ಬೆಳಿಗ್ಗೆ ಎದ್ದು ಧ್ಯಾನ ಮಾಡಲು ಸಹಾಯಕವಾಗಿರುವ ಸಲಹೆಗಳು

1. ಧ್ಯಾನ ಮಾಡುವ ಸಲುವಾಗಿ ಒಂದು ಪ್ರತ್ಯೇಕ ಜಾಗವನ್ನು ಮಾಡಿಕೊಳ್ಳಿ ಧ್ಯಾನ ಮಾಡುವ ಸ್ಥಳವನ್ನು ನಿರ್ಧರಿಸಿ ಅಲ್ಲಿ ಒಳ್ಳೆಯ ಅಲಂಕಾರಿಕ ವಸ್ತುಗಳನ್ನು ನೇತುಹಾಕಿ. ನಿಮಗೆ ಇಷ್ಟವಿರುವ ಹೂವು ಮತ್ತು ಸುಗಂಧವಿರುವ ಸಸಿಗಳನ್ನು ಹತ್ತಿರದ ಮೇಜಿನ ಮೇಲೆ ತಂದಿರಿಸಿ. ಆ ಕೋಣೆಯನ್ನು ಶಾಂತ ಬಣ್ಣಗಳಾದ, ತಿಳಿಹಳದಿ, ತಿಳಿನೀಲಿ ಅಥವಾ ಹಸಿರು ಬಣ್ಣದಿಂದ ಅಲಂಕರಿಸಿ. ಸೋಫ ಅಥವಾ ಕುರ್ಚಿಯನ್ನು, ದಿಂಬು ಅಥವಾ ತೆಳು ಹೊದಿಕೆಯಿಂದ ಅಲಂಕರಿಸಿ.
2. ಬೆಳಿಗ್ಗೆ ತಿಂಡಿಯನ್ನು ಧ್ಯಾನದ ನಂತರ ತೆಗೆದುಕೊಳ್ಳಿಖಾಲಿ ಹೊಟ್ಟೆಯಲ್ಲಿ ಧ್ಯಾನ ಮಾಡುವುದು ಉತ್ತಮ ಅದನ್ನು ರೂಢಿಸಿಕೊಳ್ಳಿ.
3. ಬೆಳಗ್ಗಿನ ದಿನಚರಿಯನ್ನು ನಡೆದಾಡುವ ಅಭ್ಯಾಸದಿಂದ ಆರಂಭಿಸಿ.ಪ್ರಕೃತಿಯ ಜೊತೆ ಇರುವುದರಿಂದ ಅದು ನಮ್ಮನ್ನು ಜೀವನದ ಮೂಲ ಸ್ಥಿತಿಗೆ ಜೋಡಿಸುತ್ತದೆ.ಬೆಳಿಗ್ಗೆ ಎದ್ದು ಧ್ಯಾನಕ್ಕೂ ಮೊದಲು ನಡೆದಾಡುವುದರಿಂದ ತಾಜಾ ಹವಾ ನಮಗೆ ಉಸಿರಾಡಲು ಸಿಗುತ್ತದೆ ಹಾಗು ಗಿಡಗಳ ಮೇಲಿನ ತುಂತುರು ಹನಿಗಳನ್ನು ಅನುಭವಿಸುತ್ತಾ ಶಾಂತ ಮನಸ್ಥಿತಿಗೆ ಹೋಗುತ್ತೇವೆ.
4. ಧ್ಯಾನಕ್ಕೂ ಮೊದಲು ದೇಹದ ವ್ಯಾಯಾಮ ಮಾಡಿನಿಮಗೆ ಬೆಳಗ್ಗೆ ಎದ್ದು “ಜಾಗಿಂಗ್” ಮಾಡುವುದು ಅಥವಾ ವ್ಯಾಯಾಮ ಮಾಡುವುದು ಉತ್ಸಾಹ ತರುತ್ತಿದ್ದರೆ,ಅದನ್ನು ಮಾಡಿ ನಂತರ ಧ್ಯಾನಕ್ಕೆ ಕುಳಿತುಕೊಳ್ಳಿ. ಧ್ಯಾನವು ನಿಮ್ಮ ದೇಹವನ್ನು ತಂಪು ಮಾಡಿ, ವಿಶ್ರಾಂತಿ ಕೊಡುತ್ತದೆ ಹಾಗು ಅದರ ಜೊತೆಗೆ ಮನಸ್ಸನ್ನು ಉಲ್ಲಾಸದಾಯಕವಾಗಿ ಇರಿಸುತ್ತದೆ.
5. ಧ್ಯಾನಕ್ಕೆ ಮೊದಲು ಯೋಗದ ಭಂಗಿಗಳನ್ನು ಮಾಡಿ ವಿಶ್ರಾಂತಿ ಪಡೆದುಕೊಳ್ಳಿ.ಬೆಳಗ್ಗಿನ ನಡೆದಾಡುವಿಕೆ, ವ್ಯಾಯಾಮ, ಯೋಗ, ಇವುಗಳು ನಮ್ಮ ಸ್ನಾಯುಗಳನ್ನು ಸಡಿಲಿಸುತ್ತದೆ.ಇಲ್ಲಿ ಕೆಲವು ವಿಶ್ರಾಂತಿದಾಯಕ ಯೋಗದ ಭಂಗಿಗಳ ಬಗ್ಗೆ ತಿಳಿಸಲಾಗಿದೆ, ನೀವೂ ಪ್ರಯತ್ನಿಸಬಹುದು.
6.ಧ್ಯಾನಕ್ಕೆ ಹೋಗುವ ಮೊದಲು ಪ್ರಾಣಾಯಾಮ ಮಾಡಿದರೆ ದೇಹ ಹಾಗು ಮನಸ್ಸಿಗೆ ಚೈತನ್ಯ ಸಿಗುತ್ತದೆ.. “ಪ್ರಾಣಾಯಾಮ” ಎಂದರೆ “ಜೀವನದ ಬಲವನ್ನು ಹೆಚ್ಚಿಸುವಿಕೆ” ಎಂದು ಸಂಸ್ಕ್ರತದಲ್ಲಿ ಹೇಳುತ್ತಾರೆ. ಧ್ಯಾನಕ್ಕೆ ಮೊದಲು ಒಂದೆರಡು “ಪ್ರಾಣಾಯಾಮ” ಉಸಿರಿನ ವ್ಯಾಯಾಮಗಳನ್ನು ಮಾಡಿದರೆ ಅದು ದೇಹ ಮತ್ತು ಮನಸ್ಸಿಗೆ ತಂಪು ನೀಡಿ ಧ್ಯಾನಕ್ಕೆ ಸಹಕಾರಿಯಾಗುವಂತೆ ಮನಸ್ಸಿಗೆ ಮುದ ನೀಡುತ್ತದೆ.
7. ನೀವು ಧ್ಯಾನಕ್ಕೆ ಸಿದ್ಧರಾದಾಗ, ನಿಮಗೆ ಎಲ್ಲಿ ಆರಾಮವಾಗಿದೆಯೋ ಅಲ್ಲಿ ಕುಳಿತು ಧ್ಯಾನದಲ್ಲಿ ತೊಡಗಿರಿ
8. ಧ್ಯಾನದ ನಂತರ ಏಳುವ ಮೊದಲು ಕೆಲ ನಿಮಿಷಗಳು ನಿಶ್ಯಬ್ಧವಾಗಿದ್ದು ನಂತರ ದಿನದ ಚಟುವಟಿಕೆಗಳನ್ನು ಆರಂಭಿಸಿರಿ.