ಸಾವಯವ ಕೃಷಿಗೂ ಬಂತು ಮೊಬೈಲ್ ಆ್ಯಪ್…!

ಮೊಬೈಲ್ ಮತ್ತು ಇಂಟರ್ನೆಟ್ ಎಲ್ಲರ ಜೀವನದಲ್ಲಿ ಅವಿಭಾಜ್ಯ ಅಂಗವಾಗುತ್ತಿರುವ ಇಂದಿನ ದಿನಗಳಲ್ಲಿ ದೈನಂದಿನ ವ್ಯವಹಾರಗಳನ್ನು ಮೊಬೈಲ್ ನಿಂದಲೇ ನಿರ್ವಹಿಸುವಂತೆ ಮಾಡುವ ಎಷ್ಟು ಸೌಲಭ್ಯ ಒದಗಿಸಿದರೂ ಅದು ಕಡಿಮೆಯೇ. ಇನ್ನು ಇಷ್ಟು ದಿವಸ ರಾಸಾಯನಿಕ ಕೃಷಿಯಿಂದ ಬೇಸತ್ತು ಬಹಳಷ್ಟು ರೈತರು ಸಾವಯವ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಸಾವಯವ ಕೃಷಿ ಕುರಿತು ಮಾಹಿತಿ ನೀಡುವ ಆ್ಯಪ್ ಬಂದಿದೆ. ಈ ಆ್ಯಪ್ ನಲ್ಲಿ ಸಾವಯವ ಕೃಷಿ ಕುರಿತು ಸಮಗ್ರ ಮಾಹಿತಿ ಸಿಗಲಿದೆ.ಮುಖ್ಯವಾಗಿ ಸಾವಯವ ಕೃಷಿಯ ಬೆಳವಣಿಗೆ, ಅದರ ಅವಶ್ಯಕತೆ,ಮೂಲತತ್ವಗಳು,ಸಿದ್ಧಾಂತಗಳು ಸೇರಿದಂತೆ ಹತ್ತಾರು ಮಾಹಿತಿಗಳು ಆ್ಯಪ್ ಮೂಲಕ ತಿಳಿದುಕೊಳ್ಳಬಹುದು.
ಯಾವುದು ಸಾವಯವ ಆ್ಯಪ್..?
ಇತ್ತೀಚೆಗೆ ಸಾವಯವ ಕೃಷಿಯತ್ತ ಸಾಕಷ್ಟು ಯುವಜನರು ಮನಸೋಲುತ್ತಿದ್ದಾರೆ. ಈ ನಿಟ್ಟಿನಲ್ಲಿ ಈ ಆ್ಯಪ್ ಹೆಚ್ಚು ಸಹಕಾರಿ ಆಗಲಿದೆ. ಅಂದಹಾಗೆ ಈ ಆ್ಯಪ್ ನ ಹೆಸರು Organic farming. ಈ ಆ್ಯಪ್ ಮೂಲಕ ರೈತರು ಮಾಹಿತಿಯನ್ನು ಕಲೆಹಾಕಬಹುದು.
ಯಾವ ರೀತಿಯಲ್ಲಿ ಬಳಸಬಹುದು..?
ಈಗ ಪ್ರತಿಯೊಬ್ಬರ ಕೈನಲ್ಲೂ ಸ್ಮಾರ್ಟ್ ಫೋನ್ ಇದ್ದೇ ಇರುತ್ತೆ.. ಇನ್ನು ಈ ಆ್ಯಪ್ ನ್ನ ನಿಮ್ಮ ಸಾರ್ಟ್ ಮೊಬೈಲ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು..ನಿಮ್ಮ ಮೊಬೈಲ್ ನ ಗೂಗಲ್ ಪ್ಲೇಯಿಂದ Organic farming ಅಂಥ ಟೈಪ್ ಮಾಡಬೇಕು..ನಂತರ ಅದರ ಮೇಲೆ ಕ್ಲಿಕ್ ಮಾಡಿ ಇನ್ಸ್ಟಾಲ್ ಮಾಡಿಕೊಂಡರೆ ಆಯಿತು. ಇದನ್ನ ನೀವು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು …ಸಾವಯವ ಕೃಷಿಗೂ ಬಂತು ಮೊಬೈಲ್ ಆ್ಯಪ್…!ರಾಸಾಯನಿಕ ಕೃಷಿಯಿಂದ ಬೇಸತ್ತಿದ್ದ ರೈತರು ಈಗ ಸಾವಯವ ಕೃಷಿಯತ್ತ ಮುಖ ಮಾಡ್ತಿದ್ದಾರೆ..ಈ ನಿಟ್ಟಿನಲ್ಲಿ ಸಾವಯವ ಕೃಷಿಯ ಬಗ್ಗೆ ತಿಳಿಸುವ ಈ Organic farming ಆ್ಯಪ್ ಸಾಕಷ್ಟು ಉಪಯೋಗವಾಗುತ್ತೆ..
ಇನ್ನು ಸರಿಯಾದ ಮಳೆಯಾಗಿಲ್ಲ ಅಂದ್ರೂ ಕಷ್ಟ, ಹೆಚ್ಚಿಗೆ ಮಳೆ ಬಂದ್ರೂ ಕಷ್ಟ ಎನ್ನುವಂತಾಗಿದೆ. ಹೀಗಾಗಿ ಯಾವ ಸಮಯದಲ್ಲಿ ಯಾವುದನ್ನ ಬಿತ್ತನೆ ಮಾಡಿದ್ರೆ ಒಳಿತು ಎಂಬುದನ್ನು ಇದ್ರಿಂದ ತಿಳಿಯಬಹುದಾಗಿದೆ..ಇನ್ನು ರೈತರಿಗೆ ಕೆಲವು ಆ್ಯಪ್ ಗಳು ಬಂದಿದೆ.. ಈಗ ಅದೇ ಸಾಲಿಗೆ ಈ Organic farming ಆ್ಯಪ್ ರೈತರಿಗೆ ಮತ್ತು ಕೃಷಿಯಲ್ಲಿ ಆಸಕ್ತಿ ಇರುವವರು ಇದ್ರ ಸದುಪಯೋಗ ಪಡೆದುಕೊಳ್ಳಬಹುದು..