ದಾಳಿಂಬೆಯ ಆರೋಗ್ಯಕಾರಿ ಪ್ರಯೋಜನಗಳು

ದಾಳಿಂಬೆ ;
ಆರೋಗ್ಯ ಮಂತ್ರ ಜಪಿಸುವ ವ್ಯಕ್ತಿಗಳು ತಿನ್ನಲೇಬೇಕಾದ ಹಣ್ಣು. ಇತ್ತೀಚೆಗೆ ನಡೆಸಲಾಗಿರುವ ಅಧ್ಯಯನದ ಪ್ರಕಾರ ದಾಳಿಂಬೆ ಕಾಳುಗಳಿಂದ ತಯಾರಿಸಿದ ರಸ ಅಥವಾ ಜ್ಯೂಸ್ ಮೂತ್ರಕೋಶದ ತೊಂದರೆಯಿಂದ ಬಳಲುವವರಿಗೆ ರಾಮಬಾಣ.
ಹೃದಯಬೇನೆಯಿಂದ ಬಳಲುವ ರೋಗಿಗಳು ದಾಳಿಂಬೆಯಿಂದ ತಯಾರಿಸಿದ ರಸವನ್ನು ಅಥವಾ ಕಾಳುಗಳನ್ನು ತಪ್ಪದೆ ಸೇವಿಸಬೇಕು. ರಕ್ತದೊತ್ತಡವನ್ನು ಕೂಡ ಈ ಹಣ್ಣು ನಿಯಂತ್ರಣಕ್ಕೆ ತರುತ್ತದೆ ಎನ್ನುತ್ತದೆ ವೈದ್ಯಕೀಯ ಅಧ್ಯಯನ. ತಾಯಿಯಾಗುವ ಹಂತದಲ್ಲಿ ಕೂಡ ಮಹಿಳೆಯರಿಗೆ ದಾಳಿಂಬೆ ಸೇವಿಸಲು ವೈದ್ಯರು ಶಿಫಾರಸು ಮಾಡುತ್ತಾರೆ. ದಾಳಿಂಬೆ ಹಣ್ಣು ಎಂತೆಂಥ ರೋಗಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂಬುದನ್ನು ನೋಡೋಣ.
#ಸ್ತನ ಕ್ಯಾನ್ಸರ್ : ದಾಳಿಂಬೆ ಹಣ್ಣುಗಳು ಸ್ತನ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಿ ಆರೋಗ್ಯಕರ ಕೋಶಗಳನ್ನು ಮಾತ್ರ ಉಳಿಸುತ್ತದೆ ಎಂದು ಇಸ್ರೇಲ್ ವೈದ್ಯರು ಕಂಡುಹಿಡಿದಿದ್ದಾರೆ. ಸ್ತನ ಕ್ಯಾನ್ಸರ್ ಆಗುವುದನ್ನು ಕೂಡ ದಾಳಿಂಬೆ ತಪ್ಪಿಸುತ್ತದೆ.ದಂತಕ್ಷಯ : ದಾಳಿಂಬೆ ಹಣ್ಣಿನ ರಸ ಹಲ್ಲು ಮತ್ತು ವಸಡುಗಳನ್ನು ಆರೋಗ್ಯಕರವಾಗಿ ಇಡಲು ಬಲು ಸಹಕಾರಿ.
#ರಕ್ತದೊತ್ತಡ : ಎರಡು ವಾರಗಳ ಕಾಲ ದಾಳಿಂಬೆ ಜ್ಯೂಸನ್ನು ಪ್ರತಿದಿನ ಹೀರಿದರೆ ರಕ್ತದೊತ್ತಡ ತಾನಾಗೇ ನಿಯಂತ್ರಣಕ್ಕೆ ಬರುತ್ತದೆ.
#ಕೊಬ್ಬು : ದಾಳಿಂಬೆ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆಗೊಳಿಸುವ ಗುಣ ಹೊಂದಿದೆ. ಆದ್ದರಿಂದ, ನಿಯಮಿತವಾಗಿ ಸೇವಿಸಿದರೆ ಹೃದಯಾಘಾತ ಸಂಭವಿಸುವ ಅಪಾಯ ಕಡಿಮೆ. ಜೊತೆಗೆ ರಕ್ತನಾಳಗಳಲ್ಲಿ ಆಗುವ ಅಡೆತಡೆಗಳನ್ನು ಕೂಡ ಕಡಿಮೆ ಮಾಡುತ್ತದೆ. ಹೀಗಾಗಿ ರಕ್ತ ಸರಾಗವಾಗಿ ಹರಿಯಲು ಅನುಕೂಲವಾಗುತ್ತದೆ.