ಪ್ರಾಣಯಾಮದ ಕೆಲವು ನಿಯಮಗಳು ಗೊತ್ತಾ?

ಪ್ರಾಣಯಾಮದ ಕೆಲವು ನಿಯಮಗಳು 1)ಪ್ರಾಣಯಾಮವನ್ನು ಶುದ್ದ ಸಾತ್ವಿಕ ಹಾಗೂ ನಿರ್ಮಲ ಸ್ಥಾನದಲ್ಲಿ ಮಾಡಬೇಕು. ಸಾಧ್ಯವಿದ್ದರೆ ನೀರಿರುವ ಸ್ಥಳದ ಸಮೀಪ ಕುಳಿತು ಮಾಡಬೇಕು

2) ನಗರಗಳಲ್ಲಿ ಎಲ್ಲಿ ಪ್ರದೂಷಣದ ಪ್ರಭಾವ ಅಧಿಕವಿರುತ್ತದೆಯೋ ಅಲ್ಲಿ ಪ್ರಾಣಯಾಮ ಮಾಡುವ ಮುಂಚೆ ತುಪ್ಪ ಅಥಾವ ಸಾಮ್ರಾಣಿಯಿಂದ ಆ ಸ್ಥಾನವನ್ನು ಸುಗಂದಿತವನ್ನಾಗಿ ಮಾಡಬೇಕು.ಇಷ್ಟೆಲ್ಲಾ ಮಾಡಲು ಸಾಧ್ಯಾವಾಗದಿದ್ದರೆ ಒಂದು ತುಪ್ಪದ ದೀಪವನ್ನು ಹಚ್ಚಬೇಕು.

3) ಪ್ರಾಣಯಾಮ ಮಾಡಲು ಸಿದ್ದಾಸನ, ವಜ್ರಾಸನ, ಅಥಾವ ಪದ್ಮಾಸನದಲ್ಲಿ ಕುಳಿತುಕೊಳ್ಳುವುದ ಉಪಯುಕ್ತವಾಗಿರುತ್ತದೆ.

4) ಉಸಿರನ್ನು ಸದಾ ಮೂಗಿನಿಂದಲೆ ತೆಗೆದುಕೊಳ್ಳಬೇಕು.ಇದರಿಂದ ಶ್ವಾಸವು ಶುದ್ದವಾಗಿ ಒಳಗೆ ಪ್ರವೇಶಿಸುತ್ತದೆ. ದಿನದಲ್ಲೂ ಶ್ವಾಸವನ್ನು ಮೂಗಿನಿಂದಲೇ ತೆಗೆದುಕೊಳ್ಳಬೇಕು. ಇದರಿಂದ ಶರೀರದ ತಾಪಮಾನವು ಕೂಡ ಸುವ್ಯವಸ್ಥಿತವಾಗಿರುತ್ತದೆ.

5) ಪ್ರಾಣಯಾಮ ಮಾಡಲು ಕಡಿಮೆಯೆಂದರೆ ನಾಲ್ಕರಿಂದ ಐದು ಘಂಟೆಗಳ ಮುಂಚೆಯೇ ಊಟ ಮಾಡಬೇಕು.ಪ್ರಾತಃ ಕಾಲದಲ್ಲಿ ಶೌಚದಿಗಳಿಂದ ನಿವ್ರತರಾಗಿ ಯೋಗಸನದ ಮುಂಚೆ ಪ್ರಾಣಯಾಮವನ್ನು ಮಾಡಿದರೆ ಸರ್ವೊತ್ತಮ.

6) ಪ್ರಾಣಯಾಮ ಮಾಡುವಾಗ ಮನಸ್ಸು ಶಾಂತ ಹಾಗೂ ಪ್ರಸನ್ನವಾಗಿರಬೇಕು. ಹಾಗೆ ನೋಡಿದರೆ ಪ್ರಾಣಯಮದಿಂದಲೂ ಕೂಡ ಮನಸ್ಸು ಶಾಂತ ಪ್ರಸನ್ನ ಹಾಗೂ ಏಕಾಗ್ರಗೊಳ್ಳುತ್ತದೆ.

7) ಪ್ರಾಣಯಾಮವನ್ನು ತಮ್ಮ ತಮ್ಮ ಪ್ರಕೃತಿಗನುಸಾರವಾಗಿ ಹಾಗೂ ಋತುವಿಗೆ ಅನುಕೂಲವಾಗುವಂತೆ ಮಾಡಬೇಕು. ಏಕೆಂದರೆ ಕೆಲವು ಪ್ರಾಣಯಾಮಗಳಿಂದ ಶರೀರದಲ್ಲಿ ಉಷ್ಣತೆ ಹೆಚ್ಚುತ್ತದೆ

8) ಪ್ರಾಣಯಾಮ ಮಾಡುವಾಗ ಸುಸ್ತಿನ ಅನುಭವವಾದರೆ ಎರಡನೆ ಪ್ರಾಣಯಾಮ ಮಾಡುವ ಮೊದಲು ಐದು ಆರು ನಿಮೀಷ ದೀರ್ಘ ಶ್ವಾಸವನ್ನು ತೆಗೆದುಕೊಂಡು ವಿಶ್ರಾಂತಿ ಮಾಡಬೇಕು.

9) ಗರ್ಭವತೀ ಮಹಿಳೆ, ಹಸಿವೆಯಿಂದ ಪೀಡಿತನಾದವನು, ಜ್ವರರೋಗಿ, ಹಾಗೂ ಅಜಿತೇಂದ್ರಿಯ ಪುರುಷನಾದವನು ಪ್ರಾಣಯಾಮ ಮಾಡಬಾರದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group