ನೀರನ್ನೂ ಮಿತವಾಗಿ ಬಳಸಿ..

ಭೂಮಿಯಲ್ಲಿ ಜೀವಿಸುವ ಪ್ರತಿಯೊಂದು ಜೀವ ಸಂಕುಲಕ್ಕೂ ಅವಲಂಬಿತವಾಗಿರುವುದು ನೀರು ಎಲ್ಲರಿಗೂ ಎಲ್ಲ ಕಾಲಕ್ಕೂ ಬೇಕಾದ ಮೂಲ ಅಂಶ ನೀರು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಜನಸಂಖ್ಯೆ ಇಂದಾಗಿ ಇಂದು ಜಲ ಸಂಪತ್ತು ಕಡಿಮೆಗೊಂಡಿದೆ.ಅರಣ್ಯಗಳ ನಾಶದಿಂದಾಗಿ ಒಂದೆಡೆ ಮಳೆ ಕಡಿಮೆ ಆಗಿ ಮತ್ತೊಂದೆಡೆ ಭೂ ಕುಸಿತದಿಂದಾಗಿ ಅಂತರ್ಜಲ ನಾಶವಾಗುತ್ತಿದೆ. ಇವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ.

ಲಭ್ಯವಿರುವ ನೀರನ್ನು ಜಾಗರೂಕತೆ ಇಂದ ಮಿತವ್ಯಯದಿಂದ ಬಳಸಿ ಮುಂದಿನ ಪೀಳಿಗೆಗೆ ನೀರನ್ನು ಉಳಿಸುವುದು. ನೀರು ದಿನದಿಂದ ದಿನಕ್ಕೆ ಮಲಿನವಾಗುತ್ತಿದೆ ಇದರಿಂದಾಗಿ ಮಾನವನಿಗೆ ಹಾಗೂ ಜಲ ಚರ ಜೀವಿಗಳಿಗೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಅದರಿಂದ ನೀರನ್ನು ಮಲಿನವಾಗದಂತೆ ನೋಡುವುದು ನಮ್ಮೆಲ್ಲರ ಕರ್ತವ್ಯ… ನಾವು ಇಂದು ಅನಗತ್ಯವಾಗಿ ನೀರನ್ನು ಉಪಯೋಗಿಸುವ ಬದಲು ಮನೆ ಮನೆಗೂ ಹೂವಿನ ಕೆರೆ ಕಟ್ಟಿಗೆ ಇದನ್ನು ಅಳವಡಿಸಿ ನೀರನ್ನು ಸಂರಕ್ಷಿಸಬೇಕು.ಪ್ರಚಲಿತದಲ್ಲಿರುವ ಇಂಗು ಗುಂಡಿಗಳನ್ನು ನಿರ್ಮಿಸಬೇಕು..ಜಾಗರೂಕತೆ ಮೂಡಿಸುವ ಕಾರ್ಯಕ್ರಮ ಅಳವಡಿಸಿ ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು ಉತ್ತಮ.

ಆದ್ದರಿಂದ ನಾವುಗಳು ಇನ್ನೂ ಮುಂದೆ ಆದರೂ ನೀರನ್ನು ಮಿತವಾಗಿ ಬಳಸಿ ನೀರುಗಳು ನಲ್ಲಿಯಲ್ಲಿ ಪೋಲಾಗದಂತೆ ನೋಡಿಕೊಳ್ಳುವುದು ಹಾಗೂ ನೀರಿನ ಅಧಿಕ ಬಳಕೆ ಯಾಗದಂತೆ ಎಚ್ಚರ ಕ್ರಮಗಳನ್ನು ಕೈಗೊಳ್ಳುವುದು ಮಾಡಿದಾಗ ಜಲ ಸಂಪ್ಮೂಲವನ್ನು ಮುಂದಿನ ಪೀಳಿಗೆಗೂ ದೊರಕುವ ಹಾಗೆ ಮಾಡುವ ಮಹತ್ವದ ಕೆಲಸ ಮಾಡಬಹುದೇನೋ?

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group