ಸಂಪ್ರದಾಯದ ಅರ್ಥ ತಿಳಿದುಕೊಂಡು ವ್ಯವಹರಿಸಿ;

ನಮ್ಮ ಮನೆಗಳಲ್ಲಿ, ಲಾಗಾಯ್ತಿಯಿಂದ, ಕೆಲವೊಂದು ಸಂಪ್ರದಾಯ/ ಜೀವನ ಶೈಲಿಗಳಿವೆ. ಉದಾಹರಣೆಗೆ ಅಕ್ಕಿ ಡಬ್ಬ ಖಾಲಿಮಾಡಿ ಇಡಬಾರದು….. ಇದರ ಮೂಲಭೂತ ಉದ್ದೇಶ ಏನು? ಅಕ್ಕಿ, ಡಬ್ಬದ ತಳಕಂಡಾಗ ಕೂಡ ಸ್ವಲ್ಪ ಉಳಿಸಿಕೊಳ್ಳುತ್ತಾರೆ. ಹಾಗೆ ಮಾಡುವುದು ಸರಿ ಇರಲಾರದು……ಹಾಗೆ ಉಳಿಸಿಕೊಂಡ ಅಕ್ಕಿ ಆ ಮೇಲೆ ಹಾಕಿದ ಅಕ್ಕಿಯೊಂದಿಗೆ ಸೇರಿಕೊಳ್ಳುತ್ತದೆ. ಈ ಪ್ರಕ್ರಿಯೆ ಪ್ರತಿಬಾರಿ ಅಂದರೆ ವರ್ಷಗಟ್ಟಲೆ ನಡೆಯುತ್ತದೆ ಮತ್ತು ಹಳೆಯ ಅಕ್ಕಿಯ ಸ್ವಲ್ಪ ಭಾಗ ಹಾಗೆಯೇ ಉಳಕೊಳ್ಳಬಹುದಾಗುತ್ತದೆ. …..ಇದು ಆರೋಗ್ಯದ ದೃಷ್ಟಿಯಿಂದ ಸರಿಯಿರಲಾದು.
ಅಕ್ಕಿಯ ಡಬ್ಬ ಖಾಲಿ ಮಾಡಬಾರದು ಅಂದರೆ ಹೊಸದು ಬರುವ ಮುಂಚೆ ಅಕ್ಕಿಯನ್ನು ಪೂರ್ತಿಯಾಗಿ ಮುಗಿಸ ಬೇಡಿ, ಅನಿರೀಕ್ಷಿತವಾಗಿ ಬರುವ ಅತಿಥಿಗಳಿಗೆಂದು ಸ್ವಲ್ಪ ಇರಲಿ ಎಂದರ್ಥ.
ಮನೆಯ ಮರ್ಯಾದೆ ಮುಖ್ಯವಲ್ಲವೆ? ಹೊಸದಾಗಿ ತಂದ ಅಕ್ಕಿಯನ್ನು ಡಬ್ಬದಲ್ಲಿ ತುಂಬಿಸುವ ಮೊದಲು ಡಬ್ಬದ ತಳದಲ್ಲಿ ಉಳಿದ ಹಳೆತ ಅಕ್ಕಿಯನ್ನು ಪೂರ್ತಿಯಾಗಿ ತೆಗೆದು ಬೇರಯೇ ಪಾತ್ರೆಯಲ್ಲಿ ತೆಗೆದಿಟ್ಟು, ಡಬ್ಬವನ್ನು ಸ್ವಚ್ಛಗೊಳಿಸಿ, ಬಿಸಿಲಲ್ಲಿರಿಸಿ ರೋಗಾಣುಗಳಿಂದ ಮುಕ್ತಗೊಳಿಸಿ.ಈ ಮಾತು ಎಲ್ಲಾ ದವಸ ಧಾನ್ಯಗಳಿಗೂ ಅನ್ವಯಿಸುತ್ತದೆ. …
ಪ್ರತಿಯೊಂದು ಆಹಾರ ಪದಾರ್ಥಕ್ಕೂ ಅದರದೇ ಆದ ಜೀವನಾವಧಿ (expiry date ) ಇದೆ. ಅದಕ್ಕಿಂತ ಮೊದಲು ಅದನ್ನು ಉಪಯೋಗಿಸ ಬೇಕಾಗುತ್ತದೆ.ಈ ಮಾತು ದ್ರವ ರೂಪದಲ್ಲಿರುವ ತುಪ್ಪ, ಎಣ್ಣೆಗಳಿಗಂತೂ ಇನ್ನೂ ಹೆಚ್ಚು ಅನ್ವಯಿಸುತ್ತದೆ. ಅವು ಪೂರ್ತಿಯಾಗಿ ಮಿಶ್ರಗೊಳ್ಳುವುದರಿಂದ ಅಪಾಯ ಹೆಚ್ಚು. ಪ್ರತಿಬಾರಿಯೂ ಪಾತ್ರೆಗಳನ್ನು ತೊಳೆದು, ಬಿಸಿಲಿನಲ್ಲಿಟ್ಟು ಒಣಗಿಸಿ ಉಪಯೋಗಿಸಿಕೊಳ್ಳಿಸಕ್ಕರೆ, ಚಹ ಹುಡಿಯಂತಹ ವಸ್ತುಗಳಿಗೂ ಇದನ್ನು ಅನ್ವಯಿಸಿ ಆರೋಗ್ಯದಿಂದಿರಿ.