ನಿಮ್ಮ ಬೆಳಗಿನ ದಿನಚರಿಯನ್ನು ಹೀಗೆ ಪ್ರಾರಂಭಿಸಿ

01. ಧ್ಯಾನಕ್ಕೂ ಮೊದಲು ದೇಹದ ವ್ಯಾಯಾಮ ಮಾಡಿನಿಮಗೆ ಬೆಳಗ್ಗೆ ಎದ್ದು “ಜಾಗಿಂಗ್” ಮಾಡುವುದು ಅಥವಾ ವ್ಯಾಯಾಮ ಮಾಡುವುದು ಉತ್ಸಾಹ ತರುತ್ತಿದ್ದರೆ,ಅದನ್ನು ಮಾಡಿ ನಂತರ ಧ್ಯಾನಕ್ಕೆ ಕುಳಿತುಕೊಳ್ಳಿ. ಧ್ಯಾನವು ನಿಮ್ಮ ದೇಹವನ್ನು ತಂಪು ಮಾಡಿ, ವಿಶ್ರಾಂತಿ ಕೊಡುತ್ತದೆ ಹಾಗು ಅದರ ಜೊತೆಗೆ ಮನಸ್ಸನ್ನು ಉಲ್ಲಾಸದಾಯಕವಾಗಿ ಇರಿಸುತ್ತದೆ.
02. ಧ್ಯಾನಕ್ಕೆ ಮೊದಲು ಯೋಗದ ಭಂಗಿಗಳನ್ನು ಮಾಡಿ ವಿಶ್ರಾಂತಿ ಪಡೆದುಕೊಳ್ಳಿ.ಬೆಳಗ್ಗಿನ ನಡೆದಾಡುವಿಕೆ, ವ್ಯಾಯಾಮ, ಯೋಗ, ಇವುಗಳು ನಮ್ಮ ಸ್ನಾಯುಗಳನ್ನು ಸಡಿಲಿಸುತ್ತದೆ.ಇಲ್ಲಿ ಕೆಲವು ವಿಶ್ರಾಂತಿದಾಯಕ ಯೋಗದ ಭಂಗಿಗಳ ಬಗ್ಗೆ ತಿಳಿಸಲಾಗಿದೆ, ನೀವೂ ಪ್ರಯತ್ನಿಸಬಹುದು.
.03 ಧ್ಯಾನಕ್ಕೆ ಹೋಗುವ ಮೊದಲು ಪ್ರಾಣಾಯಾಮ ಮಾಡಿದರೆ ದೇಹ ಹಾಗು ಮನಸ್ಸಿಗೆ ಚೈತನ್ಯ ಸಿಗುತ್ತದೆ.. “ಪ್ರಾಣಾಯಾಮ” ಎಂದರೆ “ಜೀವನದ ಬಲವನ್ನು ಹೆಚ್ಚಿಸುವಿಕೆ” ಎಂದು ಸಂಸ್ಕ್ರತದಲ್ಲಿ ಹೇಳುತ್ತಾರೆ. ಧ್ಯಾನಕ್ಕೆ ಮೊದಲು ಒಂದೆರಡು “ಪ್ರಾಣಾಯಾಮ” ಉಸಿರಿನ ವ್ಯಾಯಾಮಗಳನ್ನು ಮಾಡಿದರೆ ಅದು ದೇಹ ಮತ್ತು ಮನಸ್ಸಿಗೆ ತಂಪು ನೀಡಿ ಧ್ಯಾನಕ್ಕೆ ಸಹಕಾರಿಯಾಗುವಂತೆ ಮನಸ್ಸಿಗೆ ಮುದ ನೀಡುತ್ತದೆ.
04. ನೀವು ಧ್ಯಾನಕ್ಕೆ ಸಿದ್ಧರಾದಾಗ, ನಿಮಗೆ ಎಲ್ಲಿ ಆರಾಮವಾಗಿದೆಯೋ ಅಲ್ಲಿ ಕುಳಿತು ಧ್ಯಾನದಲ್ಲಿ ತೊಡಗಿರಿ8. ಧ್ಯಾನದ ನಂತರ ಏಳುವ ಮೊದಲು ಕೆಲ ನಿಮಿಷಗಳು ನಿಶ್ಯಬ್ಧವಾಗಿದ್ದು ನಂತರ ದಿನದ ಚಟುವಟಿಕೆಗಳನ್ನು ಆರಂಭಿಸಿರಿ.ಮನಸ್ಸಿನೊಳಗಿನ ಶಾಂತಿ ಮತ್ತು ಸಂತೋಷವನ್ನು ಕಾಪಾಡಲು ದಿಟ್ಟ ಹೆಜ್ಜೆಯನ್ನು ನೀವು ಇಟ್ಟಿರುವುದನ್ನು ನೆನೆಸಿಕೊಂಡು ಇಡೀ ದಿನ ನಗುತ್ತಾ ಇರಿ.ಧ್ಯಾನದ ನಿಯಮಿತ ಅಭ್ಯಾಸದಿಂದ ಮನಸ್ಸು ಶಾಂತತೆಯನ್ನು ಹೊಂದಿ, ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಹಾಗು ನಮ್ಮಲ್ಲಿನ ವಿಶ್ವಾಸವನ್ನು ವರ್ಧಿಸುತ್ತದೆ, ಆದ್ದರಿಂದ ಪ್ರತಿನಿತ್ಯ ಸ್ವಲ್ಪ ನಿಶ್ಯಬ್ಧತೆಯನ್ನು ಅನುಭವಿಸಿ, ನಿಮ್ಮಲ್ಲಿ ನಿಮ್ಮನ್ನು ವಶಮಾಡಿಕೊಳ್ಳಿ.
ಸಾಮಾನ್ಯವಾಗಿ ಬೆಳಿಗ್ಗೆ ಎದ್ದು ವ್ಯಾಯಾಮ ಶಾಲೆಯಲ್ಲಿ ಕಸರತ್ತು ಮಾಡಿ, ’ಟ್ರೆಡ್ ಮಿಲ್’ ನಲ್ಲಿ ನಡೆದಾಡಿ,ಭಾರ ಎತ್ತುವುದು ಬಹಳ ಜನರ ಬೆಳಗಿನ ದಿನಚರಿ, ಅದರಿಂದ ಜನರಿಗೆ ಸಂತೋಷ ಸಿಗುತ್ತದೆ. ಅದೇ ರೀತಿ ಇಡೀ ದಿನ ಸಂತೋಷವಾಗಿರಲು ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಧ್ಯಾನ ಮಾಡಿದರೆ ಸಾಧ್ಯ ಎಂದರೆ ನಂಬುತೀರಾ?”ಧ್ಯಾನ” ಎಂದರೆ ತನ್ನೊಳಗೆ ಆಳವಾಗಿ ಸಂಚರಿಸುವುದು.”ಧ್ಯಾನ” ಸದಾಕಾಲ ನಮ್ಮನ್ನು ಸಂತೋಷವಾಗಿರಿಸುವ ಸಾಧನ.ಆದುದರಿಂದ ನಮ್ಮ ಬೆಳಗಿನ ದಿನಚರಿಗೆ ಧ್ಯಾನವನ್ನು ಸೇರಿಸುವುದರಿಂದ, ನಮ್ಮ ಸಂತೋಷವು ವರ್ಧಿಸಿ, ಇಡೀ ದಿನ ನಗುತ್ತಿರುವಂತೆ ಆಗುತ್ತದೆ ನಮ್ಮ ಜೀವನ ಶೈಲಿ.