ನಿಮ್ಮ ಹೃದಯದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುವ 9 ಹಣ್ಣುಗಳು

ನಿಮ್ಮ ಆಹಾರಕ್ರಮದಲ್ಲಿ ನೀವು ಸೇರಿಸಬಹುದಾದ ಹಣ್ಣುಗಳ ಪಟ್ಟಿ

1)ಕಲ್ಲಂಗಡಿ: ಒಂದು ಕಪ್ ಕಲ್ಲಂಗಡಿ ನಿಮ್ಮ ಸಂಜೆಯ ತಿಂಡಿಯ ಸಮಯದಲ್ಲಿ ನಿಮಗೆ ತಾಜಾತನವನ್ನು ನೀಡುತ್ತದೆ.

2)ಅನಾನಸ್: ರುಚಿಯಾದ, ಕಟುವಾದ ಹಣ್ಣು, ನೀವು ಇದನ್ನು ಹಣ್ಣಿನ ರೂಪದಲ್ಲಿ ಅಥವಾ ರಸವಾಗಿ ಸೇವಿಸಬಹುದು.

3)ಪೀಚ್ ಹಣ್ಣು: ಸುಟ್ಟ ಬ್ರೆಡ್‌ನ ಸ್ಲೈಸ್‌ನೊಂದಿಗೆ ಸಿಹಿಯಾದ, ರಸಭರಿತವಾದ ಪೀಚ್‌ಗಿಂತ ಉತ್ತಮವಾದದ್ದು ಇನ್ನೇನಿದೆ.

4)ಮರಸೇಬು: ಒಂದು ಸಣ್ಣ ಮರಸೇಬಿನ ಒಳಿತು ಎಷ್ಟಿದೆ ಎಂದರೆ ಅದು ನಿಮ್ಮ ಹೃದಯ ಮತ್ತು ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು ಸರಿಯಾದ ಪ್ರಮಾಣದ ಪೋಷಕಾಂಶಗಳನ್ನು ಹೊಂದಿರುತ್ತದೆ.

6)ಬೆರಿಹಣ್ಣುಗಳು/ನಯಹಣ್ಣು: ಬೆರಿಹಣ್ಣುಗಳು, ಬ್ಲ್ಯಾಕ್‌ಬೆರ್ರಿಗಳು ಮತ್ತು ಚೆರ್ರಿಗಳು ಸಹ ಬೆಳಗ್ಗೆಯಿಂದ ಮಧ್ಯಾಹ್ನದ ಹೊತ್ತಿಗೆ ತಿನ್ನಬಹುದಾದ ಅತ್ಯುತ್ತಮ ತಿಂಡಿಗಳಾಗಿವೆ.

7)ಸೇಬು: ಒಳ್ಳೆಯ ಸೇಬು ಖಂಡಿತವಾಗಿಯೂ ವೈದ್ಯರನ್ನು ದೂರವಿರಿಸುತ್ತದೆ. ನಿಮಗೆ ಸೇಬಿನ ಜ್ಯೂಸ್ ಇಷ್ಟ ಆಗಿದ್ದರೆ, ಬೇರೆ ಪಾನೀಯಗಳ ಬದಲಿಗೆ ನೀವು ಇದನ್ನೆ ಸೇವಿಸಬಹುದಾಗಿದೆ.

8)ದ್ರಾಕ್ಷಿಗಳು: ನಿಮ್ಮ ಸಿಹಿ ಪದಾರ್ಥಗಳ ಬಯಕೆಯನ್ನು ಪೂರೈಸಲು ದ್ರಾಕ್ಷಿ ಹಣ್ಣಿನ ಒಂದು ಗೊಂಚಲು ಅತ್ಯುತ್ತಮ ಮಾರ್ಗ! ದ್ರಾಕ್ಷಿಯಲ್ಲಿ ಕಡಿಮೆ ಪೊಟ್ಯಾಸಿಯಮ್ ಇರುವುದರಿಂದ ನಿಮಗೆ ಮೂತ್ರಪಿಂಡದ ಸಮಸ್ಯೆ ಇದ್ದರೂ ನೀವು ಇದನ್ನು ಸುರಕ್ಷಿತವಾಗಿ ತಿನ್ನಬಹುದು.

9)ಪ್ಲಮ್ ಹಣ್ಣು: 1 ಸಣ್ಣ ಪ್ಲಮ್ ಹಣ್ಣಿನಲ್ಲಿರುವ ಪ್ರಯೋಜನಗಳನ್ನು ಇತರ ಹಣ್ಣುಗಳೊಂದಿಗೆ ಹೋಲಿಸಲಾಗುವುದಿಲ್ಲ!

ನೆನಪಿಡಿ, ಮಿತವಾಗಿ ಸೇವಿಸುವುದೆ ಕೀಲಿಕೈ! ನಿಮ್ಮ ಪೊಟ್ಯಾಸಿಯಮ್ ಮಟ್ಟವನ್ನು ಕಾಪಾಡಿಕೊಳ್ಳಲು ಈ ಯಾವುದೇ ಹಣ್ಣುಗಳಲ್ಲಿ ½ ಕಪ್ ತಿನ್ನಿರಿ, ಅಥವಾ ವೈದ್ಯರು ಸೂಚಿಸಿರುವಂತೆ ಇದನ್ನು ಸೇವಿಸಿ. ನಿಮ್ಮ ಆಹಾರದಲ್ಲಿ ಬಗೆಬಗೆಯ ಹಣ್ಣುಗಳನ್ನು ಸೇರಿಸಲು ನೀವು ಬಯಸಿದರೂ, ಅದನ್ನು ಸೀಮಿತ ಪ್ರಮಾಣದಲ್ಲಿ ಸೇರಿಸಿ. ನೀವು ಈಗಾಗಲೇ ಹೆಚ್ಚಿನ ಪೊಟ್ಯಾಸಿಯಮ್‌ನಿಂದ ಬಳಲುತ್ತಿದ್ದರೆ ಈ ಯಾವುದೇ ಹಣ್ಣುಗಳನ್ನು ಹೆಚ್ಚು ತಿನ್ನುವುದರಿಂದ ನಿಮ್ಮ ಪೊಟ್ಯಾಸಿಯಮ್ ಮಟ್ಟವು ಹೆಚ್ಚಾಗುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group