ಮುದ್ದು ಮುಖ ಕೆಡಿಸುವ ಮೊಡವೆಗೆ ಮನೆಮದ್ದು

ಮೊಡವೆಗಳಿಗೆ ಮದ್ದಿಲ್ಲ ಎಂದಲ್ಲ. ಕ್ಲಿನಿಕ್, ಮೆಡಿಕಲ್ ಶಾಪುಗಳಲ್ಲಿ ಇದಕ್ಕೆ ಬೇಕಾದಷ್ಟು ಕ್ರೀಮ್ ಗಳೂ ಸಿಗುತ್ತವೆ. ಗಾಯ ಮಾಯವಾದರೂ ಕಲೆ ಮಾಯವಾಗಲು ಎಂಬುದು ಕ್ಲಿನಿಕ್ ನಲ್ಲಿ ಮೊಡವೆಗೆ ಟ್ರೀಟ್ ಮೆಂಟ್ ಮಾಡಿಸಿಕೊಂಡಿರುವ ಅನೇಕ ಲಲನಾಮಣಿಗಳ ಕಂಪ್ಲೇಟ್. ಕೆಲವೊಮ್ಮೆ ಮೊಡವೆಗೆ ಇದ್ದಬದ್ದ ಕ್ರೀಮ್ ಗಳನ್ನೆಲ್ಲ ಹಚ್ಚಲು ಹೋಗಿ ಇನ್ಫೆಕ್ಷನ್ ಆಗುವುದೂ ಉಂಟು. ನಾಳೆ ಮದುವೆಯಿದೆ ಎನ್ನುವಾಗ ಹಿಂದಿನ ದಿನ ಏನೇನೋ ಕ್ರೀಮ್ ಹಚ್ಚಿ ಮುಖ ಕೆಡೆಸಿಕೊಂಡವರ ಕಥೆಗಳನ್ನು ನೀವು ಓದಿರುತ್ತೀರಿ.

ಮೊಡವೆಯಿಂದ ಉಂಟಾದ ಗಾಯದ ಕಲೆ ಮಾಯವಾಗಲು ನಮ್ಮ ಮನೆಯಲ್ಲಿಯೇ ಮದ್ದು ಮಾಡಬಹುದು. ನೈಸರ್ಗಿಕವಾಗಿ ದೊರಕುವ ಇಂತಹ ಮನೆಮದ್ದುಗಳಿಂದ ಸೈಡ್ ಎಫೆಕ್ಟ್ ಅಂತೂ ಇಲ್ಲವೇ ಇಲ್ಲ. ನಿಮ್ಮ ಮುಖದ ಕಾಂತಿ ಹೆಚ್ಚಿಸಲು ಇಲ್ಲೊಂದಿಷ್ಟು ಪರಿಹಾರಗಳಿವೆ. ಟ್ರೈಮಾಡಿ ನೋಡಿ.

1. ನಿಂಬೆ ರಸ : ಮೊಡವೆಯಿಂದ ಉಂಟಾಗುವ ಗಾಯ ಮಾಯವಾಗಿಸಲು ನಿಂಬೆ ರಸ ಅತ್ಯುತ್ತಮ ಆಯ್ಕೆ. ಇದನ್ನು ದಿನದಲ್ಲಿ ಎರಡು ಬಾರಿ ಮುಖಕ್ಕೆ ಹಚ್ಚಿಕೊಳ್ಳಿ. 10 ನಿಮಿಷ ಕಳೆದ ನಂತರ ಮುಖ ತೊಳೆದರೆ ಸಾಕು. ಇದರಿಂದ ಚರ್ಮದ ಕಲೆ ಮಾಯವಾಗುತ್ತದೆ. ಚರ್ಮ ಮೃದುವಾಗಿ ಕಾಂತಿ ಹೆಚ್ಚಾಗುತ್ತದೆ.

2. ಆಲಿವ್ ಎಣ್ಣೆ : ಇದರಿಂದ ಕೂಡ ಮುಖದ ಕಾಂತಿ ಹೆಚ್ಚಿಸುತ್ತದೆ. ಇದನ್ನು ದಿನಾ ಬಳಸಬಹುದು.

3. ಟೊಮೆಟೊ : ಟೊಮೆಟೊದಲ್ಲಿ ಹೇರಳವಾಗಿ ವಿಟಮಿನ್ ಎ ಇದ್ದು, ಮುಖದ ಜಿಡ್ಡಿನಂಶ ಕಡಿಮೆ ಮಾಡುತ್ತದೆ. ಟೊಮೆಟೊ ತುಂಡುಗಳನ್ನು ಮೊಡವೆಯಿಂದಾದ ಗಾಯದ ಮೇಲೆ ಇಡುವುದರಿಂದ ಮುಖದ ಅಂದ ಹೆಚ್ಚುತ್ತದೆ. ಮೊಡವೆ ಗಾಯಗಳೂ ಮಂಗಮಾಯವಾಗುತ್ತವೆ.

4. ಐಸ್ ಕ್ಯೂಬ್ : ಐಸ್ ಕ್ಯೂಬ್ ನ್ನು ಮೊಡವೆ ಗಾಯದ ಮೇಲೆ ನಯವಾಗಿ ತಿಕ್ಕಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ.

5. ಗಂಧದ ಪುಡಿ : ಮೊಡವೆ ಗಾಯದ ನೋವಿನ ಶಮನಕ್ಕೆ ಗಂಧದ ಪುಡಿ ಒಳ್ಳೆಯ ಔಷಧಿ. ಗಂಧದ ಪೇಸ್ಟನ್ನು ಚರ್ಮದ ಮೇಲೆ ಮತ್ತು ಮೊಡವೆ ಇತ್ಯಾದಿಗಳಿಂದ ಉಂಟಾದ ಗಾಯದ ಮೇಲೆ ಹಚ್ಚಿ. ಎಲ್ಲ ಇನ್ಫೆಕ್ಷನ್ ಗಳಿಂದಲೂ ಮುಕ್ತವಾಗುತ್ತದೆ. ಮನಸ್ಸಿಗೂ ಹಿತವೆನಿಸುತ್ತದೆ.

6. ಮೊಟ್ಟೆಯ ಲೋಳೆ : ಚರ್ಮದ ಆರೋಗ್ಯಕ್ಕೆ ಮೊಟ್ಟೆಯ ಬಿಳಿ ಲೋಳೆ ಭಾಗ ಬಳಸಿ. ಇದು ಮುಖವನ್ನು ಹೆಚ್ಚು ಬಿಗಿ ಗೊಳಿಸುತ್ತದೆ. ದಿನಕ್ಕೊಮ್ಮೆಯಾದರೂ ಮೊಡವೆಯಿಂದ ಗಾಯವಾಗಿರುವ ಭಾಗಕ್ಕೆ ಮೊಟ್ಟೆಯ ಬಿಳಿ ಭಾಗವನ್ನು ಹಚ್ಚಿರಿ ಕೆಲ ಹೊತ್ತುಬಿಟ್ಟು ತೊಳೆಯಿರಿ.

7. ಜೇನುರಸ : ಜೇನಿಗೆ ಹಲವು ಔಷಧೀಯ ಗುಣಗಳಿವೆ. ಇದು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಹೆಚ್ಚು ಕಾಂತಿಯುಕ್ತವಾಗಿಸಿ ಮುಖದ ಅಂದ ಹೆಚ್ಚಿಸುತ್ತದೆ.

8.ಮೊಟ್ಟೆ ಹಾಗೂ ಓಟ್‌ಮೀಲ್‌ನ ಮೊಡವೆ ಟ್ರೀಟ್‌ಮೆಂಟ್- ಒಂದು ಮೊಟ್ಟೆಯ ಬಿಳಿಲೋಳೆಯನ್ನು ತೆಗೆದು ಅದಕ್ಕೆ ಒಟ್‌ಮೀಲ್ ಪೌಡರ್ ಸೇರಿಸಿ ಪೇಸ್ಟ್ ಮಾಡಿ. ಅದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ 15 ನಿಮಿಷದ ನಂತರ ಉಗುರುಬಿಸಿ ನೀರಿನ್ಲಲಿ ತೊಳೆದು ನಂತರ ತಣ್ಣೀರಿನಲ್ಲಿ ತೊಳೆಯಿರಿ. ಇದು ಮೊಡವೆಯ ತೊಂದರೆಯಿಂದ ಬಳಲುತ್ತಿರುವವರಿಗೆ ಸೂಕ್ತ.

9.ಸಮಪ್ರಮಾಣದ ಪುದಿನಾ, ಬೇವು, ತಳಸಿ ಎಲೆಗಳನ್ನು ಒಣಗಿಸಿ ಪುಡಿಮಾಡಿ. ಈ ಪುಡಿಗೆ ಲಿಂಬೆರಸ ಹಾಗೂ ಎಳೆನೀರು ಸೇರಿಸಿ ಮುಖಕ್ಕೆ ಹಚ್ಚಿ ಅರ್ಧಗಂಟೆಯ ಬಳಿಕ ತೊಳೆಯಿರಿ. ವಾರಕ್ಕೆರಡು ಬಾರಿ ನಿಯಮಿತವಾಗಿ ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.

10.ಟೊಮ್ಯಾಟೋ, ನಿಂಬೆ, ದ್ರಾಕ್ಷಿ, ಕಿತ್ತಳೆ ಮುಂತಾದ ಹಣ್ಣುಗಳ ರಸ ಮುಖಕ್ಕೆ ತುಂಬಾ ಒಳ್ಳೆಯದು. ಈ ಹಣ್ಣುಗಳಲ್ಲಿರುವ ಸಿಟ್ರಿಕ್ ಆಸಿಡ್ ಮುಖದ ಚರ್ಮಕ್ಕೆ ಇತರ ಯಾವುದೇ ಕ್ರೀಮುಗಳಿಗಿಂತ ತುಂಬಾ ಉತ್ತಮ. ಈ ಹಣ್ಣುಗಳ ರಸಕ್ಕೆ ಜೇನುತುಪ್ಪ ಸ್ವಲ್ಪ ಸೇರಿಸಿ ಮುಖಕ್ಕೆ ಹಚ್ಚುತ್ತಾ ಬಂದಲ್ಲಿ ಮೊಡವೆ, ಕಪ್ಪು ಕಲೆ ತೊಡೆದುಹಾಕಿ ಹೊಸ ಹೊಳಪು ನೀಡುತ್ತದೆ.

11.ಬಿಸಿ ಹಾಲಿಗೆ ಒಂದು ತುಂಡು ಹತ್ತಿಯನ್ನು ಅದ್ದಿ ತೆಗೆದು ಮುಖವನ್ನು ಅದರಲ್ಲಿ ಒರೆಸಿ. ನಿಮಗೇ ಕಾಣದ ಎಷ್ಟೋ ಕೊಳೆಯನ್ನು ಇದು ತೆಗೆದುಹಾಕುತ್ತದೆ. ಹಾಗೂ ಮುಖದ ರಂದ್ರಗಳಿಗೂ ತಲುಪಿ ಸ್ವಚ್ಛಮಾಡುತ್ತದೆ.

12. ಮೆಣಸನ್ನು ನೀರಿನಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚುತ್ತಾ ಬಂದರೆ ಕೆಲವೇ ದಿನಗಳಲ್ಲಿ ಮೊಡವೆಗಳು ಮುಖದಲ್ಲಿ ಇಲ್ಲದಂತಾಗುವುದು..

13.ಕೊತ್ತಂಬರಿಸೊಪ್ಪಿನ ರಸದೊಂದಿಗೆ ನಿಂಬೆರಸ ಮಿಶ್ರ ಮಾಡಿ, ಕ್ರಮವಾಗಿ ಹಚ್ಚುತ್ತಿದ್ದರೆ ಮೊಡವೆ ಹಾಗೂ ಚರ್ಮದ ಮೇಲಿನ ಕಲೆಗಳು ಕಣ್ಮರೆ ಆಗುವುವು.

14. ಬಾದಾಮಿ ಬೀಜಗಳನ್ನು ಶುದ್ಧವಾದ ಹಸುವಿನ ಹಾಲಿನಲ್ಲಿ ಅರೆದು, ಹತ್ತಿಯೊಂದಿಗೆ ಆ ಮಿಶ್ರಣವನ್ನು ಅದ್ದಿ ಮೊಡವೆಯ ಮೇಲೆ ಸವರುತ್ತಿದ್ದರೆ ಮೊಡವೆಯ ಗುರುತು ಮಾಯವಾಗುವುದು.

15. ಸೇಬಿನ ಹಾಗೂ ನಿಂಬೆಯ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ನುಣ್ಣಗೆ ಅರೆದು ಪುಡಿ ಮಾಡಿ ಚೂರ್ಣವನ್ನು ಹಾಲಿನಲ್ಲಿ ಬೆರೆಸಿ ಮೊಡವೆಗಳಿಗೆ ಹಚ್ಚಿದರೆ ಶೀಘ್ಹ್ರದಲ್ಲಿಯೇ ಮೊಡವೆಯ ಗುಳ್ಳೆ ಕರಗುವುದು.

16. ಸೇಬಿನ ತಿರುಳನ್ನು ಅರೆದು ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ವಾರದ ಒಳಗಾಗಿ ಮೊಡವೆ ಗುಳ್ಳೆಗಳು ಮಾಯ ಆಗುವುವು. ಜೊತೆಗೆ ಮುಖ ಕಾಂತಿ ಹೆಚ್ಚುವುದು.

17. ಎಳೆನೀರಿನಲ್ಲಿ ಕೆಲವು ವಾರ ಮುಖ ತೊಳೆಯುತ್ತಿದ್ದರೆ ಮೊಡವೆಗಳು ಮಾಗುತ್ತವೆ. ಮುಖದ ಮೇಲೆ ಕಪ್ಪು ಕಲೆಗಳಿದ್ದರೆ ಮಾಯ ಆಗುವುವು. ಮುಖದ ಮೇಲೆ ಹೊಳಪು ಹೆಚ್ಚುವುದು.

18. ಕಿತ್ತಲೆ ಸಿಪ್ಪೆಯನ್ನು ಮುಖದಮೇಲೆ ಉಜ್ಜುತ್ತಿದ್ದರೆ ಅದರಿಂದ ಸುವಾಸನೆಯ ದ್ರವ ಹೊರಬಂದು ಮೊಡವೆ ಗುಳ್ಳೆಗಳು ಒಣಗುವುವು.

19. ನಿಂಬೇರಸದಲ್ಲಿ ದಾಲ್ಚಿನ್ನಿಯನ್ನು ತೇಯ್ದು ಮೊಡವೆಗಳಿಗೆ ಹಚ್ಚಿದರೆ ಬೇಗ ಒಣಗುವುವು.

20.. ಗರಿಕೆ ಹುಲ್ಲಿನ ರಸವನ್ನು ಮುಖದಮೇಲೆ ಲೇಪಿಸುವುದರಿಂದ ಮೊಡವೆಗಳು ಮಾಗುವುವು.

21. ಹಿಂಗನ್ನು ನೀರಿನಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚುತ್ತಿದ್ದರೂ ಸಹಾ ಮೊಡವೆ ಗುಳ್ಳೆಗಳು ಮುಖದ ಮೇಲೆ ಕಾಣದಂತಾಗುವುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group