ಮೇ 31 ವಿಶ್ವ ತಂಬಾಕು ರಹಿತ ದಿನ;

ತಂಬಾಕು ಸೇವನೆಯ ಆರೋಗ್ಯ ಪರಿಣಾಮಗಳ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಭಾರತವು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು ನಡೆಸುತ್ತದೆ. ದೇಶವು ತನ್ನ ಗುರಿಯನ್ನು ಸಾಧಿಸಲು ಸಹಕಾರಿಯಾಗುವ ನೀತಿಗಳು ಮತ್ತು ಉಪಕ್ರಮಗಳನ್ನು ರೂಪಿಸಲು ಇದು ಸಹಾಯವಾಗುತ್ತದೆ
ಮೇ 31 ವಿಶ್ವ ತಂಬಾಕು ರಹಿತ ದಿನ. ತಂಬಾಕು ಸೇವನೆಯಿಂದ ಉಂಟಾಗುವ ಅಪಾಯದ ಬಗ್ಗೆ ಜಾಗೃತಿ ಮೂಡಿಸಿ, ಜನರು ತಂಬಾಕು ಚಟದಿಂದ ದೂರವಿರುವಂತೆ ಮಾಡುವ ಉದ್ದೇಶದಿಂದ ಈ ದಿನ ಆಚರಿಸಲಾಗುತ್ತಿದೆ.
ತಂಬಾಕು ಸಂಬಂಧಿತ ರೋಗಗಳಿಗೆ ನಿಯಂತ್ರಣ: ತಂಬಾಕು ಸೇವನೆಯು 2030ರ ವೇಳೆಗೆ ವಿಶ್ವಸಂಸ್ಥೆಯು ಅಳವಡಿಸಿಕೊಂಡ ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿಯನ್ನು ಸಾಧಿಸುವ ಪ್ರಯತ್ನಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಆದರೆ, 2030ರ ಹೊತ್ತಿಗೆ ತಂಬಾಕು-ಸಂಬಂಧಿತ ರೋಗಗಳಿಂದ ಸಾವನ್ನಪ್ಪುವವರ ಸಂಖ್ಯೆಯನ್ನು ಮೂರನೇ ಒಂದು ಭಾಗದಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ.
ತಂಬಾಕು ಸೇವನೆ, ಧೂಮಪಾನ ಅಭ್ಯಾಸ ಅದರ ಚಟ ಇರುವವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು ಮಾತ್ರವಲ್ಲ, ಮನೆಯವರನ್ನೂ ಸಂಕಷ್ಟಕ್ಕೆ ದೂಡುತ್ತದೆ. ತಂಬಾಕು ಚಟದಿಂದಾಗಿ ಅತೀ ಹೆಚ್ಚು ಕ್ಯಾನ್ಸರ್ ರೋಗ ಕಂಡು ಬರುತ್ತಿದೆ. ವ್ಯಕ್ತಿಗೆ ಕ್ಯಾನ್ಸರ್ ಬಂದ್ರೆ ಮನೆಯವರು ಆ ವ್ಯಕ್ತಿಗಾಗಿ ಸಾಕಷ್ಟು ಹಣ ಖರ್ಚು ಮಾಡಲಾಗುತ್ತದೆ. ಕೊನೆಗೆ ವ್ಯಕ್ತಿಯೂ ಬದುಕುಳಿಯುವುದಿಲ್ಲ, ಮನೆಯವರ ಆರ್ಥಿಕ ಸ್ಥಿತಿಯೂ ಶೋಚನೀಯವಾಗಿರುತ್ತದೆ.
ಇದರಿಂದಾಗಿ ಮಕ್ಕಳ ಭವಿಷ್ಯ ರೂಪಿಸಲು ಕೂಡ ಕಷ್ಟವಾಗುವುದು.ಆದ್ದರಿಂದ ಈ ಚಟದಿಂದ ದೂರವಿರೋಣ. ಈ ಚಟ ರೂಢಿಸಿಕೊಂಡವರು ಇಂದೇ ತಂಬಾಕಿಗೆ ಹೇಳಿ ಗುಡ್ ಬೈ… ಈ ಕುರಿತು ಜಾಗೃತಿಯ ಸಾಲುಗಳನ್ನು ತುಂಬಾ ತಂಬಾಕು ಸೇವನೆ ಮಾಡುವವರಿಗೆ ಕಳುಹಿಸಿ ಅಥವಾ ನಿಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಜಾಗೃತಿ ಮೂಡಿಸಿ. ಆರೋಗ್ಯಕರ ಬದುಕಿನತ್ತ ಹೆಜ್ಜೆ ಇಡೋಣ…..