ಕೃಷಿಯಲ್ಲಿ ಧಾನ್ಯಗಳನ್ನು ಬೆಳೆಯುವ ಬಗೆ

ಭಾರತದಲ್ಲಿ ಕೃಷಿಕರು ಕೇವಲ ಧಾನ್ಯಗಳ ಬೆಳೆಯನ್ನೇ ನಂಬಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಅಕ್ಕಿ ಮತ್ತು ಗೋಧಿ ಭಾರತದ ಆಹಾರ ಪದ್ಧತಿಗಳಲ್ಲಿ ಅತೀ ಪ್ರಮುಖ ಸ್ಥಾನವನ್ನು ಪಡೆದಿದೆ. ಹೀಗಾಗಿ ಸಂಪೂರ್ಣವಾಗಿ ಧಾನ್ಯಗಳನ್ನು ಬೆಳೆಯುವುದು ಮತ್ತು ಅವುಗಳನ್ನು ಉಪಯೋಗಿಸುವುದು ಮೂರ್ಖತನದ ಮಾತು. ಆದ್ರೆ ಧಾನ್ಯಗಳನ್ನು ಒಂದು ಪ್ರಮುಖ ಬೆಳೆಯ ನಂತರ ಉಪ ಬೆಳೆಯಾಗಿ ಮತ್ತೊಂದು ಬೆಳೆಯಸ ಮಧ್ಯದಲ್ಲಿ ಬೆಳೆಯಬಹುದು. ಇದು ಮಣ್ಣಿನ ಫಲವತ್ತತೆಯನ್ನು ಕಾಪಾಡಲುನ ವಿವಿಧ ರೀತಿಯಲ್ಲಿ ನೆರವು ನೀಡುತ್ತದೆ

ಆದರೆ ದಾನ್ಯಗಳನ್ನು ಬೆಳೆಯುವುದಕ್ಕೆ ಸಾಕಷ್ಟು ಹಿನ್ನಡೆಗಳಿವೆ. ಭತ್ತ ಮತ್ತು ಗೋಧಿಗಿಂತ ಕಡಿಮೆ ಇಳವರಿಯನ್ನು ನೀಡುವ ಕಾರಣದಿಂದ ಕೃಷಿಕರು ಇದರ ಕಡೆಗೆ ಹೆಚ್ಚು ಗಮನಕೊಡುತ್ತಿಲ್ಲ.

ಮಳೆ ಹಾಗೂ ನೀರಿನ ಕೊರತೆ ಇಲ್ಲದೇ ಇದ್ದರೆ ರೈತರು ಸಾವಯವ ಕೃಷಿ ಕಡೆ ಮನಸ್ಸು ಮಾಡುವುದು ಕಡಿಮೆ. ಕಡಿಮೆ ಬೇಡಿಕೆ ಹಾಗೂ ಕಡಿಮೆ ಬೆಲೆ ಕೂಡ ರೈತರನ್ನು ಸಾವಯವ ಧಾನ್ಯಗಳ ಕೃಷಿಯಿಂದ ದೂರ ಇಟ್ಟಿದೆ. ಈ ಸಮಸ್ಯೆಗಳಿಗೆ ಇತ್ತೀಚೆಗೆ ರಾಜ್ಯ ಸರಕಾರದ ಅನೇಕ ಸಂಸ್ಥೆಗಳು ಪರಿಹಾರ ನೀಡುವ ಪ್ರಯತ್ನ ಮಾಡುತ್ತಿವೆ
ಒಂದಂತೂ ಸತ್ಯ ಭಾರತದಲ್ಲಿ ಕೃಷಿ ಚಟುವಟಿಕಗಳ ಕ್ರಮ ಒಂದೆರಡು ತಿಂಗಳಿನಲ್ಲಿ ಬದಲಾವಣೆ ಆಗಲು ಸಾಧ್ಯವಿಲ್ಲ. ಅದಕ್ಕೆ ವರ್ಷಗಳೇ ಬೇಕೆ. ಇವತ್ತು ಶುರು ಮಾಡಿಕೊಂಡರೇ ಮುಂದಿನ ಪೀಳಿಗೆಯಾದ್ರೂ ಸಾವಯವ ಕೃಷಿ ಕಡೆ ಗಮನ ಕೊಡಬಹುದು. ಪರಿಸರ ರಕ್ಷಣೆಗೆ ಮುಂದಾಗಬಹುದು. ಕರ್ನಾಟಕದಲ್ಲಿ ಕೇವಲ 4 ವರ್ಷಗಳ ಹಿಂದೆ ಸಾವಯವ ಕೃಷಿಯನ್ನು ಕೇವಲ 4000 ಹೆಕ್ಟೇರ್ ಪ್ರದೇಶಗಳಲ್ಲಿ ಮಾತ್ರ ಮಾಡಲಾಗುತ್ತಿತ್ತು. ಆದ್ರೆ ಇವತ್ತು ಸುಮಾರು 94000 ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿ ಮಾಡಲಾಗುತ್ತಿದೆ. ಇದು ಇದೇ ರೀತಿಯಲ್ಲಿ ಮುಂದುವರೆದರೆ ವಾತಾವರಣ ಹಾಗೂ ಭೂಮಿಯ ರಕ್ಷಣೆ ಸಾಧ್ಯವಿದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group