ಟೊಮೇಟೊ ಆರೋಗ್ಯಕಾರಿ ತರಕಾರಿ ಹೇಗೆ:

ನಿಮ್ಮ ಸುಂದರ ತ್ವಚೆಗಾಗಿ, ಮೂಳೆಗಳ ಅಭಿವೃದ್ಧಿಗಾಗಿ ಟೊಮೇಟೊ ಸಹಕಾರಿಯಾಗಿದೆ. ತೂಕ ಇಳಿಕೆಯಲ್ಲೂ ಇದು ಪರಿಣಾಮಕಾರಿ ಪ್ರಭಾವವನ್ನು ಬಿರುತ್ತದೆ ಎಂಬುದು ಸಾಬೀತಾಗಿದ್ದು ವಿಟಮಿನ್ ಮಿನರಲ್ಸ್ ಯುಕ್ತವಾಗಿದೆ. ಮಧುಮೇಹಿಗಳಿಗೆ ಉತ್ತಮ ಆಹಾರವಾಗಿರುವ ಇದನ್ನು ಹಸಿಯಾಗಿ ತಿಂದಷ್ಟು ಆರೋಗ್ಯ ಆಯಸ್ಸು ವೃದ್ಧಿಯಾಗುತ್ತದೆ ಎಂಬುದರಲ್ಲಿ ಸಂದೇಹವೇ ಬೇಡ.ಬಹುರೂಪಿ ಪ್ರಯೋಜನದ ಟೋಮೇಟೋದ ಬಗೆಗೆ ಮತ್ತಷ್ಟು ಮಾಹಿತಿ ನಿಮಗಾಗಿ.
#ಫೇಶಿಯಲ್ ಕ್ಲೀನರ್‌ನಂತೆ ಕೆಲವೆಡೆಗಳಲ್ಲಿ ಬಳಸಲಾಗುವ ಲೈಕೋಪನ್ ಟೊಮೇಟೊದಲ್ಲಿ ಹೇರಳವಾಗಿದೆ. ಮುಖದ ಅಂದಕ್ಕಾಗಿ ಟೊಮೇಟೊವನ್ನು ನೀವು ಬಳಸುತ್ತಿರುವಿರಿ ಎಂದರೆ 8 ರಿಂದ 12 ಟೊಮೇಟೊಗಳ ಅವಶ್ಯಕತೆ ನಿಮಗಿದೆ. ಟೊಮೇಟೊದ ಸಿಪ್ಪೆ ತೆಗೆದು ಒಳಗಿನ ತಿರುಳನ್ನು ನಿಮ್ಮ ಮುಖದ ಮೇಲಿಡಿ. 10 ನಿಮಿಷಗಳಷ್ಟು ಕಾಲ ಟೊಮೇಟೊ ತಿರುಳು ನಿಮ್ಮ ಮುಖದಲ್ಲಿರಲಿ ನಂತರ ತೊಳೆಯಿರಿ. ಇದು ಮುಖವನ್ನು ಸ್ವಚ್ಛಗೊಳಿಸಿ ಹೊಳೆಯುವಂತೆ ಮಾಡುತ್ತದೆ.
#ಮೂಳೆಗಳ ಅಭಿವೃದ್ಧಿಗಾಗಿ: ಇದರಲ್ಲಿರುವ ಕ್ಯಾಲ್ಶಿಯಂ ಮತ್ತು ವಿಟಮಿನ್ ಕೆ ಅಂಶ ಮೂಳೆಗಳನ್ನು ಅಭಿವೃದ್ಧಿಗೊಳಿಸಿ ಅವನ್ನು ದೃಢಗೊಳಿಸುತ್ತದೆ. ಮೂಳೆ ಮುರಿತ ಮೊದಲಾದ ಸಮಸ್ಯೆಯನ್ನು ಟೊಮೇಟೊದಲ್ಲಿರುವ ಕ್ಯಾಲ್ಶಿಯಂ ಮತ್ತು ವಿಟಮಿನ್ ಕೆ ಹೋಗಲಾಡಿಸುತ್ತದೆ.
#ಉತ್ಕರ್ಷಣ ಶಕ್ತಿಯನ್ನು ಒದಗಿಸುತ್ತದೆ: ಟೊಮೇಟೊದಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಬೇಟಾ ಕ್ಯಾರೊಟೀನ್‌ನೊಂದಿಗೆ ಸಮ್ಮಿಶ್ರಗೊಂಡು ರಕ್ತದಲ್ಲಿನ ವಿನಾಶಕಾರಿ ಮುಕ್ತ ರೇಡಿಕಲ್ಸ್‌ನೊಂದಿಗೆ ಉತ್ಕರ್ಷಣದಂತೆ ಕಾರ್ಯನಿರ್ವಹಿಸುತ್ತದೆ. ಹಸಿ ಟೊಮೇಟೊವನ್ನು ತಿಂದಷ್ಟು ನಿಮ್ಮಲ್ಲಿ ಬೇಟಾ ವಿಟಮಿನ್ ಅಂಶ ಜಾಸ್ತಿಯಾಗುತ್ತದೆ ಎಂಬುದು ನಿಮಗೆ ತಿಳಿದಿರಲಿ. ಟೊಮೇಟೊವನ್ನು ಬೇಯಿಸಿದಂತೆ ಈ ಅಂಶ ಕಡಿಮೆಯಾಗುತ್ತದೆ.
#ನಿಮ್ಮ ಹೃದಯಕ್ಕೆ ಉತ್ತಮವಾದುದು: ಟೊಮೇಟೊದಲ್ಲಿರುವ ವಿಟಮಿನ್ ಬಿ ಮತ್ತು ಪೊಟ್ಯಾಶಿಯಂ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ರಕ್ತದೊತ್ತಡವನ್ನು ಇಳಿಸುತ್ತದೆ. ಆದ್ದರಿಂದ ನಿಮ್ಮ ನಿಯಮಿತ ನಿಯಂತ್ರಿತ ಆಹಾರದಲ್ಲಿ ಟೊಮೇಟೊವನ್ನು ಬಳಸುವುದು ಪರಿಣಾಮಕಾರಿಯಾಗಿ ಹೃದಯಾಘಾತಗಳನ್ನು ಕಡಿಮೆ ಮಾಡುತ್ತದೆ.