ಪಪ್ಪಾಯ ಹಣ್ಣಿನ ಸೇವನೆಯಿಂದ ಇರುವ ಉಪಯೋಗ;

ಪಪ್ಪಾಯಿ ಹಣ್ಣಿನಲ್ಲಿ ಪೊಟ್ಯಾಸಿಯಮ್, ಮೆಗ್ನೀಷಿಯಂ, ನಿಯಾಸಿನ್ ನ ಹಲವಾರು ಅಂಶಗಳನ್ನು ಹೊಂದಿದೆ.ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಫೈಬರ್ ಇರುವ ಕಾರಣ ದೇಹದಲ್ಲಿ ಅನಗತ್ಯ ಕೊಬ್ಬು ಶೇಖರಿಸದಂತೆ ನೋಡಿಕೊಳ್ಳುತ್ತದೆ.
ಇದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ದೂರ ಇರುವುದರ ಜೊತೆಗೆ ರಕ್ತದೊತ್ತಡ ತಡೆಗಟ್ಟಲು ಸಹಾಯ ಮಾಡುತ್ತದೆ.ಪಪ್ಪಾಯಿ ಹಣ್ಣಿನ್ನು ಮಕ್ಕಳಿಗೆ ಹೆಚ್ಚಾಗಿ ತಿನ್ನಿಸಬೇಕು, ಇದರಿಂದ ಕಣ್ಣಿನ ಸಮಸ್ಯೆ ಕಾಡುವುದಿಲ್ಲ.ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್ ಕೆ ಇರುವುದರಿಂದ ಆರ್ಥರೈಟಿಸ್ ಅನ್ನು ತಡೆಗಟ್ಟುತ್ತದೆ ಹಾಗೂ ಕೀಲುನೋವಿನ ಸಮಸ್ಯೆ ಕಾಡುವುದಿಲ್ಲ.
ಪಪ್ಪಾಯಿ ಹಣ್ಣಿನಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇರುವುದರಿಂದ ಸಕ್ಕರೆ ಕಾಯಿಲೆ ಇರುವವರು ಕೂಡ ಯಾವುದೇ ಭಯವಿಲ್ಲದೆ ತಿನ್ನಬಹುದು.ತೂಕ ಇಳಿಸಲಯ ಬಯಸುವವರು ಅಧಿಕವಾಗಿ ಪಪ್ಪಾಯಿ ಹಣ್ಣನ್ನು ತಿನ್ನಬೇಕು. ಇದರಿಂದ ದೇಹದಲ್ಲಿ ಬೇಡದಿರುವ ಕೊಬ್ಬನ್ನು ಕರಗಿಸುತ್ತದೆ.ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್ ಕೆ ಇರುವುದರಿಂದ ಮೂಳೆಗಳು ಸದೃಢಗೊಳ್ಳುತ್ತದೆ. ಪಪ್ಪಾಯಿ ಹಣ್ಣಿನಲ್ಲಿ ನಾರಿನ ಅಂಶ ಹೊಂದಿದೆ,
ಅಷ್ಟೇ ಅಲ್ಲದೇ ಇದರಲ್ಲಿ ಪೊಟ್ಯಾಸಿಯಮ್, ಮೆಗ್ನೀಷಿಯಂ, ನಿಯಾಸಿನ್ ಇನ್ನೂ ಹಲವಾರು ಅಂಶಗಳನ್ನು ಇದು ಹೊಂದಿರುತ್ತದೆ.ಋತು ಚಕ್ರದ ಸಮಸ್ಯೆ ಇರುವವರು ಪಪ್ಪಾಯ ಹಣ್ಣಿನ ಜ್ಯೂಸ್ ಅಥವಾ ಹಸಿ ಪರಂಗಿ ಕಾಯಿಯ ರಸವನ್ನು ಸೇವಿಸುತ್ತಾ ಬಂದರೆ ಈ ಸಮಸ್ಯೆ ಕ್ರಮೇಣ ಕಡಿಮೆ ಆಗುತ್ತಾ ಬರುತ್ತದೆ.
ಸಕ್ಕರೆ ಕಾಯಿಲೆ ಇರುವವರು ಕೂಡ ಪಪ್ಪಾಯಿ ಹಣ್ಣನ್ನು ಸೇವಿಸಬಹುದು. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ಇದು ತಡೆಗಟ್ಟುತ್ತದೆ.
ಪಪ್ಪಾಯಿ ಹಣ್ಣಿನಲ್ಲಿ ಕಿಣ್ವ ಎಂಬ ಅಂಶವು ಅಧಿಕವಾಗಿರುವುದರಿಂದ ಇದನ್ನು ನಿತ್ಯದಲ್ಲೂ ಸೇವಿಸುತ್ತಾ ಬಂದರೆ ದೇಹಕ್ಕೆ ಶಕ್ತಿ ಬರುವುದರ ಜೊತೆಗೆ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತಾ ಹೋಗುತ್ತದೆ.
ಪಪ್ಪಾಯ ವನ್ನು ಗರ್ಭಿಣಿ ಮಹಿಳೆಯರು ಸೇವಿಸುವುದು ಅಪಾಯ.