ನೀರನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬೇಕು..

ತಿಂಡಿಗೆ ಇಲ್ಲವೇ ಊಟಕ್ಕೆ ಕೂತಾಗ ಅಥವಾ ಅತಿಥಿಗಳು ಬಂದಾಗ ಲೋಟದಲ್ಲಾಗಲೀ, ಗ್ಲಾಸ್ ನಲ್ಲಾಗಲೀ ನೀರು ಇಟ್ಟುಕೊಳ್ಳ ಬೇಡಿ/ ಕೊಡಬೇಡಿ. ತುಸುವೇ ಕುಡಿದು ಉಳಿದಿದ್ದನ್ನು ಎಸೆಯುವ ಪ್ರಸಂಗಳೇ ಜಾಸ್ತಿ. ಅದಕ್ಕಾಗಿ ಸಾಕಷ್ಟು ದೊಡ್ಡ ಜಗ್ ನಲ್ಲಾಗಲೀ, ಪಾತ್ರೆಯಲ್ಲಾಗಲಿ ನೀರನಿಟ್ಪುಕೊಂಡು ಅದನ್ನು ವ್ಯವಸ್ಥಿತವಾಗಿ ಮುಚ್ಚಿ, ಸಾಕಷ್ಟು ಸಂಖ್ಯೆಯ ಶುಚಿಗೊಳಿಸಿದ ಗ್ಲಾಸ್ ಗಳನ್ನು ಕವುಚಿ ಇಟ್ಟ ಒಂದು ಟ್ರೇಯನ್ನು ಬದಿಯಲ್ಲಿರಿಸಿದರೆ, ಬೇಕಾದವರು ಬೇಕಷ್ಟು ನೀರನ್ನು ತೆಗದುಕೊಳ್ಳಬಹುದಾಗುತ್ತದೆ.
ಅತಿಥಿಗಳಿಗೆ ಬೇಸರವಾಗಬಹುದೆಂದಿದ್ದರೆ ನಿಮ್ಮ ನಿರ್ಣಯದ ಹಿಂದಿರುವ ಕಾರಣವನ್ನು ತಾವಾಗಿಯೇ ವಿವರಿಸಿ ಹೇಳಿ. ಪ್ರಜ್ನಾವಂತ ವ್ಯಕ್ತಿಗಳು ಅರ್ಥ ಮಾಡಿಕೊಳ್ಳುತ್ತಾರೆ. ಉಳಿದವರ ಬಗ್ಗೆ ಯೋಚಿಸುವ ಅಗತ್ಯವಿಲ್ಲ.(ಸರಿತಾನೇ?) ಶಾಲೆಗೆ ಮತ್ತು ಕಛೇರಿಗೆ ಹೋಗುವವರು ನೀರು ಒಯ್ದಿರುತ್ತಾರೆ. ಅಲ್ಲೂ ‘ ವಾಟರ್ ಬಾಟಲ್ ನಲ್ಲಿ ಉಳಿದ ನೀರನ್ನು ಹೇಗೆ ಸದುಪಯೋಗ ಮಾಡಬೇಕು?……ನೀವೇ ನಿರ್ಣಯಿಸಿ, ಅಂತೂ ಹಾಳು ಮಾಡಬೇಡಿ.ಶಾಲೆ,ಕಛೇರಿಗಳಲ್ಲಿ ಮತ್ತು ಇತರ ಕಡೆಗಳಲ್ಲೂ ನೀರಿನ ಉಳಿತಾಯದ ಬಗ್ಗೆ ಪ್ರಯತ್ನ ಇನ್ನಷ್ಟು ಹೆಚ್ಚು ಅವಶ್ಯ….ಯಾಕೆಂದರೆ ಒಬ್ಬರನ್ನು ನೋಡಿ ಇನ್ನೊಬ್ಬರು ತಾವು ಕೂಡಾ ಸ್ವಲ್ಪವಾದರೂ ತಮ್ಮ ದೈನಂದಿನ ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳಬಹುದು. ನಮ್ಮ ಆಂತಿಮ ಗುರಿ ನಮ್ಮ ಭೂಮಾತೆಯ ರಕ್ಷಣೆ.ನಾಲ್ಕು ಜನರಿರುವ ಮನೆಯಲ್ಲಿ ದಿನವೊಂದಕ್ಕೆ ಸರಿ ಸುಮಾರು 100 ಲೀಟರ್ ನೀರು ಉಳಿಸ ಬಹುದಾಗುತ್ತದೆ. ಇಡಿಯ ದೇಶದಲ್ಲಿನ ಉಳಿತಾಯದ ಅಗಾಧತೆಯ ಬಗ್ಗೆ ಯೋಚಿಸಿ.ಭೂಮಾತೆಯ ಋಣ ತೀರಿಸೋಣ