ಇತ್ತೀಚಿನ ದಿನಗಳಲ್ಲಿ ಚರ್ಮದ ಅಲರ್ಜಿಗಳಿಂದ ತುಂಬಾ ಜನರು ತೊಂದರೆಯನ್ನು ಎದುರಿಸುತ್ತಿದಾರೆ.ಈ ಚರ್ಮದ ಅಲರ್ಜಿ ಎಂದರೆ ಮೈಯಲ್ಲಿ ಉರಿ ಹಾಗೂ ಕಡಿತ ಉಂಟಾಗುವುದು ಈ ರೀತಿಯ ಸಮಸ್ಯೆಗಳು ಬರಲು ಕಾರಣ ಯಾವುದು ಎಂದರೆ ಚರ್ಮದ ಮೇಲಿನ ಪಂಗಸ್ ಹಾಗೂ ಫುಡ್ ಅಲರ್ಜಿ. ಈ ರೀತಿಯ ಹಲವಾರು ಕಾರಣಗಳಾಗಿವೆ ಈ ಅಲರ್ಜಿ ಉಂಟಾದಾಗ ಜನರು ಉಗುರು ಇದೆ ಎಂದು ಕೆರೆದುಕೊಳ್ಳುತ್ತಾ ಇರುತ್ತಾರೆ. ಈ ರೀತಿ ಮಾಡುವುದರಿಂದ ಮ್ರದು ಚರ್ಮವು ಹಾಳಗುವುದರ ಜೊತೆಗೆ ಅಲ್ಲಿ ಗಾಯ ಉಂಟಾಗುತ್ತದೆ.ಹಾಗೂ ಅಲರ್ಜಿಯು ಮೈಯಲ್ಲಿ ಹರಡುವ ಸಾಧ್ಯತೆ ಇದೆ.ಈ ಅಲರ್ಜಿ ಮನೆಯಲ್ಲಿ ಒಬ್ಬರಿಗೆ ಬಂದರೆ ಎಲ್ಲರಿಗೂ ಹರಡುವ ಸಾಧ್ಯತೆ ಇರುತ್ತದೆ.ಅದಕ್ಕಾಗಿ ಈ ಅಲರ್ಜಿ ಉಂಟದಾಗ ಕೆರೆಯುವ ಬದಲು ಈ ಕೆಳಗಿನ ಮನೆಮದ್ದನ್ನು ಉಪಯೋಗಿಸಿದರೆ ತಕ್ಷಣ ಇದಕ್ಕೆ ಪರಿಹಾರ ದೊರೆಯುತ್ತದೆ.
ಚರ್ಮದ ಅಲರ್ಜಿಗೆ ಮನೆಮದ್ದು.
ಒಂದು ಹಿಡಿ ಬೇವಿನ ಎಲೆಯನ್ನು ಚೆನ್ನಾಗಿ ತೊಳೆದು ಅದನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿ ಅದಕ್ಕೆ ಅಲೊವೆರವನ್ನು ಸೇರಿಸಿ ಹಾಗೂ ಅದಕ್ಕೆ ಒಂದು ತುಂಡು ಖರ್ಪೂರದ ಹುಡಿ ಸೇರಿಸಿ ಇವೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ಕಜ್ಜಿ-ತುರಿಕೆ ಇರುವ ಜಾಗಕ್ಕೆ ಸತತವಾಗಿ 2 ವಾರ ಹಚ್ಚಿದರೆ ಎಂತಹ ಕಜ್ಜಿ-ತುರಿಕೆ ಇದ್ದರು ನಾಶವಾಗುತ್ತದೆ.
ಅಮೃತ ಬಳ್ಳಿಯನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿ ಅದನ್ನು ಅರ್ದ ಲೋಟ ಬಿಸಿ ನೀರಿಗೆ ಹಾಕಿ ಬೆಳಿಗ್ಗೆ ಎದ್ದ ಕೂಡಲೆ ಕುಡಿದರೆ ಯಾವುದೆ ಕಜ್ಜಿ-ತುರಿಕೆ ಇದ್ದರು ಕಡಿಮೆಯಾಗುತ್ತದೆ.
ಒಂದು ಚಮಚ ಒಣ ಶುಂಠಿಯ ಹುಡಿಗೆ ಒಂದು ಚಮಚ ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿದರೆ ಎಂತಹ ಕಜ್ಜಿ-ತುರಿಕೆ ಇದ್ದರು ಮಂಗಮಾಯವಾಗುತ್ತದೆ.
ಒಂದು ಚಿಟಿಕಿ ಅರಶಿನ ಹುಡಿಗೆ ಅರ್ದ ನಿಂಬೆಹಣ್ಣಿನ ರಸವನ್ನು ಹಾಕಿ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ಈ ಲೇಪವನ್ನು ಕಜ್ಜಿ-ತುರಿಕೆ ಇರುವ ಜಾಗಕ್ಕೆ ಹಚ್ಚಿ ಒಂದು ಗಂಟೆಯ ನಂತರ ಬಿಸಿ ನೀರಿನಿಂದ ಸತತ ಎರಡು ವಾರ ಬಿಸಿ ನೀರಿನಿಂದ ತೊಳೆದರೆ ಹಂತ ಹಂತವಾಗಿ ಕಜ್ಜಿ-ತುರಿಕೆ ಕಡಿಮೆಯಾಗುತ್ತದೆ.