ಮನೆಯಲ್ಲಿಯೇ ಸಾವಯವ ಕಳೆನಾಶಕ ತಯಾರಿಸುವುದು ಹೇಗೆ?

ಮಾರುಕಟ್ಟೆಯಲ್ಲಿ ಸಿಗುವಂತಹ ರಾಸಯನಿಕ ಕಳೆನಾಶಕಗಳು ಬಹಳ ದುಬಾರಿಯಾಗಿರುತ್ತದೆ. ಅಷ್ಟು ಹಣ ಖರ್ಚು ಮಾಡಿ ಅಂತಹ ರಾಸಯನಿಕ ಕಳೆನಾಶಕಗಳನ್ನು ಬಳಸಿದರೂ ಕೆಲವೊಂದು ಸಲ ಅದು ಕೆಲಸ ಮಾಡುತ್ತದೆ ಕೆಲವೊಮ್ಮೆ ಕೆಲಸ ಮಾಡುವುದಿಲ್ಲ. ಹಾಗು ರೈತರು ಈ ರೀತಿಯ ಕಳೆನಾಶಕಗಳನ್ನು ಮಾಡಲು ದುಬಾರಿ ಹಣ ಖರ್ಚು ಮಾಡಬೇಕಾಗುತ್ತದೆ. ಇದರಿಂದ ರೈತರಿಗೆ ಹಣವು ನಷ್ಟವಾಗುತ್ತದೆ ಹಾಗು ರಾಸಯನಿಕ ಕಳೆನಾಶಕ ಬಳಸುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿ ಮಣ್ಣು ಹಾನಿಯಾಗುತ್ತದೆ ಮತ್ತು ರೈತರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಹಾಗು ರೈತರು ಬೆಳೆದ ಬೆಳೆಗಳು ಹಾನಿಯಾಗುತ್ತದೆ. ಇಂತಹ ಸಮಯದಲ್ಲಿ ರೈತರು ಮನೆಯಲ್ಲಿಯೆ ಸುಲಭವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಸಾವಯವ ಕಳೆನಾಶಕ ತಯಾರಿಸಬಹುದು. ಕಳೆನಾಶಕ ತಯಾರಿಸಲು ಬೇಕಾಗುವ ಸಾಮಗ್ರಿಗಳು
1) 25 ಲೀಟರ್ ಸಾಮರ್ಥ್ಯದ ಡ್ರಮ್
2) 15 ಲೀಟರ್ ಗೋ ಮೂತ್ರ
3) 3 ಕೇಜಿ ದಪ್ಪನೆಯ ಹರಳು ಉಪ್ಪು
4) 1 ಕೇಜಿ ಸುಣ್ಣದ ಕಲ್ಲು
5) 3 ದೊಡ್ಡಗಾತ್ರದ ನಿಂಬೆಹಣ್ಣು
6) 2 ಕೇಜಿ ಬಿಳಿ ಎಕ್ಕದ ಗಿಡದ ಎಲೆಗಳು ಕಳೆನಾಶಕ ತಯಾರಿಸುವ ವಿಧಾನ: ಮೊದಲಿಗೆ ಬಿಳಿ ಎಕ್ಕದ ಗಿಡದ ಎಲೆಗಳನ್ನು ಚೆನ್ನಾಗಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಬೇಕು. ಅದಕ್ಕೆ 15 ಲೀಟರ್ ಗೋ ಮೂತ್ರವನ್ನು ಬೆರೆಸಿ 25 ಲೀಟರ್ ಸಾಮರ್ಥ್ಯದ ಡ್ರಮ್ ನಲ್ಲಿ ಚೆನ್ನಾಗಿ ಇವೆರಡನ್ನು ಬೆರೆಸಿಕೊಳ್ಳಬೇಕು. ನಂತರ ಇದಕ್ಕೆ 1 ಕೇಜಿ ಸುಣ್ಣದ ಕಲ್ಲನ್ನು ಹಾಕಿ ಬೆರಿಸಿಕೊಳ್ಳಬೇಕು ನಂತರ ಇದಕ್ಕೆ 3 ಕೇಜಿ ಹರಳುಉಪ್ಪನ್ನು ಹಾಕಿ ಚೆನ್ನಾಗಿ ಬೆರಿಸಿಕೊಳ್ಳಬೇಕು. ಇವೆಲ್ಲವನ್ನು ಬೆರೆಸಿದ ನಂತರ ಒಂದು ಉದ್ದನೆಯ ಕೋಲಿನಿಂದ ಡ್ರಮ್ ಅಲ್ಲಿರುವ ಈ ದ್ರಾವಣವನ್ನು ಎಡದಿಂದ ಬಲಕ್ಕೆ ಚೆನ್ನಾಗಿ ತಿರುಗಿಸಬೇಕು. ನಂತರ ಈ ಡ್ರಮ್ಮನ್ನು ಒಳಗೆ ಗಾಳಿ ಹೊಗದಂತೆ ಮುಚ್ಚಳದಿಂದ ಗಟ್ಟಿಯಾಗಿ ಮುಚ್ಚಿ ಇದನ್ನು ಒಂದು ವಾರದ ತನಕ ಕೊಳೆಯಲು ಬಿಡಬೇಕು.
ಒಂದು ವಾರದ ನಂತರ ಈ ಕಳೆನಾಶಕ ಚೆನ್ನಾಗಿ ಮಿಶ್ರಣವಾಗಿ ಸಾವಯವ ಕಳೆನಾಶಕ ಸಿದ್ಧವಾಗುತ್ತದೆ. ಹಾಗು ಒಂದು ವಾರದ ನಂತರ ದೊಡ್ಡ ಮೂರು ನಿಂಬೆರಸವನ್ನು ಹಿಂಡಬೇಕು ಹೀಗೆ ತಯಾರಿಸಿದ ಒಂದು ಲೀಟರ್ ಕಳೆನಾಶಕ ಮಿಶ್ರಣವನ್ನು ಹತ್ತು ಲೀಟರ್ ನೀರಿಗೆ ಬೆರೆಸಿ ಕಳೆಮೇಲೆ ಸಿಂಪಡಿಸಿದರೆ ಕಳೆಗಳೆಲ್ಲ ನಾಶವಾಗುತ್ತದೆ.