ಎರಡು ಬಾಳೆಹಣ್ಣು 90 ನಿಮಿಷ ಕೆಲಸಮಾಡುವ ಶಕ್ತಿಯನ್ನು ನೀಡುತ್ತದೆ

ಬಾಳೆಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಂಶಗಳಾದ ಸುಕ್ರೀಸ್, ಫ್ರುಕ್ಟೋಸ್, ಮತ್ತು ಗ್ಲುಕೋಸ್ ಇವೆ. ಎರಡು ಬಾಳೆಹಣ್ಣು 90 ನಿಮಿಷ ಕೆಲಸಮಾಡುವ ಶಕ್ತಿಯನ್ನು ನೀಡುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.

* ತಲ್ಲಣ (ಡಿಪ್ರೆಶನ್) ಆದಾಗ ಬಾಳೆಹಣ್ಣು ಸೇವಿಸಿದರೆ ಒಳ್ಳೆಯದು.* ರಕ್ತಹೀನತೆಯಿಂದ ಬಳಲುವವರಿಗೆ ಬಾಳೆಹಣ್ಣು ಸೇವಿಸಿದರೆ ಉತ್ತಮ. ಇದರಲ್ಲಿ ಕಬ್ಬಿಣ ಅಂಶ ಹೆಚ್ಚಾಗಿರುವುದರಿಂದ ಹಿಮೋಗ್ಲೋಬಿನ್ ಉತ್ಪಾದಿಸಲು ಸಹಕಾರಿಯಾಗಿದೆ.* ಬ್ಲಡ್‍ಪ್ರೆಶರ್ ಇದ್ದವರಿಗೆ ಬಾಳೆಹಣ್ಣು ಒಳ್ಳೆಯದು. ಕಾರಣ ಇದರಲ್ಲಿ ಪೊಟ್ಯಶಿಯಮ್ ಹೆಚ್ಚಾಗಿದೆ, ಲವಣಾಂಶ ಕಡಿಮೆಯಾಗಿದೆ.

* ಮಿಡಲ್ ಎಸೆಕ್ಸ್‍ನ 200 ವಿದ್ಯಾರ್ಥಿಗಳಿಗೆ ಬಾಳೆ ಹಣ್ಣನ್ನು ಬ್ರೆಕ್‍ಫಾಸ್ಟ್, ಲಂಚ್ ಹಾಗೂ ಸಂಜೆಯ ತಿಂಡಿಯೊಡನೆ ಕೊಟ್ಟಾಗ ಅವರ ಬುದ್ಧಿಶಕ್ತಿಯಲ್ಲಿ ಸುಧಾರಣೆ ಕಂಡು ಬಂತಂತೆ.

* ಮಲಬದ್ಧತೆಗೆ ರೇಚಕ ಮಾತ್ರೆ ಕೊಡುವ ಬದಲು ಬಾಳೆಹಣ್ಣು ಕೊಡುವುದು ಹಿತಕರವಾಗಿದೆ.

*ಹ್ಯಾಂಗ್ ಓವರ್ ನಂತಹ ಉದಾಸೀನತೆಯ ಪ್ರಸಂಗಗಳಲ್ಲಿ ಬಾಳೆಹಣ್ಣಿನ ಮಿಲ್ಕ್‍ಶೇಕ್ ಹೆಚ್ಚು ಉಪಯುಕ್ತ ಎಂದು ಪ್ರಯೋಗಗಳಿಂದ ತಿಳಿದಿದೆ.

* ಎದೆಹುಳಿ ಸುಡುವಾಗ ಬಾಳೆಹಣ್ಣು ಉಪಶಮನ ತರುತ್ತದೆ.

* ಸೊಳ್ಳೆ ಕಡಿದಾಗ ಬಾಳೆಹಣ್ಣಿನ ಸಿಪ್ಪೆಯ ಒಳಭಾಗದಿಂದ ತಿಕ್ಕಿದರೆ ಬಾವು ಹಾಗೂ ತುರಿಕೆ ಕಡಿಮೆಯಾಗುತ್ತದೆ.

* ಆಸ್ಟ್ರಿಯಾದ ಒಂದು ಮಾನಸಶಾಸ್ತ್ರ ಸಂಶೋಧನಾ ಸಂಸ್ಥೆಯು 5000 ರೋಗಿಗಳನ್ನು ಪರೀಕ್ಷಿಸಿದಾಗ, ಸ್ಥೂಲಕಾಯರಿಗೆ ಹೆಚ್ಚು ಒತ್ತಡದ ಕೆಲಸವಿರುವದು ಗಮನಕ್ಕೆ ಬಂದಿತು. ಅಂಥವರಿಗೆ ಬಾಳೆಹಣ್ಣಿನ ಸೇವನೆಯಿಂದ ಲಾಭವಾದುದನ್ನು ಕಂಡರು.

* ಸಿಗರೇಟ್ ಅಭ್ಯಾಸವಿದ್ದವರಿಗೆ ಬಾಳೆಹಣ್ಣಿನ ಸೇವನೆಯಿಂದ ಅದನ್ನು ಕಡಿಮೆಗೊಳಿಸಲು ಸಹಾಯವಾಗಿದೆಯಂತೆ, ಇದಕ್ಕೆ ಈ ಹಣ್ಣಿನಲ್ಲಿರುವ ವಿಟಮಿನ್ ಬಿ-6, ಬಿ-12, ಪೊಟ್ಯಾಶಿಯಮ್, ಮೆಗ್ನೀಶಿಯಮ್ ಅಂಶಗಳೇ ಕಾರಣವೆನ್ನಲಾಗಿದೆ.

* ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಪ್ರಕಾರ ಸ್ಟ್ರೋಕ್‍ನಿಂದ ಸಾಯುವವರ ಸಂಖ್ಯೆಯಲ್ಲಿ ಪ್ರತಿಶತ 40ರಷ್ಟು ಕಡಿಮೆಗೊಳಿಸಲು ಬಾಳೆಯಹಣ್ಣಿನ ಸೇವನೆಯೇ ಕಾರಣ ಎನ್ನಲಾಗಿದೆ.

* ಮಂಗಗಳು ಸದಾ ಸುಖಿಯಾಗಿರುವುದಕ್ಕೆ ಬಾಳೆಯಹಣ್ಣಿನ ಸೇವನೆಯೇ ಕಾರಣವಂತೆ. (ಮಾನವರು ಇದರ ಮಹತ್ವ ಅರಿಯುವ ದಿನ ಬಂದಿವೆ)

* ಬಾಳೆಯ ಹಣ್ಣನ್ನು ಸೇಬು ಹಣ್ಣಿನೊಂದಿಗೆ ಹೋಲಿಸಿದರೆ, ಇದರಲ್ಲಿ ನಾಲ್ಕು ಪಟ್ಟು ಪ್ರೋಟೀನ್ ಇದೆ, ಎರಡು ಪಟ್ಟು ಕಾರ್ಬೋಹೈಡ್ರೇಟ್ಸ್ ಇವೆ, ಮೂರುಪಟ್ಟು ಫಾಸ್ಫರಸ್ ಇದೆ, ಐದು ಪಟ್ಟು ವಿಟಮಿನ್ ಎ ಹಾಗೂ ಕಬ್ಬಿಣಸತ್ವ ಇವೆ, ಎರಡುಪಟ್ಟು ಇತರ ವಿಟಮಿನ್ ಹಾಗೂ ಮಿನರಲ್ಸ್ ಇವೆ

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group