ಹಣ್ಣುಗಳನ್ನು ತಿಂದ ನಂತರ ಬೀಜವನ್ನು ವ್ಯರ್ಥ ಮಾಡದೆ ಹೀಗೆ ಮಾಡಿ..!

ನಾವು ನಮ್ಮ ಸ್ವಾರ್ಥಕ್ಕಾಗಿ ಮರಗಿಡಗಳನ್ನು ಕಡಿದುಹಾಕುತ್ತೇವೆ. ಇದರಿಂದಾಗಿ ಹಸಿರು ವಿರಳವಾಗುತ್ತಹೋಗುತ್ತಿದೆ.ವೇಗದ ಬದುಕಿನಲ್ಲಿ ಪರಿಸರ ಕಡೆಗಣಿಸುತ್ತಿರುವ ಮಾನವನ ಜೀವನ ಶೈಲಿ ಮುಂದೊಂದು ದಿನ ಅವನಿಗೇ ಮುಳ್ಳಾಗಬಹುದು, ಹೀಗೇ ಆಗದಂತೆ ತಡೆಯಲು ಪ್ರತೀ ಒಬ್ಬರಲ್ಲೂ ಇಂತಹ ಚಿಂತನೆಗಳನ್ನು ಬಿತ್ತಿಸಬೇಕು ಈ ಬಗೆ ಜಾಗೃತಿ ಮೂಡಿಸುವುದು ಅಗತ್ಯ ಯಾರಿಗೋ ಹೇಳುವ ಬದಲು ನಮ್ಮಿಂದಲೇ ಪರಿಸರ ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕು ಅದು ನೀವು ವಾಸಿಸುವ ಸ್ಥಳದಿಂದಲೇ ಪ್ರಾರಂಭಿಸಿ
ಈಗಾಗಲೇ ನೇರಳೆ,ಹಲಸು,ಮಾವು ಸೇರಿ ಹಲವು ಸೀಜನಲ್ ಹಣ್ಣುಗಳು ಸಿಗುವ ಕಾಲವಿದು ಇಂತಹ ಯಾವುದೇ ಹಣ್ಣನು ತಿಂದ ನಂತರ ಅವುಗಳನ್ನೂ ಕಸದ ತೊಟ್ಟಿಯಲ್ಲಿ ಹಾಕಿ ವ್ಯರ್ಥ ಮಾಡದೆ ಭೂಮಿ ಅಥವಾ ಪಾಟ್ಗಳಿಗೆ ಹಾಕಿ ಬೆಳಸಿ ಇದರಿಂದ ನಾವೇ ನೆಟ್ಟು ಬೆಳೆಸಿದ ಹಣ್ಣುಗಳನ್ನು ಯಾವುದೇ ವಿಷ ರಾಸಾಯನಿಕ ಕೀಟ ನಾಶಕಗಳನ್ನು ಸಿಂಪಡಿಸದೆ ನಾವೇ ತಿನ್ನಬಹುದು ನಾವೇ ಬೆಳೆದ ಹಣ್ಣುಗಳನ್ನು ತಿನ್ನುವುದರ ಖುಷಿಯನ್ನು ಅನುಭವಿಸಿ ಬಿಡುವು ಮಾಡಿಕೊಂಡು ಕೊಂಡು ಅದನ್ನು ಚೆನ್ನಾಗಿ ಪೋಷಿಸಿ ಬೆಳೆಸಿ.
ಅಷ್ಟೂ ಸಹ ಬಿಡುವು ಇಲ್ಲದೇ ಇದ್ದರೆ ತಿಂದ ಹಣ್ಣುಗಳ ಬೀಜಗಳು ಹೆಚ್ಚಿನ ಪ್ರಮಾಣದಲ್ಲಿ ಇದೆ ಎಂದಾದರೆ ಅದನ್ನು ನಿಮ್ಮ ಹತ್ತಿರದ ಅರಣ್ಯಾಧಿಕಾರಿಗಳ ಕಚೇರಿ ಅಥವಾ ನರ್ಸರಿಗಳಿಗೆ ನೀಡಿ ಅಲ್ಲಿ ಆದರೂ ನೀವೂ ನೀಡಿದ ಬೀಜಗಳು ದೊಡ್ದ ಮರವಾಗಿಯೋ ಎಷ್ಟೋ ಜನರಿಗೆ ನೆರಳಿಗಿಯೋ ಬೆಳೆದು ನಿಲ್ಲಲಿ ಪರಿಸರ ಸಂರಕ್ಷಣೆ ಈಗದರು ಆಗಲಿ. ಹೀಗಾದಾಗ ಯಾವ ಹಣ್ಣಿನ ಬೀಜಗಳು ವ್ಯರ್ಥ ಆಗುವುದಿಲ್ಲ .