ಸೀಗೆ ಸೊಪ್ಪು ಸಾರು ಮಾಡಿ ಬೊಜ್ಜು ನಿವಾರಿಸಿ

ತಲೆಕೂದಲು ತೊಳೆಯಲು ನೈಸರ್ಗಿಕವಾಗಿ ಬಳಸುವ ಸೀಗೆಪುಡಿ ಇದರ ಬಗ್ಗೆಯೇ ನಾವು ಮಾತನಾಡುತ್ತಿರುವುದು. ಇದರ ಸೊಪ್ಪಿನಿಂದ ತಯಾರಿಸುವ ಮನೆಮದ್ದನ್ನು ಲೇಹ್ಯ ರೂಪದಲ್ಲಿ ಸೇವಿಸಿ ಕೊಬ್ಬನ್ನು ಕರಗಿಸುವಂತೆ ಮಾಡಬಹುದಾಗಿದೆ
ಇದೇ ಸೀಗೆ ಸೊಪ್ಪನ್ನು ನಿಮ್ಮ ಡಯೆಟ್‌ನಲ್ಲಿ ನೀವು ಅತ್ಯವಶ್ಯಕವಾಗಿ ಬಳಸಲೇಬೇಕು ಇದರಿಂದ ಕೊಬ್ಬು ಕರಗಿ ದೇಹ ಸುಂದರ ಕಾಯವನ್ನು ಪಡೆಯುತ್ತದೆ. ಇದು ಆಯುರ್ವೇದ ರೂಪದಲ್ಲಿ ಪ್ರತಿಫಲವನ್ನು ನೀಡುತ್ತದೆ. ಈ ಸಾರನ್ನು ನೀವು ಬೇಗನೇ ಹೆಚ್ಚಿನ ಸಮಯವನ್ನು ಬಳಸದೆಯೇ ಮಾಡಬಹುದು. ಇದಕ್ಕೆ ಬೇಕಾಗಿರುವ ಸಾಮಾಗ್ರಿ ಒಂದು ಮುಷ್ಟಿ ಸೀಗೆಸೊಪ್ಪು, ಉಪ್ಪು ರುಚಿಗೆ ತಕ್ಕಷ್ಟು ವಾಟೆಪುಡಿ ಚಿಟಿಕೆಯಷ್ಟು ಕಾಳುಮೆಣಸು ಅರ್ಧ ಚಮಚ, ಜೀರಿಗೆ ಪುಡಿ ಅರ್ಧ ಚಮಚ, ಬೆಲ್ಲ ರುಚಿಗೆ ತಕ್ಕಷ್ಟು.
ಸೀಗೆಸೊಪ್ಪನ್ನು ಬಾಡುವವರೆಗೆ ಬಾಣಲೆಗೆ ಹಾಕಿ ಹುರಿದುಕೊಳ್ಳಿ. ಹುರಿದ ಸೊಪ್ಪಿಗೆ ಜೀರಿಗೆ, ಉಪ್ಪು, ಕಾಳುಮೆಣಸಿನ ಪುಡಿ, ವಾಟೆಪುಡಿ ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದಕ್ಕೆ ನೀರು ಹಾಕಿ ಐದು ನಿಮಿಷ ಕುದಿಸಿ. ಇದಕ್ಕೆ ತಕ್ಕಷ್ಟು ಉಪ್ಪು ಹಾಕಿ ನಂತರ ಬೆಲ್ಲ ಸೇರಿಸಿ ಮತ್ತುಕುದಿ ಬರುವವರೆಗೆ ಸೀಗೆ ಸೊಪ್ಪನ್ನು ಬೇಯಿಸಿಕೊಳ್ಳಿ. ಈಗ ಸೀಗೆ ಸೊಪ್ಪಿನ ಸಾರು ಸವಿಯಲು ಸಿದ್ಧ.
ಸೀಗೆ ಸೊಪ್ಪು ಹೊಟ್ಟೆ ಕರಗಿಸುವ ಸಾಮರ್ಥ್ಯ ಹೊಂದಿದೆ ಎಂಬುದು ಆಯುರ್ವೇದ ಪಂಡಿತ ಮಾತಾಗಿದೆ. ಅನಾಶ್ಯಕ ಬೊಜ್ಜು ದೇಹದಲ್ಲಿ ಶೇಖರಣೆಯಾಗಿದ್ದರೆ ಅದನ್ನು ನಿವಾರಿಸುವ ತಾಕತ್ತನ್ನು ಇದು ಪಡೆದುಕೊಂಡಿದೆ. ಬಾಣಂತಿಯರಿಗೆ ಈ ಸಾರು ಮಾಡಿ ನೀಡುತ್ತಾರೆ. ನಿದ್ದೆ ಬಾರದೇ ಇರುವವರು ಈ ಸಾರವನ್ನು ಊಟದಲ್ಲಿ ನಿತ್ಯವೂ ಸೇವಿಸುವುದರಿಂದ ನಿದ್ದೆ ಸಮಸ್ಯೆ ದೂರಾಗುತ್ತದೆ. ಈ ಸೊಪ್ಪನ್ನು ಸೇವಿಸುವುದರಿಂದ ಚರ್ಮದ ಕಾಂತಿ ದುಪ್ಪಟ್ಟಾಗುವುದು.
ಮುಖ್ಯವಾಗಿ ಈ ಸಾರಿನ ಬಳಕೆ ಮಾಡುವುದು ದೇಹದ ತೂಕವನ್ನು ನಿವಾರಿಸುವುದಕ್ಕಾಗಿದೆ. ಅನಾವಶ್ಯಕ ಕೊಬ್ಬು ದೇಹದಲ್ಲಿ ಶೇಖರವಾಗಿದ್ದರೆ ಒಂದು ತಿಂಗಳ ಕಾಲ ಈ ಸೊಪ್ಪಿನ ಸಾರು ಮಾಡಿಕೊಂಡು ಸೇವಿಸುವುದರಿಂದ ಬೊಜ್ಜು ಕರಗಿ ಸಪಾಟಾದ ಹೊಟ್ಟೆ ನಿಮ್ಮದಾಗುತ್ತದೆ. ಹಾಗಿದ್ದರೆ ತಡಮಾಡದೇ ಇಂದೇ ಸೀಗೆ ಸೊಪ್ಪಿನ ಸಾರು ಮಾಡಿ ಸೇವಿಸಿ, ಬೊಜ್ಜು ನಿವಾರಿಸಿ.