ಮೇ 12 ವಿಶ್ವ ದಾದಿಯರ ದಿನ 2022;

ವಿಶ್ವ ದಾದಿಯರ ದಿನವನ್ನು ಖ್ಯಾತ ದಾದಿ ಪ್ಯಾರೆನ್ಸ್ ನೈಟಿಂಗೇಲ್ ಅವರು ಹುಟ್ಟಿದ ದಿನದಂದು ಆಚರಿಸಲಾಗುವುದು. ಅವರು ಮನುಕುಲಕ್ಕೆ ನೀಡಿದ ಅಮೋಘ ಸೇವೆಯನ್ನು ಸ್ಮರಿಸುವ ಸಲುವಾಗಿ ‘ವಿಶ್ವ ದಾದಿಯರ ದಿನ’ಎಂದು ಜಗತ್ತಿನಾದ್ಯಂತ ಮೇ 12ರಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ.ದಾದಿಯರು ನೀಡುವ ಅಮೂಲ್ಯ ಸೇವೆಯನ್ನು ಸ್ಮರಿಸುವ ಸಲುವಾಗಿ ಈ ದಿನವನ್ನಾಗಿ ಆಚರಿಸಲಾಗುತ್ತದೆ.

  • ಯಾರೀಕೆ ಫ್ಲಾರೆನ್ಸ್ ನೈಟಿಂಗೇಲ್?

1820ರ ಮೇ 12ರಂದು ಜನಿಸಿದ ಫ್ಲಾರೆನ್ಸ್ ನೈಟಿಂಗೇಲ್ ಇವರನ್ನು ‘ಆಧುನಿಕ ನರ್ಸಿಂಗ್‍ನ ರೂವಾರಿ’ ಎಂದು ಕರೆಯುತ್ತಾರೆ. ಮೂಲತಃ ಇಟಲಿ ದೇಶದಲ್ಲಿ ಜನಿಸಿ ಬಳಿಕ ಬ್ರಿಟಿಷ್ ದೇಶದ ಸಂಜಾತೆಯಾದ ಈಕೆ 13 ಆಗಸ್ಟ್ 1910ರಲ್ಲಿ ಇಹಲೋಕ ತ್ಯಜಿಸಿದರು. ಸುಮಾರು 90 ವರ್ಷಗಳ ಪರಿಪೂರ್ಣ ಬದುಕು ಸವೆಸಿದ ಈಕೆ ತನ್ನ ಜೀವನವನ್ನು ಮನುಕುಲದ ಸೇವೆಗೆ ಮುಡಿಪಾಗಿಟ್ಟಿದ್ದಳು. ಸಾಮಾಜಿಕ ಕಾರ್ಯಕರ್ತೆಯಾಗಿದ್ದ ಈಕೆ ವೃತ್ತಿಯಲ್ಲಿ ಅಂಕಿ ಅಂಶ ತಜ್ಞೆಯಾಗಿದ್ದಳು. ಆದರೆ ನೊಂದವರ ದೀನ ದಲಿತರ ಸಾಲಿಗೆ ಈಕೆ ಸಾಕ್ಷಾತ್ ದೇವತೆಯಾಗಿದ್ದಳು.

ರೋಗಿಗಳ ಕಾಯಿಲೆ ವಾಸಿ ಮಾಡುವಲ್ಲಿ, ಅವರಲ್ಲಿ ಮಾನಸಿಕ ಧೈರ್ಯ ತುಂಬುವಲ್ಲಿ ರೋಗಿಗಳು ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಅವರ ಮಾನವೀಯ ಸೇವೆಗೆ ಬೆಲೆ ಕಟ್ಟಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ರೋಗಿ ಗುಣಮುಖವಾಗುವಲ್ಲಿ ವೈದ್ಯ ನೀಡಿದ ಔಷಧಿಗಿಂತ ದಾದಿ ನೀಡಿದ ಸೇವೆ ಪ್ರಮುಖವಾಗಿರುತ್ತದೆ. ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಸಮಯದಲ್ಲಿ ದಾದಿ ದೈವೀ ಸ್ವರೂಪಿಯಾಗಿ ಕಾಣಿಸುತ್ತಾರೆ. ಮನುಷ್ಯ ಅಂದ ಮೇಲೆ ಕಾಯಿಲೆ ಬರುವುದು ಸಹಜ. ಆದರೆ ಕೆಲವರಿಗೆ ಅಪಘಾತವಾಗಿ ಅಥವಾ ಬೇರೆ ಯಾವುದೋ ಕಾಯಿಲೆಯಿಂದ ಮಲಗಿದ್ದಲ್ಲಿಯೇ ಆದಾಗ ದಾದಿಯರು ನೀಡುವ ಸೇವೆ ನೋಡುವಾಗ ಎಂಥವರಿಗೂ ಅವರ ಮೇಲೆ, ಅವರ ವೃತ್ತಿ ಮೇಲೆ ಗೌರವ ಮೂಡುವುದು. ರೋಗಿ ಹೇಗೆಯೇ ಇರಲಿ, ಯಾವುದೇ ಹೇಸಿಗೆ ತೋರದೆ ಅವರ ಕೆಲಸಗಳನ್ನು ಮಾಡುತ್ತಾರೆ. ಅಮ್ಮನಂತೆ ಆರೈಕೆ ಮಾಡುತ್ತಾರೆ, ಮನಸ್ಸಿಗೆ ಧೈರ್ಯ ತುಂಬುವರು

ಪ್ರತಿಯೊಬ್ಬ ಮನುಷ್ಯ ಅವರ ಸೇವೆಯನ್ನು ಪಡೆದುಕೊಂಡೇ ಕೊಳ್ಳುತ್ತಾನೆ. ಅವರ ಸೇವೆಗೆ ಗೌರವನ್ನು ನೀಡುವ ಈ ದಿನದಂದು ಅವರಿಗೆ ನಮ್ಮ ಕೃತಜ್ಞತೆ ಸಲ್ಲಿಸೋಣ, ಅವರ ನಿಸ್ವಾರ್ಥ ಸೇವೆಗೆ ನಮ್ಮದೊಂದು ನಮನ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group