ಮೂಸಂಬಿ ಹಣ್ಣಿನ ಜ್ಯೂಸ್ / ಇದರಲ್ಲಿ ವಿಟಮಿನ್ ಸಿ ಇರುವುದರಿಂದ ತ್ವಚೆಯ ಕಾಂತಿ, ಕೂದಲಿನ ಬೆಳವಣಿಗೆಗೆ ಕೂಡ ತುಂಬಾ ಒಳ್ಳೆಯದು. ಮಕ್ಕಳಿಗೆ ಇದನ್ನು ಮಾಡಿಕೊಡುವುದರಿಂದ ಅವರಲ್ಲಿನ ಆಯಾಸ, ಸುಸ್ತು ಕಡಿಮೆಯಾಗುತ್ತದೆ. ಮೂಸಂಬಿ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭದ ಕುರಿತು ಇಲ್ಲಿದೆ ನೋಡಿ ಮಾಹಿತಿ. ಮೂಸಂಬಿ ಜ್ಯೂಸ್ ನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಪೋಟ್ಯಾಷಿಯಂ. ಮೆಗ್ನಿಷಿಯಂ ಹೆಚ್ಚಿದೆ. ಜತೆಗೆ ಆಯಂಟಿ ಆಕ್ಸಿಡೆಂಟ್ ಕೂಡ ಹೌದು. ಇದನ್ನು ಸೇವಿಸುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ.
ತಾಜಾಹಣ್ಣಿನ ಜ್ಯೂಸ್ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಕೂಡ ಸಹಾಯಕಾರಿಯಾಗಿದೆ. ಹಾಗೆಯೇ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಈ ಜ್ಯೂಸ್ ಕುಡಿಯುವುದರಿಂದ ನಿವಾರಣೆಯಾಗಲಿದೆ. ಇನ್ನು ಮೂಸಂಬಿ ಜ್ಯೂಸ್ ಅನ್ನು ಮಧುಮೇಹದವರು ಕೂಡ ಕುಡಿಯಬಹುದು. ಇದಕ್ಕೆ ನೆಲ್ಲಿಕಾಯಿ ಜ್ಯೂಸ್ ಮತ್ತು ಜೇನುತುಪ್ಪವನ್ನು ಸೇರಿಸಿ ಬೆಳಿಗ್ಗೆ ಕುಡಿಯುವುದರಿಂದ ಶುಗರ್ ಲೆವಲ್ ಕೂಡ ನಿಯಂತ್ರಣಕ್ಕೆ ಬರುತ್ತದೆ.
ಮೂಸಂಬಿಯು ದಟ್ಟಣೆ ನಿವಾರಕ ಗುಣಗಳನ್ನು ಹೊಂದಿದ್ದು, ಯಾವುದೇ ಉಸಿರಾಟದ ಸಮಸ್ಯೆಗಳನ್ನು ದೂರವಿಡುತ್ತದೆ.ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ – ವಿವಿಧ ರೀತಿಯ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುವ ಲಿಮೋನಾಯ್ಡ್‌ಗಳನ್ನು ಮೋಸಂಬಿ ಹೊಂದಿದೆ. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ – ನೀವು ತೂಕ ಇಳಿಸಿಕೊಳ್ಳಲು ನೈಸರ್ಗಿಕ ಮಾರ್ಗಗಳನ್ನು ಹುಡುಕುತ್ತಿದ್ದರೆ, ಮೋಸಂಬಿ ರಸವನ್ನು ಕುಡಿಯುವುದು ಸಹಾಯ ಮಾಡುತ್ತದೆ