ಟೆರೇಸ್ ಗಾರ್ಡನ್‌ನಿಂದ ಸಿಗುವ ಲಾಭಗಳು

ನೀವು ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದು ಗಿಡ ನೆಡಲು ಸ್ಥಳವಿಲ್ಲದಿದ್ದರೂ ಮನೆಯ ಟೆರೇಸ್ ಗಾರ್ಡನ್ ಸಾಕು, ನಿಮ್ಮ ಮನೆ ಮಂದಿ ವರ್ಷ ಪೂರ್ತಿ ತಿನ್ನಲು ಬೇಕಾಗುವಷ್ಟು ತರಕಾರಿ ಬೆಳೆಯಲು. ನೀವೇ ತರಕಾರಿ ಬೆಳೆಯುವುದರಿಂದ ನಿಮಗೆ ದೊರೆಯುವ ಲಾಭಗಳು
ಶುದ್ಧವಾದ ಗಾಳಿ ದೊರೆಯುವುದು
ಯಾವುದೇ ರಾಸಾಯನಿಕವಿಲ್ಲದ ತರಕಾರಿ ತಿನ್ನುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ
ಹಣದ ಉಳಿತಾಯವೂ ಆಗುವುದು ಟೆರೇಸ್ ಗಾರ್ಡನ್ ಮಾಡುವಾಗ ಈ ಟಿಪ್ಸ್ ಪಾಲಿಸಿ
1.ಸಾವಯವ ಪದ್ಧತಿ
ನೀವು ಗಿಡಗಳನ್ನು ಬೆಳೆಯುವಾಗ ಸಾವಯವ ಪದ್ಧತಿ ಅನುಸರಿಸಿ. ಗಿಡಗಳಿಗೆ ಔಷಧಿ ಸಿಂಪಡಿಕೆ ಮಾಡುವುದು, ಕ್ರಿಮಿನಾಶಕಗಳನ್ನು ಬಳಸುವುದು ಮಾಡಬೇಡಿ. ತರಕಾರಿ ಮಾತ್ರವಲ್ಲದೆ ಹಣ್ಣಿನ ಗಿಡಗಳನ್ನೂ ಬೆಳೆಯಬಹುದು. ಸ್ಟ್ರಾಬೆರ್ರಿ ಮುಂತಾದ ಹಣ್ಣುಗಳನ್ನು ಹೂ ಕುಂಡದಲ್ಲಿಯೇ ಬೆಳೆಯಬಹುದು.
2.ನೆಲ ವಾಟರ್‌ಫ್ರೂಫ್ ಆಗಿರಲಿ
ಟೆರೇಸ್ ಗಾರ್ಡನ್ ಮಾಡುವಾಗ ಹೂ ಕುಂಡದಲ್ಲಿ ಹಾಕಿರುವ ನೀರು ಟೆರೇಸ್‌ನ ಕೆಳಗೆ ಸೋರುದಂತೆ ಎಚ್ಚರವಹಿಸಿ, ಇಲ್ಲದಿದ್ದರೆ ಮನೆ ಹಾಳಾಗುವುದು. ಮಣ್ಣಿನ ಹೂ ಕುಂಡಗಳನ್ನು ಬಳಸಿ, ಅದರ ಕೆಳಗಡೆ ನೀರು ಸೋರದಂತೆ ಪ್ಲಾಸ್ಟಿಕ್ ತಟ್ಟೆ ರೀತಿ ಸಿಗುತ್ತದೆ ಅವುಗಳನ್ನು ಇಡಿ.
3.ಮಳೆಗಾಲದಲ್ಲಿ ಗಿಡಗಳ ಆರೈಕೆ
ಮಳೆಗಾಲದಲ್ಲಿ ತುಂಬಾ ನೀರು ಬೀಳದಂತೆ ಎಚ್ಚರವಹಿಸಿ, ಮಳೆ ನೀರಿನಲ್ಲಿ ಮಣ್ಣು ಕೊಚ್ಚಿ ಹೋಗಿದ್ದರೆ ಮಣ್ಣುಗಳನ್ನು ತುಂಬಬೇಕು, ತುಂಬಾ ನೀರು ನಿಂತರೆ ಗಿಡ ಕೊಳೆತು ಹೋಗುವುದು, ಆದ್ದರಿಂದ ಈ ಸಮಯದಲ್ಲಿ ಸ್ವಲ್ಪ ಅಧಿಕ ಜೋಪಾನ ಮಾಡಿ.
4. ಬಿಸಿಲು ಚೆನ್ನಾಗಿ ಬೀಳುವಂತೆ ಇರಬೇಕು
ಟೆರೇಸ್‌ನ ಗಿಡಗಳಿಗೆ ಬಿಸಿಲು ಹೆಚ್ಚಾಗಿ ಬೀಳುತ್ತದೆ, ಆದರೆ ಈ ಬಿಸಲನ್ನು ಸಹಿಸಿ ಬದುಕುವ ಗಿಡಗಳನ್ನು ಬೆಳೆಸಿ. ತುಂಬಾ ಬಿಸಿಲು ಇರುವಾಗ ಸ್ವಲ್ಪ ನೆರಳು ಇರುವಂತೆ ವ್ಯವಸ್ಥೆ ಮಾಡಿ
5. ಬೀಜಗಳು : ನಿಮಗೆ ಟೆರೇಸ್ ಗಾರ್ಡನ್ ಮಾಡಲು ಬೇಕಾಗುವ ಬೀಜಗಳು ಆನ್‌ಲೈನ್‌ನಲ್ಲಿ ಸಿಗುತ್ತವೆ, ಸಾವಯವ ಪದ್ಧತಿಯಲ್ಲಿ ಬೆಳೆದ ಬೀಜಗಳನ್ನು ತರಿಸಿಕೊಳ್ಳಿ. ಅದರ ಬಿತ್ತನೆಯ ವಿಧಾನ ಎಲ್ಲವೂ ಆನ್‌ಲೈನ್‌ನಲ್ಲಿ ಸಿಗುತ್ತದೆ. ಇನ್ನು ಟೆರೇಸ್ ಗಾರ್ಡನ್ ಮಾಡಿದವರ ಬಳಿ ಸಲಹೆಯನ್ನೂ ಪಡೆಯಬಹುದು.ಈ ರೀತಿ ಗಾರ್ಡನ್ ಮಾಡದರೆ ದಿನಾ ಅವುಗಳನ್ನು ನೋಡುತ್ತಿದ್ದರೆ ಮನಸ್ಸಿಗೂ ಒಂಥರಾ, ಒಂಟಿತನ, ಮಾನಸಿಕ ಒತ್ತಡ ಎಲ್ಲವೂ ಅದರಿಂದಾಗಿ ಮಾಯವಾಗುವುದು.