2022;ಬುದ್ಧ ಪೂರ್ಣಿಮ ದಿನ ಇಂದು

ಏ‍ಷ್ಯಾದ ಬೆಳಕು ಎಂದೇ ಪ್ರಖ್ಯಾತಿ ಪಡೆದ ಬೌದ್ಧ ಧರ್ಮದ ಸಂಸ್ಥಾಪಕ ಗೌತಮ ಬುದ್ಧ. ಸಕಲ ಸೌಕರ್ಯ, ಮಹಾ ವೈಭೋಗದ ಜೀವನದಿಂದ ಮುಕ್ತಿ‌ ಪಡೆದು ತನ್ನ 29ನೇ ವಯಸ್ಸಿಗೇ ಜಗದ ಸತ್ಯ ಶೋಧನೆಗಾಗಿ ಪ್ರಪಂಚ ಪರ್ಯಟನೆ ನಡೆಸಿದ ಮಹಾನ್‌ ಸಂತ.ಬಡವರು ಹಾಗೂ ದುರ್ಬಲರಿಗಾಗಿ ತನ್ನ ಜೀವನವನ್ನೇ ಮುಡಿಪಿಟ್ಟು, ಸತ್ಯ ದರ್ಶನದ ಬಗ್ಗೆ ಜನರಿಗೆ ಬೋಧನೆಗಳನ್ನು ನೀಡುತ್ತಿದ್ದ ಬುದ್ಧನ ಸಾವಿರಾರು ಹೇಳಿಕೆಗಳು ಇಂದಿಗೂ ಪ್ರಸ್ತುತ ಹಾಗೂ ಎಲ್ಲರಿಗೂ ಜೀವನಪಾಠವಾಗಿದೆ.

ಈ ದಿನದ ವಿಶೇಷ ನಾವಿಂದು ಈ ಲೇಖನದಲ್ಲಿ ಬುದ್ಧ ಬೋಧಿಸಿದ ತತ್ವಗಳನ್ನು (ಕೋಟ್ಸ್‌) ಹಾಗೂ ಬುದ್ಧ ಪೌರ್ಣಿಮ ಶುಭಾಶಯಗಳನ್ನು ಇಲ್ಲಿ ನೀಡಲಿದ್ದೇವೆ:

1. ನಿಮ್ಮೆಲ್ಲರ ಒತ್ತಡಗಳಿಗೂ ನೀವು ಪ್ರತಿಕ್ರಿಯಿಸುವ ಬಗೆಯೇ ಕಾರಣ. ಆದ್ದರಿಂದ ಸ್ಪಂದಿಸಲು ಕಲಿಯಿರಿ, ಪ್ರತಿಕ್ರಿಯಿಸಬೇಡಿ. -ಗೌತಮ ಬುದ್ಧ

2.ಸಾವಿರ ಯುದ್ಧಗಳನ್ನು ಗೆಲ್ಲುವುದಕ್ಕಿಂತ ನಿಮ್ಮನ್ನು ನೀವು ಗೆಲ್ಲುವುದು ಉತ್ತಮ, ಇದೇ ನಿಜವಾದ ವಿಜಯ. ಇದನ್ನು ನಿಮ್ಮಿಂದ ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. -ಗೌತಮ ಬುದ್ಧ

3. ಪ್ರತಿಯೊಂದರಲ್ಲೂ ಒಳ್ಳೆಯದನ್ನೇ ನೋಡಲು ನಿಮ್ಮ ಮನಸ್ಸಿಗೆ ತರಬೇತಿ ನೀಡಿ. -ಗೌತಮ ಬುದ್ಧ

4. ಪ್ರತಿ ಮನುಷ್ಯ ತನ್ನ ಮತ್ತು ಅನಾರೋಗ್ಯದ ಲೇಖಕನಾಗಿರುತ್ತಾನೆ. -ಗೌತಮ ಬುದ್ಧ

5. ನೀವು ಮೌನವಾಗಿದ್ದರೆ ಹೆಚ್ಚಾಗಿ ಕೇಳಿಸಿಕೊಳ್ಳಬಹುದು. -ಗೌತಮ ಬುದ್ಧ

6. ಕೋಪವನ್ನು ಹಿಡಿದಿಟ್ಟುಕೊಳ್ಳುವುದು ಒಂಥರಾ ನಾವು ವಿಷ ಕುಡಿದು ಬೇರೆಯವರು ಸಾಯಲಿ ಎಂದು ನಿರೀಕ್ಷೆ ಮಾಡಿದಂತೆ. -ಗೌತಮ ಬುದ್ಧ

7. ತನಗೂ ಒಂದು ದಿನ ಸಾವಿದೆ ಎಂದು ಅರಿತವನು ಎಂದಿಗೂ ಇತರರಿಗೆ ತೊಂದರೆ ಕೊಡಲಾರ. -ಗೌತಮ ಬುದ್ಧ

8. ಯಾರ ಮನಸ್ಸಿನಲ್ಲಿ ತಾನೇ ಎಂಬ ಅಹಂ ಇರುತ್ತದೆಯೋ ಅವರಿಗೆ ತನ್ನ ತಪ್ಪಿನ ಅರಿವೇ ಆಗುವುದಿಲ್ಲ. -ಗೌತಮ ಬುದ್ಧ

9. ನಿಮ್ಮ ಬಳಿ ಏನಿದೆಯೋ ಅದಕ್ಕೆ ಸಂತೋಷಪಡಿ ಹಾಗೂ ಅದನ್ನು ಎಂದಿಗೂ ಗೌರವಿಸಿ, ಏಕೆಂದರೆ ಕೆಲವರ ಬಳಿ ಏನೂ ಇರುವುದಿಲ್ಲ. -ಗೌತಮ ಬುದ್ಧ

10. ನಿಮ್ಮ ಕೋಪ ನಿಮಗೆ ಶಿಕ್ಷೆಯಾಗುವುದಿಲ್ಲ, ನಿಮ್ಮ ಕೋಪದಿಂದ ನಿಮಗೆ ಶಿಕ್ಷೆಯಾಗುತ್ತದೆ. -ಗೌತಮ ಬುದ್ಧಬುದ್ಧ ಪೌರ್ಣಿಮ ಶುಭಾಶಯಗಳು

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group