ಜ್ವರದಲ್ಲಿ ಸಾಮಾನ್ಯವಾಗಿ ಬಳಸುವ ಆಯುರ್ವೇದ ಔಷಧಗಳು;

ಆಧುನಿಕ ವೈದ್ಯ ವಿಜ್ಞಾನವು ಜ್ವರವನ್ನು ಒಂದು ಲಕ್ಷಣವೆಂದು ಕರೆದರೆ ಆಯುರ್ವೇದವು ಜ್ವರವನ್ನು ರೋಗಗಳ ರಾಜನೆಂದು ಹೆಸರಿಸಿ ಚಿಕಿತ್ಸೆಯಲ್ಲಿ ಪ್ರಥಮ ಅಧ್ಯಾಯವನ್ನಾಗಿ ಹೇಳಿದ್ದಾರೆ. ಆಯುರ್ವೇದದಲ್ಲಿ ಜ್ವರವು ಕೇವಲ ದೇಹದ ಉಷ್ಣತೆ ಹೆಚ್ಚುವ ಲಕ್ಷಣವಲ್ಲದೆ ದೇಹಾಲಸ್ಯ, ಅಹಿತಭಾವನೆ ಮತ್ತು ಅಸ್ವಸ್ಥತೆಯಿಂದ ಕೂಡಿದ್ದು ದೇಹ ಇಂದ್ರಿಯ ಮತ್ತು ಮನಸ್ಸನ್ನು ಬಾಧಿಸುತ್ತದೆ. ವಾತ ಪಿತ್ತ ಕಫಗಳೆಂಬ ದೋಷಗಳು ಸಾಮಾನ್ಯ ಸ್ಥಿತಿಯಲ್ಲಿದ್ದಾಗ ದೇಹದ ಉಷ್ಣತೆ, ಜೀರ್ಣಕ್ರಿಯೆ, ರಕ್ತ, ಇತರ ದ್ರವಗಳ ಚಲನೆ ಹಾಗು ಪೋಷಕಾಂಶಗಳ ತಲುಪುವಿಕೆಯು ಸರಾಗವಾಗಿ ನಿರಂತರ ನಡೆಯುತ್ತಿರುತ್ತದೆ. ದೋಷಗಳ ಏರುಪೇರಿನಿಂದ ದೇಹದಲ್ಲಿ ಅಹಿತಕರ ಭಾವನೆ, ದೇಹಾಲಸ್ಯ, ನೋವು, ಉಷ್ಣತೆಯ ಹೆಚ್ಚಾಗುವಿಕೆ ಹಾಗು ಉರಿಯೂತಕ್ಕೆ ಕಾರಣವಾಗಬಹುದು.

  • ಬಳಸುವ ಆಯುರ್ವೇದ ಔಷಧಗಳು

ಆಯುರ್ವೇದದ ಔಷಧಿಗಳ ಉಪಯೋಗವನ್ನು ಗಮನಿಸಿದರೆ ಒಂದು ಔಷಧವು ಹಲವಾರು ರೋಗಗಳಿಗೆ ಹೇಳಿರುತ್ತಾರೆ. ಉದಾಹರಣೆಗೆ ಜ್ವರದಲ್ಲಿ ಬಳಸುವ ದ್ರಾಕ್ಷಾದಿ ಎಂಬ ಕಷಾಯವು ಜ್ವರದೊಂದಿಗೆ, ಆಮ್ಲ ಪಿತ್ತದಲ್ಲಿ, ಮದತ್ಯಯ, ವಾಂತಿ, ಉರಿ, ಸುಸ್ತು, ತಲೆತಿರುಗುವಿಕೆ, ರಕ್ತಸ್ರಾವದಂತಹ ತೊಂದರೆಗಳು, ಅತಿಯಾದ ದಾಹ ಮತ್ತು ಕಾಮಾಲೆಯಂತಹ ರೋಗಗಳಲ್ಲಿ ಸೂಚಿತವಾಗಿದೆ. ಹಾಗಾಗಿ ದ್ರಾಕ್ಷಾದಿ ಕಷಾಯವು ಕೇವಲ ಜ್ವರಕ್ಕೆ ಮಾತ್ರವೇ ಬಳಸಬಹುದಾದ ಔಷಧಿಯಲ್ಲ ಬದಲಿಗೆ ರೋಗ ಮತ್ತು ರೋಗಿಯ ಸ್ಥಿತಿಗನುಸಾರವಾಗಿ ಇತರೆ ರೋಗಗಳಲ್ಲಿಯೂ ಉಪಯೋಗಿಸಬಹುದಾಗಿದೆ. ಆದರೆ ಆಧುನಿಕ ವೈದ್ಯವಿಜ್ಞಾನದ ಔಷಧಿಗಳು ಹೆಚ್ಚಾಗಿ ಕೇವಲ ಒಂದು ರೋಗ ಅಥವಾ ರೋಗಲಕ್ಷಣಗಳಿಗೆ ನಿರ್ದಿಷ್ಟವಾಗಿರುತ್ತವೆ. ಆಯುರ್ವೇದದ ಔಷಧಿಗಳು ದೇಹದಲ್ಲಿನ ದೋಷದ ಸ್ಥಿತಿ, ರೋಗ ಮತ್ತು ರೋಗಿಯ ಅವಸ್ಥೆ ಮುಂತಾದುವುಗಳನ್ನು ತಿಳಿದು ನೀಡಲ್ಪಡುತ್ತವೆ. ಈ ಕೆಳಗೆ ಹೇಳಿರುವ ಆಯುರ್ವೇದ ಔಷಧಿಗಳನ್ನು ಸಾಮಾನ್ಯವಾಗಿ ಜ್ವರದ ವಿವಿಧ ಹಂತದ ಚಿಕಿತ್ಸೆಯಲ್ಲಿ ವೈದ್ಯರು ಬಳಸುತ್ತಾರೆ.

ಅಮೃತೋತ್ತರ ಕಷಾಯ

ದ್ರಾಕ್ಷಾದಿ ಕಷಾಯ

ಗುಲುಚ್ಯಾದಿ ಕಷಾಯ ಅ

ಮೃತಾರಿಷ್ಠ

ಸುದರ್ಶನ ವಟಿ

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group