ದೇಹಕ್ಕೆ ಶಕ್ತಿ ನೀಡುತ್ತೆ ಬಾಳೆಹಣ್ಣಿನ ಮಿಲ್ಕ್ ಶೇಕ್;

ಸೇಬು ಮತ್ತು ಬಾಳೆಹಣ್ಣು ದೈಹಿಕ ಶಕ್ತಿಯ ಮಟ್ಟವನ್ನು ಹೆಚ್ಚಾಗಿಸುತ್ತೆ. ಕೃತಕ ಪಾನೀಯಗಳನ್ನು ಸೇವಿಸುವುದಕ್ಕಿಂತ ಮನೆಯಲ್ಲೇ ಬಾಳೆಹಣ್ಣು ಮತ್ತು ಸೇಬನ್ನು ಬಳಸಿಕೊಂಡು ಮಿಲ್ಕ್ ಶೇಕ್ ತಯಾರಿಸಬಹುದು.

ಮಕ್ಕಳಿಗೆ ಈ ಮಿಲ್ಕ್ ಶೇಕ್ ನೀಡುವುದರಿಂದ ಶಕ್ತಿಯೂ ವೃದ್ಧಿಸುತ್ತದೆ, ಆರೋಗ್ಯವೂ ಹೆಚ್ಚಾಗುತ್ತದೆ. ಸೇಬು ಬಾಳೆಹಣ್ಣಿನ ಮಿಲ್ಕ್ ಶೇಕ್ ಮಾಡುವುದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ

ಮಿಲ್ಕ್ ಶೇಕ್ ಗೆ ಬೇಕಾಗುವ ಪದಾರ್ಥ: 1-2 ಸೇಬು (ಸಿಪ್ಪೆ ತೆಗೆದು ಕತ್ತರಿಸಿರಬೇಕು)

* 2 ಬಾಳೆಹಣ್ಣು * 2 ಕಪ್ ತಣ್ಣಗಿನ ಹಾಲು * 2 ಚಮಚ ಸಕ್ಕರೆ

* ಸ್ವಲ್ಪ ಸ್ಟ್ರಾಬೆರಿ ಅಥವಾ ಬಾಳೆಹಣ್ಣು (ಚಿಕ್ಕದಾಗಿ ಕತ್ತರಿಸಿದ್ದು)

ಸೇಬು ಬಾಳೆಹಣ್ಣಿನ ಮಿಲ್ಕ್ ಶೇಕ್ ತಯಾರಿಸುವ ವಿಧಾನ: ಸೇಬು ಮತ್ತು ಬಾಳೆಹಣ್ಣನ್ನು ಹಾಲಿನೊಂದಿಗೆ ಸೇರಿಸಿ ಸಕ್ಕರೆಯನ್ನು ಬೆರೆಸಿ ಮಿಕ್ಸಿ ಜಾರ್ ನಲ್ಲಿ ಮೆತ್ತಗೆ ಮತ್ತು ಕ್ರೀಂನಂತೆ ಆಗುವವರೆಗೂ ರುಬ್ಬಬೇಕು.

ಈ ಮಿಶ್ರಣವನ್ನು ಲೋಟಕ್ಕೆ ಬಗ್ಗಿಸಿ ಅದರ ಮೇಲೆ ಕತ್ತರಿಸಿದ ಸ್ಟ್ರಾಬೆರಿ ಅಥವಾ ಬಾಳೆಹಣ್ಣನ್ನು ಹಾಕಿದರೆ ಸೇಬು ಮತ್ತು ಬಾಳೆಹಣ್ಣಿನ ಮಿಲ್ಕ್ ಶೇಕ್ ಕುಡಿಯಲು ಸಿದ್ಧವಾಗಿರುತ್ತೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group