ಊಟ ಆದ ಬಳಿಕ ನೀರು ಕುಡಿಯಲು ಎಷ್ಟು ಹೊತ್ತು ಕಾಯಬೇಕು..?

ಸಾಮಾನ್ಯವಾಗಿ ಊಟವಾದ ತಕ್ಷಣ ನಾವೆಲ್ಲಾ ಒಂದು ದೊಡ್ಡ ಲೋಟ ನೀರು ಕುಡಿಯಲು ಹವಣಿಸುತ್ತೇವೆ. ವರ್ಷಗಳಿಂದ ನಡೆದುಬಂದ ಅಭ್ಯಾಸದಿಂದ ನಮ್ಮಲ್ಲಿ ಹಲವರಿಗೆ ಊಟದ ನಡುವೆ ಮತ್ತು ಕಡ್ಡಾಯವಾಗಿ ಎಂಬಂತೆ ಊಟದ ಬಳಿಕ ನೀರು ಕುಡಿಯದೇ ಇದ್ದರೆ ಆಗುವುದೇ ಇಲ್ಲ.ನೀರು ನಮ್ಮ ದೇಹಕ್ಕೆ ಅತಿ ಅಗತ್ಯವಾಗಿದೆ ನಿಜ, ದಿನಕ್ಕೆ ಸಾಕಷ್ಟು ಬಾರಿ, ಸಾಕಷ್ಟು ಪ್ರಮಾಣದಲ್ಲಿ ಕುಡಿಯಬೇಕು, ಇದೂ ನಿಜ. ಆದರೆ ದಿನದ ಕೆಲವು ಅವಧಿಗಳಲ್ಲಿ ನೀರು ಕುಡಿಯದಿರುವುದೇ ಆರೋಗ್ಯಕರವಾಗಿದೆ. ಇದರಲ್ಲಿ ಪ್ರಮುಖವಾದ ಸಂದರ್ಭವೆಂದರೆ ಊಟವಾದ ಬಳಿಕ ಕುಡಿಯುವ ನೀರು. ಈ ಅಭ್ಯಾಸಕ್ಕೆ ಒಳಗಾದವರು ಮೊದಲು ಕೇಳುವ ಪ್ರಶ್ನೆ “ಏಕೆ?”

ಮೊದಲನೆಯದಾಗಿ, ಊಟದ ಬಳಿಕ ಮಾತ್ರವಲ್ಲ, ಊಟಕ್ಕೂ ಮೊದಲು ಅಥವಾ ಊಟದ ನಡುವೆಯೂ ನೀರು ಕುಡಿಯಬಾರದು! ಈ ಮಾಹಿತಿಯನ್ನು ಅರಗಿಸಿಕೊಳ್ಳಲು ಈಗ ಈ ಅಭ್ಯಾಸಕ್ಕೆ ಒಳಗಾಗಿರುವವರಿಗೆ ಕಷ್ಟವಾಗಬಹುದು, ಆದರೆ ದಿನಂಪ್ರತಿ ಇದನ್ನು ಅನುಸರಿಸುತ್ತಾ ಬಂದರೆ ಇದು ಅಸಾಧ್ಯವೇನಲ್ಲ! ಈ ಮಾಹಿತಿ ಓದಿದ ಬಳಿಕ ಈ ವ್ಯಕ್ತಿಗಳ ಮನದಲ್ಲಿ ಈ ಪ್ರಶ್ನೆ ಮಾತ್ರ ಮೂಡಿಯೇ ಇರುತ್ತದೆ. ಅದೆಂದರೆ: ಊಟದ ಬಳಿಕ ತಕ್ಷಣ ನೀರು ಕುಡಿಯಬಾರದು ಸರಿ, ಆದರೆ ಊಟದ ಬಳಿಕ ಎಷ್ಟು ಹೊತ್ತು ಬಿಟ್ಟು ಕುಡಿಯಬೇಕು?

#ಊಟದ ಬಳಿಕ ಸುಮಾರು ಅರ್ಧ ಗಂಟೆ ಬಿಟ್ಟು ನೀರು ಕುಡಿಯಿರಿ: ಸರಳವಾಗಿ ಹೇಳುವುದಾದರೆ ಊಟದ ಬಳಿಕ ಸುಮಾರು ಅರ್ಧ ಗಂಟೆಯಾದರೂ ನೀರು ಕುಡಿಯದೇ, ಆ ಬಳಿಕ ಕುಡಿಯಬಹುದು. ಏಕೆಂದರೆ ಊಟದ ಬಳಿಕ ಜೀರ್ಣಕ್ರಿಯೆ ಪೂರ್ಣಗೊಳ್ಳಲು ಸುಮಾರು ಎರಡು ಘಂಟೆ ಬೇಕಾಗುತ್ತದೆ. ಅನ್ನನಾಳದಿಂದ ಪ್ರಾರಂಭಗೊಳ್ಳುವ ಜೀರ್ಣಾಂಗ ವ್ಯವಸ್ಥೆಯಲ್ಲಿ ಬಳಿಕ ಜಠರ, ನಂತರ ಸಣ್ಣ ಕರುಳು, ಬಳಿಕ ದೊಡ್ಡ ಕರುಳು, ನಂತರ ಗುದದ್ವಾರದ ಮೂಲಕ ಕಲ್ಮಶಗಳು ವಿಸರ್ಜಿಸಲ್ಪಡುತ್ತವೆ

#ಊಟದ ಬಳಿಕ ತಕ್ಷಣವೇ ನೀರು ಕುಡಿದರೆ ಸಮತೋಲನ ತಪ್ಪುತ್ತದೆ: ಇಡಿಯ ಜೀರ್ಣವ್ಯವಸ್ಥೆಯಲ್ಲಿ ಆಹಾರದ ಘನ ಮತ್ತು ನೀರಿನ ದ್ರವ ಗುಣಗಳೆರಡೂ ಮಿಶ್ರಣಗೊಂಡು ಸುಲಭವಾಗಿ ಚಲಿಸಲು ಸಾಧ್ಯವಾಗುವಂತಿರಬೇಕು. ಊಟದ ಬಳಿಕ ತಕ್ಷಣವೇ ನೀರು ಕುಡಿಯುವುದರಿಂದ ಈ ಸಮತೋಲನ ತಪ್ಪುತ್ತದೆ. ಊಟದ ಬಳಿಕ ಜಠರದಲ್ಲಿ ನಡೆಯುವ ಜೀರ್ಣಕ್ರಿಯೆಗೆ ಜಠರ ರಸದ ಆಮ್ಲೀಯವಾಗಿರುವುದು ಅಗತ್ಯವಾಗಿದೆ. ಈಗ ನೀರು ಕುಡಿದರೆ ಈ ಅಮ್ಲೀಯತೆ ಕಡಿಮೆಯಾಗಿ ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಕುಗ್ಗುತ್ತದೆ. ಪರಿಣಾಮವಾಗಿ ಇದು ಸಾಮಾನ್ಯವಾಗಿರುದಕ್ಕಿಂತಲೂ ಇನ್ನಷ್ಟು ಹಸಿವು ಹೆಚ್ಚಿಸುತ್ತದೆ ಹಾಗೂ ಅಗತ್ಯಕ್ಕೂ ಕೆಚ್ಚು ಕ್ಯಾಲೋರಿಗಳನ್ನು ಸೇವಿಸಲು ಮತ್ತು ಹೊಟ್ಟೆಯುಬ್ಬರಕ್ಕೆ ಕಾರಣವಾಗುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group