ರಕ್ತ ಅಶುದ್ದವಾದರೆ ರಕ್ತವನ್ನು ಶುದ್ಧಿ ಮಾಡುವುದು ಹೇಗೆ?

ರಕ್ತವನ್ನು ಶುದ್ಧೀಕರಣ ಮಾಡುವ ಸುಲಭ ವಿಧಾನ:
1) ಒಂದು ಹಿಡಿ ಗರಿಕೆ ಹುಲ್ಲನ್ನು ಅರ್ದ ಲೋಟ ನೀರಿಗೆ ಹಾಕಿ ನುಣ್ಣಗೆ ಜ್ಯೂಸ್ ಮಾಡಿ ಅದನ್ನು ಚೆನ್ನಾಗಿ ಶೋಧಿಸಿ ಪ್ರತಿದಿನ ಬೆಳಿಗ್ಗೆ ಕುಡಿಯುವುದರಿಂದ ರಕ್ತ ಶುದ್ಧಿಕರಣವಾಗುತ್ತದೆ.
2) ನೆಲನೆಲ್ಲಿಯನ್ನು ಒಣಗಿಸಿ ಅದನ್ನು ಚೆನ್ನಾಗಿ ಪುಡಿಮಾಡಿ ಅದಕ್ಕೆ ಒಂದು ಚಮಚ ಬೆಲ್ಲದ ಪುಡಿಯನ್ನು ಸೇರಿಸಿ ಪ್ರತಿದಿನ ಬೆಳಿಗ್ಗೆ ಕುಡಿಯುವುದರಿಂದ ರಕ್ತವು ಶುದ್ಧಿಯಾಗುತ್ತದೆ.
3) ರಕ್ತದ ಶುದ್ಧಿಗೆ ಮೊದಲನೆಯ ಮದ್ದು ಉಪವಾಸ ಎರಡು ಎರಡು ತಾಸುಗಳಿಗೆ ವಿವಿಧ ಹಣ್ಣುಗಳ ಜ್ಯೂಸನ್ನು ಕುಡಿಯುವುದು ಮತ್ತು ಎಳೆನೀರನ್ನು ಕುಡುಯುವುದರಿಂದ ರಕ್ತದ ಶುದ್ಧಿಕರಣಕ್ಕೆ ಸಹಾಯ ಮಾಡುತ್ತದೆ.
4) ಸೊಗದೆ ಬೇರನ್ನು ಒಣಗಿಸಿ ಅದನ್ನು ಚೆನ್ನಾಗಿ ಪುಡಿಮಾಡಿ ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಗೂ ಬೆಲ್ಲವನ್ನು ಹಾಕಿ ಕುಡಿಯುವುದರಿಂದ ರಕ್ತವು ಶುದ್ಧಿಕರಣವಾಗುತ್ತದೆ.
5) ಅಮ್ರತಬಳ್ಳಿ ಹಾಗೂ ಮಂಜಿಷ್ಟ ಹಾಗೂ ಬೇವಿನಸೊಪ್ಪು ಮತ್ತು ಅಣಲೆ ಕಾಯಿ ಈ ಎಲ್ಲ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ ಕಷಾಯ ಮಾಡಿ ವಾರಕ್ಕೆ ಎರಡು ಬಾರಿಯಂತೆ ಕುಡಿಯುವುದರಿಂದ ರಕ್ತವು ಶುದ್ಧಿಕರಣವಾಗುತ್ತದೆ.
6) ಹಾಗಲಕಾಯಿ ಹಾಗೂ ಬೇವಿನಸೊಪ್ಪು ಹಾಗೂ ನೆಲ್ಲಿಕಾಯಿ ಮತ್ತು ಪಡುವಲಕಾಯಿ ಈ ತರಕಾರಿಗಳನ್ನು ಆಹಾರದಲ್ಲಿ ಬಳಸುವುದರಿಂದ ರಕ್ತವನ್ನು ಶುದ್ಧಿಕರಣಗೊಳಿಸಲು ಸಹಾಯ ಮಾಡುತ್ತದೆ.
7) ಎರಡು ಮೂರು ಹೆಸಳು ಬೆಳ್ಳುಳಿಯನ್ನು ಬೆಳಗ್ಗೆ ಎದ್ದ ಕೂಡಲೆ ಖಾಲಿ ಹೊಟ್ಟೆಯಲ್ಲಿ ತಿಂದು ಸ್ವಲ್ಪ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ರಕ್ತವು ಶುದ್ದಿಕರಣವಾಗುತ್ತದೆ.
8) ಒಂದು ಲೋಟ ಕ್ಯಾರೆಟ್ ಜ್ಯೂಸ್ ಗೆ ಎರಡು-ಮೂರು ಬೆಳ್ಳುಳಿ ಎಸಳನ್ನು ಪೇಸ್ಟ್ ಮಾಡಿ ಅದನ್ನು ಕ್ಯಾರೆಟ್ ಜ್ಯೂಸ್ ಗೆ ಸೇರಿಸಿ ಹಾಗೂ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಕುಡಿಯುವುದರಿಂದ ರಕ್ತವು ಶುದ್ಧಿಕರಣವಾಗುತ್ತದೆ.