ಬಿಲ್ವಪತ್ರೆಯಿಂದ ಎಷ್ಟೆಲ್ಲಾ ಉಪಯೋಗವಿದೆ ಗೊತ್ತಾ?

1) ಬಿಲ್ವಪತ್ರೆ ಎಲೆಯನ್ನು ಅರೆದು ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಬೆಳಿಗ್ಗೆ ಎದ್ದ ಕೂಡಲೆ ಕುಡಿದರೆ ಮಂಡಿನೋವು ಸೊಂಟನೋವು ಕೈ-ಕಾಲುನೋವು ಕಡಿಮೆಯಾಗುತ್ತದೆ.
2) ಬಿಲ್ವಪತ್ರೆ ಎಲೆಯನ್ನು ಚೆನ್ನಾಗಿ ಅರೆದು ಅದಕ್ಕೆ ಒಂದು ಚಮಚ ಎಳ್ಳು ಒಂದು ಚಮಚ ಆಗಸೆಬೀಜ ಹಾಗೂ ಒಂದಿಷ್ಟು ಬೆಲ್ಲವನ್ನು ಸೇರಿಸಿ ಜ್ಯೂಸ್ ಮಾಡಿ ಕುಡಿದರೆ ದೆಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚು ಮಾಡುತ್ತದೆ ಹಾಗೂ ಆರೋಗ್ಯಕ್ಕೂ ಬಹಳ ಒಳ್ಳೆಯದು.
3)ಬಿಲ್ವಪತ್ರೆ ಎಲೆಯನ್ನು ಅರೆದು ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ
4)ಬಿಲ್ವಪತ್ರೆ ಎಲೆಯನ್ನು ಆಹಾರದಲ್ಲಿ ಬಳಸಿದರೆ ನಮ್ಮ ದೇಹದಲ್ಲಿ ವಾತವನ್ನು ಶಮನಗೊಳಿಸುತ್ತದೆ
5) ಬಿಲ್ವಪತ್ರೆ ಎಲೆಯನ್ನು ಹುಡಿ ಮಾಡಿ ಅದಕ್ಕೆ ಜೇನುತುಪ್ಪವನ್ನು ಸೇರಿಸಿ ದಿನಾಲು ಕುಡಿಯುವುದರಿಂದ ದೇಹದಲ್ಲಿ ಬೊಜ್ಜನ್ನು ಕರಗಿಸಿ ತೂಕವನ್ನು ಕಡಿಮೆಮಾಡುತ್ತದೆ
6) ಡಯಾಬಿಟಿಸ್ ಇರುವ ರೋಗಿಗಳು ಬಿಲ್ವಪತ್ರೆ ಎಲೆಯನ್ನು ಸೇವಿಸುವುದರಿಂದ ಡಯಾಬಿಟಿಸನ್ನು ನಿಯಂತ್ರಿಸಬಹುದು
7)ಬಿಲ್ವಪತ್ರೆ ಎಲೆಯನ್ನು ನುಣ್ಣಗೆ ಅರೆದು ತಲೆಗೆ ಲೇಪಿಸಿಕೊಂಡು ಅರ್ದ ಗಂಟೆಯ ನಂತರ ತಲೆಯನ್ನು ತೊಳೆದುಕೊಳ್ಳಬೇಕು ಇದನ್ನು ವಾರದಲ್ಲಿ ಎರಡು ಮೂರು ಬಾರಿ ಹಚ್ಚಿಕೊಳ್ಳುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ
8) ಬಿಲ್ವಪತ್ರೆ ಎಲೆಯ ರಸವನ್ನು ಪ್ರತಿನಿತ್ಯ ಎರಡು ಮೂರು ಚಮಚ ಸೇವನೆ ಮಾಡುವುದರಿಂದ ನಿಶ್ಯಕ್ತಿ ಮತ್ತು ಸುಸ್ತು ನಿವಾರಣೆಯಾಗುತ್ತದೆ.