಷ ಬಿಟ್ಟು ಒಂದು ಅಗಲವಾದ ಪಾತ್ರೆಯಲ್ಲಿ (ಟಬ್) ಉಗುರುಬೆಚ್ಚಗಿನ ನೀರು ಹಾಕಿ, ಆ ನೀರಿಗೆ ಒಂದು ಹಿಡಿ ಉಪ್ಪನ್ನು ಹಾಕಿ ಅದರಲ್ಲಿ ಕಾಲು ಬಿಟ್ಟು ಆರಾಮವಾಗಿ ಕೂತುಕೊಳ್ಳಿ.೨೦ ನಿಮಿಷದ ನಂತರ ಒಂದು ಸ್ಪಂಜಿನಿಂದ ಚೆನ್ನಾಗಿ ಉಜ್ಜಿ ಕಾಲನ್ನು ತೊಳೆದುಕೊಳ್ಳಿ. ಪಾದದಲ್ಲಿರುವ ಕೊಳೆಯನ್ನು ಉಜ್ಜಿ ತೆಗೆಯಿರಿ. ಬೆರಳ ಸಂದಿಯಲ್ಲಿ, ಉಗುರಿನ ಎಡೆಯಲ್ಲಿ ಇರುವ ಕೊಳೆ ಪೂರ್ತಿ ಹೋಗುತ್ತದೆ. ನಂತರ ನೀರಿನಿಂದ ಕಾಲು ತೆಗೆದು ಬಟ್ಟೆಯಿಂದ ನೀರಿನ ಪಸೆಯನ್ನು ಒತ್ತಿ ತೆಗೆಯಬೇಕು. ಒರೆಸಿ ತೆಗೆಯಬಾರದು. ಎಣ್ಣೆ ಪಸೆಯನ್ನೂ ತೆಗೆಯಬೇಕಿಲ್ಲ ನಿಮ್ಮ ಕೈಕಾಲುಗಳ ಬಗ್ಗೆ ನಿಮಗೇ ಹೆಮ್ಮೆಯೆನಿಸುತ್ತದೆ. ಘಂಟೆಗಟ್ಲೆ ಪಾರ್ಲರ್ ನಲ್ಲಿ ಕಾಯಬೇಕಿಲ್ಲ. ಹಣವೂ ಹೆಚ್ಚು ಖರ್ಚಾಗದು.ಎಣ್ಣೆ ತುಂಬಾ ಹಚ್ಚುವ ಅಗತ್ಯವಿಲ್ಲ.