ನೆಲ್ಲಿಕಾಯಿ ಜ್ಯೂಸನ್ನು ಕುಡಿಯುವುದರಿಂದ ಆಗುವ ಉಪಯೋಗಗಳು;

ಬಾಯಿಗೆ ಕಹಿ ಆಗುವ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮ್ರದ್ದವಾಗಿದೆ ಇದರಲ್ಲಿ ಕಿತ್ತಳೆ ಹಣ್ಣಿಗಿಂತ ಇಪ್ಪತ್ತು ಪಟ್ಟು ಹೆಚ್ಚು ವಿಟಮಿನ್ ಸಿ ಅಂಶ ನೆಲ್ಲಿಕಾಯಿಯಲ್ಲಿದೆ ನೆಲ್ಲಿಕಾಯಿ ಜ್ಯೂಸನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಅದರ ಪರಿಣಾಮ ಹೆಚ್ಚಾಗಿರುತ್ತದೆ.
- ನೆಲ್ಲಿಕಾಯಿ ಜ್ಯೂಸನ್ನು ಕುಡಿಯುವುದರಿಂದ ಆಗುವ ಉಪಯೋಗಗಳು
1)ನೆಲ್ಲಿಕಾಯಿ ಜ್ಯೂಸ್ ಗೆ ಒಂದು ಚಮಚ ಜೇನುತುಪ್ಪ ಹಾಗು ಒಣಶುಂಠಿಯ ಪುಡಿಯನ್ನು ಹಾಕಿ ದಿನ ಬೆಳಿಗ್ಗೆ ಎದ್ದ ಕೂಡಲೆ ಕುಡಿಯುವುದರಿಂದ ಜೀರ್ಣಕ್ರೀಯಿಗೆ ಸುಲಭವಾಗುತ್ತದೆ.
2)ನೆಲ್ಲಿಕಾಯಿ ಜ್ಯೂಸ್ ಗೆ ಒಂದು ಚಿಟಿಕಿ ಅರಶಿನ ಪುಡಿ ಹಾಗು ಜೇನುತುಪ್ಪವನ್ನು ಸೇರಿಸಿ ಕುಡಿಯುವುದರಿಂದ ಡಯಾಬಿಟಿಸ್ ನಿಯಂತ್ರಣದಲ್ಲಿರುತ್ತದೆ.
3)ಆಯುರ್ವೇದದ ಪ್ರಕಾರ ಪ್ರತಿದಿನ ನೆಲ್ಲಿಕಾಯಿ ಜ್ಯೂಸನ್ನು ಕುಡಿಯುವುದರಿಂದ ಆರೋಗ್ಯ ವ್ರದ್ದಿಸುತ್ತದೆ ಮತ್ತು ಎಲ್ಲಾ ಕಾಯಿಲೆಗಳನ್ನು ನಿಯಂತ್ರಣದಲ್ಲಿಡುವ ಶಕ್ತಿ ಇದೆ.
4)ನೆಲ್ಲಿಕಾಯಿ ನ್ಯೂಸ್ ಗೆ ಜೇನುತುಪ್ಪ ಸೇರಿಸಿಕೊಂಡು ಕುಡಿಯುವುದರಿಂದ ಅಸ್ತಮಾ ದೂರವಾಗುತ್ತದೆ
5)ನೆಲ್ಲಿಕಾಯಿಯಲ್ಲಿ ಫೈಬರ್ ಮತ್ತು ಪ್ರೋಟೀನ್ ಜೀವಸತ್ವಗಳಿರುವುದರಿಂದ ನಮ್ಮ ದೇಹದಲ್ಲಿ ರಕ್ತವನ್ನು ಶುದ್ಧಗೊಳಿಸುವ ಶಕ್ತಿ ಇದೆ.
6)ನೆಲ್ಲಿಕಾಯಿ ಜ್ಯೂಸ್ ಗೆ ಒಂದು ಚಿಟಿಕಿ ಅರಶಿನ ಪುಡಿಯನ್ನು ಹಾಕಿ ಕುಡಿಯುವುದರಿಂದ ಮುಖದಲ್ಲಿ ಮೊಡವೆಗಳ ಪ್ರಮಾಣ ಕಡಿಮೆಯಾಗುತ್ತದೆ.
7)ನೆಲ್ಲಿಕಾಯಿ ಜ್ಯೂಸನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಮಲಬದ್ದತೆ ಗ್ಯಾಸ್ಟ್ರಿಕ್ ಹಾಗು ಹೊಟ್ಟೆಹುಣ್ಣುಗೆ ರಾಮಬಾಣ.
8)ನೆಲ್ಲಿಕಾಯಿ ಜ್ಯೂಸ್ ಗೆ ಒಂದು ಚಮಚ ಜೇನುತುಪ್ಪ ಹಾಗೂ ಎಲಕ್ಕಿ ಪುಡಿಯನ್ನು ಹಾಕಿ ದಿನಾಲು ಕುಡಿಯುವುದರಿಂದ ದೇಹದಲ್ಲಿನ ಬೊಜ್ಜನ್ನು ಕರಗಿಸಿ ತೂಕವನ್ನು ಕಡಿಮೆಮಾಡುತ್ತದೆ.