ಇದು ಕೆಮ್ಮಿನ ಔಷದ..

ಕಿರಿಯರಿಂದ ವೃದದವರಿಗೆ ಎಲ್ಲರೂ ಸುರಕ್ಷಿತವಾಗಿ ಸೇವಿಸಬಹುದಾದ ಈ ಔಷಧಿ ತಯಾರಿಸುವುದು ಹೇಗೆ?
- ಹಸಿ ಶುಂಠಿ; ಒಂದು ಇಂಚಿನಷ್ಟು ದೊಡ್ದ ಹಸಿ ಶುಂಠಿಯ ಸಿಪ್ಪೆ ಸುಲಿದು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕೆಮ್ಮು ನೆಗಡಿಗೆ ರಾಮಬಾಣ ಒಣ ಶುಂಠಿ ಕಷಾಯ
- ಲಿಂಬೆಹಣ್ಣುಗಳ ರಸಎರಡು ಲಿಂಬೆಹಣ್ಣುಗಳ ರಸವನ್ನು ಹಿಂಡಿ ಒಂದು ಲೋಟದಲ್ಲಿ ಪ್ರತ್ಯೇಕವಾಗಿಡಿ. ಇನ್ನು ಎರಡೂ ಲಿಂಬೆಗಳ ಸಿಪ್ಪೆಗಳನ್ನು ಚಿಕ್ಕದಾಗಿ ತುರಿಯಿರಿ.
- ಎರಡು ಲೋಟ ನೀರುಒಂದು ಚಿಕ್ಕ ಪಾತ್ರೆಯಲ್ಲಿ ಎರಡು ಲೋಟ ನೀರು ಹಾಕಿ ಇದರಲ್ಲಿ ಶುಂಠಿ ಮತ್ತು ಲಿಂಬೆಸಿಪ್ಪೆಯ ತುರಿಯನ್ನು ಸೇರಿಸಿ ಕುದಿಸಿ.
- ಐದಾರು ನಿಮಿಷ ಕುದಿಸಿದ ನಂತರಸುಮಾರು ಐದಾರು ನಿಮಿಷ ಮಧ್ಯಮ ಉರಿಯಲ್ಲಿ ಕುದಿದ ಬಳಿಕ ಉರಿ ಆರಿಸಿ ತಣಿಯಲು ಬಿಡಿ.
- ಅರ್ಧ ಕಪ್ ಜೇನುಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಎರಡು ಮೂರು ಟೇಬಲ್ ಚಮಚ ಜೇನನ್ನು ಸುರಿದು ಕೊಂಚವೇ ಬಿಸಿಮಾಡಿ.
- ಇನ್ನು ಲಿಂಬೆರಸವನ್ನು ಸೇರಿಸಿಜೇನು ಬಿಸಿಯಾಗುತ್ತಿದ್ದಂತೆಯೇ ಕುದಿಸಿ ತಣಿಸಿದ್ದ ನೀರನ್ನು ಇದಕ್ಕೆ ಬೆರೆಸಿ. ಈ ನೀರು ಕೊಂಚ ಬಿಸಿಯಾಗುತ್ತಿದ್ದಂತೆಯೇ ಪ್ರತ್ಯೇಕವಾಗಿರಿಸಿದ್ದ ಲಿಂಬೆರಸವನ್ನು ಸೇರಿಸಿ ಚಮಚದಲ್ಲಿ ಕಲಕುತ್ತಾ ಇನ್ನಷ್ಟು ಬಿಸಿಮಾಡಿ.
- ಉರಿ ಆರಿಸಿ ತಣಿಯಲು ಬಿಡಿಇನ್ನೇನು ಕುದಿಯಲಿದೆ ಎನ್ನುವಾಗ ಉರಿ ಆರಿಸಿ ತಣಿಯಲು ಬಿಡಿ.
ಸಿರಪ್ ರೆಡಿ!
- ಈ ಸಿರಪ್ ಅನ್ನು ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿ ಮುಚ್ಚಳ ಮುಚ್ಚಿ. ಈ ಸಿರಪ್ ಅನ್ನು ಮಕ್ಕಳು ದಿನಕ್ಕೆ ಒಂದರಿಂದ ಎರಡು ಚಮಚ, ಹಿರಿಯರು ದಿನಕ್ಕೆ ಎರಡರಿಂದ ನಾಲ್ಕು ಚಮಚ ಸೇವಿಸಿದರೆ ಕೆಮ್ಮು ತಕ್ಷಣ ಕಡಿಮೆಯಾಗುತ್ತದೆ. ಈ ಸಿರಪ್ ಅನ್ನು ಫ್ರಿಜ್ಜಿನಲ್ಲಿಯೂ ಇಡಬಹುದು ಅಥವಾ ತಣ್ಣನೆಯ ಸ್ಥಳದಲ್ಲಿಯೂ ಸಂಗ್ರಹಿಸಿಡಬಹುದು