ಮೇ16 ರಾಷ್ಟ್ರೀಯ ಡೆಂಗ್ಯೂ ದಿನ;

ಐದಾರು ವರ್ಷಗಳ ಹಿಂದೆ ಡೆಂಘೀ ಜ್ವರ ಭಾಗಶಃ ಜನರನ್ನು ಕಾಡಿತ್ತು. 2017ರಲ್ಲಿ ಬರೋಬ್ಬರಿ 17 ಸಾವಿರಕ್ಕೂ ಹೆಚ್ಚು ಜನರು ಡೆಂಘೀ ಜ್ವರದಿಂದ ಬಳಲಿದ್ದರು. ಹೀಗಾಗಿ, ರಾಷ್ಟ್ರೀಯ ರೋಗವಾಹಕ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅನ್ವಯ ಭಾರತ ಸರ್ಕಾರದ ಮಾರ್ಗಸೂಚಿಯಂತೆ, ವಿವಿಧ ರೋಗವಾಹಕ ಆಶ್ರಿತ ರೋಗಗಳ ಮುಂಜಾಗ್ರತಾ ಹಾಗೂ ನಿಯಂತ್ರಣ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಇದರ ವಿಶೇಷವಾಗಿ ಡೆಂಘೀ ನಿಯಂತ್ರಣದಲ್ಲಿ ರೋಗ ಪ್ರಸರಣ ಅವಧಿಯ ಮುನ್ನವೇ ಸಮುದಾಯವನ್ನು ಸಜ್ಜುಗೊಳಿಸುವಿಕೆ ಮತ್ತು ಸಂಬಂಧಪಟ್ಟ ಇಲಾಖೆಗಳ ಸಹಯೋಗದ ಮೂಲಕ ಡೆಂಘೀ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ವ್ಯಾಪಕ ಜನ ಜಾಗೃತಿ ಅಭಿಯಾನದ ಉದ್ದೇಶದಿಂದ, ಭಾರತ ಸರ್ಕಾರದ ಮಾರ್ಗ ಸೂಚಿಯಂತೆ, ಪ್ರತಿ ಮೇ 16ರಂದು ರಾಷ್ಟ್ರೀಯ ಡೆಂಘೀ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ವರ್ಷದ ಘೋಷ ವಾಕ್ಯವಾಗಿ,’ಡೆಂಘೀ ತಡೆಗಟ್ಟಬಹುದು, ಬನ್ನಿ ಎಲ್ಲರೂ ಕೈಜೋಡಿಸೋಣ’ ಎಂಬುದಾಗಿದೆ.
- ಡೆಂಘೀ ಹರಡದಂತೆ ನಿಯಂತ್ರಣ ಕ್ರಮವೇನು? :
- ಮನೆಯಲ್ಲಿ ತೊಟ್ಟಿ, ಬ್ಯಾರೆಲ್, ಡ್ರಂಗಳಲ್ಲಿನ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ. ಉಜ್ಜಿ ತೊಳೆದು ಪುನಃ ನೀರು ತುಂಬಿಸುವುದು. ಹಾಗೇ ತೊಟ್ಟಿ, ಬ್ಯಾರೆಲ್ ಡ್ರಂಗಳನ್ನು ಯಾವಾಗಲೂ ಮುಚ್ಚಿಡುವುದು.
- ಮನೆಯ ಸುತ್ತಮುತ್ತ ಎಸೆದಿರುವ ವಸ್ತುಗಳಲ್ಲಿ ಮಳೆ ನೀರು ಶೇಖರಣೆಯಾಗದಂತೆ ಎಚ್ಚರಿಕೆವಹಿಸುವುದು.
- ಈಡಿಸ್ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವವರು,
- ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರು ಸೊಳ್ಳೆ ಪರದೆಯನ್ನು ಬಳಸಬೇಕು.