ನುಗ್ಗೆ ಸೊಪ್ಪಿನ ಚಟ್ನಿ..;

ಅಧಿಕ ಪ್ರೊಟೀನ್ ಇರುವ ನುಗ್ಗೆ ಸೊಪ್ಪಿನ ಚಟ್ನಿಹಸಿರು ನುಗ್ಗೆ ಎಲೆಯಲ್ಲಿನ ಪ್ರೊಟೀನ್ ಪ್ರಮಾಣ ಭೂಮಿಯ ಮೇಲಿನ ಯಾವುದೇ ಹಸಿರೆಲೆಗಿಂತ ಅಧಿಕ. ಇದರಲ್ಲಿನ ಕಬ್ಬಿಣದ ಅಂಶ ಕೂಡ ಉಳಿದ ಹಸಿರೆಲೆಗಳಿಗೆ ಹೋಲಿಸಿದರೆ ಜಾಸ್ತಿ. ಕಬ್ಬಿಣದ ಅಂಶ ಕಡಿಮೆಯಾಗಿ ಆರೋಗ್ಯ ಏರುಪೇರಾದರೆ ನುಗ್ಗೆ ಸೊಪ್ಪಿನಿಂದ ತಯಾರಿಸಿದ ಆಹಾರ ಅತ್ಯುಪಯುಕ್ತ. ಈಗ ಚಟ್ನಿಯನ್ನು ಮಾಡುವ ವಿಧಾನವನ್ನು ತಿಳಿಯೋಣ.
ಬೇಕಾಗುವ ಪದಾರ್ಥಗಳು…
ನುಗ್ಗೆ ಸೊಪ್ಪು – 1 ಬಟ್ಟಲುಕೆಂಪು ಮೆಣಸಿನಕಾಯಿ – 6ಕರಿ ಮೆಣಸು – 4ಜೀರಿಗೆ – 1 ಚಮಚಹುಣಸೆಹಣ್ಣು – ಸಣ್ಣ ಉಂಡೆಯಷ್ಟುತೆಂಗಿನಕಾಯಿ ತುರಿ – ಅರ್ಧ
ಬಟ್ಟಲು ತಯಾರಿಸುವ ವಿಧಾನ ಒಂದು ಬೋಗುಣಿಯಲ್ಲಿ 1 ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಮೆಣಸಿನಕಾಯಿ, ಕರಿ ಮೆಣಸು, ಜೀರಿಗೆ, ನುಗ್ಗೆ ಸೊಪ್ಪು ಹಾಕಿ ಹುರಿಯಿರಿ.
ಇದಕ್ಕೆ ಉಪ್ಪು, ಹುಣಸೆಹಣ್ಣು, ತೆಂಗಿನಕಾಯಿ ತುರಿ ಬೆರೆಸಿ, ಸ್ವಲ್ಪವೇ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.