ಗಿಡಗಳನ್ನು ಇಂತಹ ಜಾಗಗಳಲ್ಲಿ ಬೆಳೆಸಿ;

ಮರಗಳು ಜೀವಿಗಳಿಗೆ ಒಂದು ಉತ್ತಮ ವಾಸ ಸ್ಥಾನವನ್ನೂ ಒದಗಿಸುತ್ತವೆ. ನಗರ ಹಾಗು ಗ್ರಾಮೀಣ ಪ್ರದೇಶಗಳೆರಡರಲ್ಲೂ ಅನೇಕ ಪಕ್ಷಿಗಳು, ಉರಗಗಳು, ಕೀಟಗಳು ಹಾಗು ಪ್ರಾಣಿಗಳಿಗೆ ಆಹಾರ ಮತ್ತು ರಕ್ಷಣೆ ನೀಡಲು ಮರಗಳು ಅಗತ್ಯ. ಬೇವು, ಆಲದ ಮರ, ಅಂಜೂರ, ನೇರಳೆ, ಪಗಡೆಕಾಯಿಮರ ಅಥವಾ ಅಶ್ವತ್ತ, ಹಿಪ್ಪೆಮರ ಇತ್ಯಾದಿ ಮರಗಳು ಹಾಗು ತಾಳೆ ಮರಗಳು ಮತ್ತು ಈಚಲು ಮರಗಳು ವನ್ಯಜೀವಿಗಳಿಗೆ ಆಶ್ರಯ ನೀಡುವಲ್ಲಿ ಅತ್ಯತ್ತಮವಾದುದ್ದಾಗಿವೆ. ಮರಗಳಿಗೆ ವಯಸ್ಸಾದಂತೆ, ರೆಂಬೆಗಳು, ಅದರೊಳಗಿನ ಸಣ್ಣ ರಂದ್ರಗಳು ಹಾಗು ಪೊಟರೆಗಳು ವೈವಿಧ್ಯಮಯ ಜೀವಿಗಳಿಗೆ ನೆರವಾಗುತ್ತವೆ. ಒಂದು ಮರ ಒಂದು ಇಡೀ ಜೀವಾವರಣ ವ್ಯವಸ್ಥೆಯಾಗಿ ಮಾರ್ಪಾಡಾಗಲು ಸಾಧ್ಯ. ಬೆಳೆದು ನಿಂತ ಹೆಮ್ಮರಗಳು ಪಕ್ಷಿಗಳು, ಕೀಟಗಳು ಹಾಗು ಪ್ರಾಣಿಗಳಿಗೆ ಆಹಾರದ ಭಂಡಾರಗಳು ಮತ್ತು ಆಟದ ಮೈದಾನಗಳನ್ನು ಹೊಂದಿದ ಒಂದು ಅವಾಸ ಸ್ಥಾನ ಇದ್ದಂತೆ.
- ಎಲ್ಲಿ ನೆಡಬೇಕು?
ನಾವು ನಗರ ಅಥವಾ ಗ್ರಾಮೀಣ ಪ್ರದೇಶ, ಎಲ್ಲೇ ವಾಸಿಸುತ್ತಿದ್ದರೂ, ಗಿಡಗಳನ್ನು ನೆಡಲು ಹಾಗು ರಕ್ಷಿಸಲು ಅನೇಕ ಅವಕಾಶಗಳಿವೆ. ನಗರ ಹಾಗು ಪಟ್ಟಣಗಳಲ್ಲಿ, ಮರಗಳನ್ನು ರಸ್ತೆಯ ಬದಿಯಲ್ಲಿ, ಕೆರೆ ಕುಂಟೆಗಳ ಬಳಿ, ಉದ್ಯಾನವನಗಳಲ್ಲಿ ಪಾರ್ಕುಗಳಲ್ಲಿ, ಶಾಲಾ.ಕಾಲೇಜುಗಳ ಆವರಣದಲ್ಲಿ ಹಾಗು ಮನೆಯ ತಾರಸಿಗಳ ಮೇಲೂ ಬೆಳಸಬಹುದು. ಪ್ರತಿ ಬಹುಮಹಡಿಗಳ ಕಟ್ಟಡಗಳು, ಪ್ರತಿ ಕಾರ್ಖಾನೆಗಳು, ಪ್ರತಿ ಪುರ ಸಭಾ ಕಛೇರಿಗಳು ತಮ್ಮ ಪರಿಧಿಯುದ್ದಕ್ಕೂ ಮರಗಳನ್ನು ನೆಟ್ಟು ಬೆಳಸುವುದಕ್ಕೆ ಪ್ರೋತ್ಸಾಹಿಸಬೇಕು ಮತ್ತು ಅದನ್ನು ಕಾನೂನು ಬದ್ಧಗೊಳಿಸಬೇಕು.ಹಳ್ಳಿಗಳಲ್ಲಿಯೂ ರಸ್ತೆ ಬದಿಯಲ್ಲಿ, ಕಾಲುವೆ ಮತ್ತು ತೊರೆಗಳ ದಡದಲ್ಲಿ, ಆಟದ ಮೈದಾನಗಳಲ್ಲಿ, ದೇವಸ್ಥಾನದ ಆವರಣಗಳು ಮತ್ತು ಇನ್ನಿತರ ಪ್ರಾರ್ಥನಾ ಮಂದಿರಗಳ ಆವರಣಗಳಲ್ಲಿ, ಸ್ಮಶಾನಗಳಲ್ಲಿ ಮರಗಳನ್ನು ನೆಡಬಹುದು. ಮರಗಳನ್ನು ಇತರ ಬೆಳೆಗಳೊಂದಿಗೆ ಮಿಶ್ರ ಮಾಡಿ ಬೆಳೆಸುವ ಹೆಚ್ಚುವರಿ ಅವಕಾಶವೂ ಇದೆ. (ಇದನ್ನು ಬೇಸಾಯ ವನ ಪದ್ಧತಿ ಎಂದು ಕರೆಯಲಾಗುತ್ತದೆ). ಮಿಶ್ರ ಹಣ್ಣಿನ ತೋಟಗಳು, ಉರುವಲು ಮತ್ತು ಮೇವಿಗಾಗಿ ಬೆಳೆಯುವ ಬೆಳೆಗಳು ಹಾಗು ಮರಗಳು/ ಗೋಮಾಳದ ಹುಲ್ಲುಗಾವಲುಗಳು, ಜಮೀನಿನುದ್ದಕ್ಕೂ ಬೆಳೆದ ಮರಗಳು ಹಾಗೂ ಮನೆಗಳ ಸುತ್ತಲೂ ನಿರ್ಮಿಸುವ ಜೈವಿಕ ಬೇಲಿಗಳು ಇದಕ್ಕೆ ಕೆಲವು ಉದಾಹರಣೆಗಳು. ಈ ತರಹದ ಅನೇಕ ಪದ್ಧತಿಗಳಲ್ಲಿ ಮರಗಳಲ್ಲಿ ಅಧಿಕವಾಗಿ ಬೆಳದ ಭಾಗಗಳನ್ನು ಆಗಾಗ್ಗೆ ಕತ್ತರಿಸಬೇಕಾಗುತ್ತದೆ. ಮರಗಳನ್ನು ಹುಲ್ಲು, ಬಳ್ಳಿಗಳು ಹಾಗು ಪೊದೆಗಳೊಂದಿಗೆ ನೆಟ್ಟಾಗ, ಬಂಜರಾದ ಭೂಮಿಯನ್ನು ಉತ್ಪಾದಕ ಪರಿಸರ ವ್ಯವಸ್ಥೆಯಾಗಿ ಪರಿವರ್ತಿಸುತ್ತದೆ. ಇಂತಹ ಪರಿಸರದಲ್ಲಿ ಮರಗಳು ಉಳಿಯುವಂತೆ ಖಚಿತಪಡಿಸಿಕೊಳ್ಳಲು, ವರ್ಷದಲ್ಲಿ ಸೂಕ್ತ ಸಮಯದಲ್ಲಿ ಮರಗಳನ್ನು ನೆಡಬೇಕು ಹಾಗು ಅವು ಎಳೆಯದ್ದಾಗಿರುವಾಗ ಸುಡುವುದನ್ನು, ಮುಕ್ತವಾಗಿ ಪ್ರಾಣಿಗಳು ಅಲ್ಲಿ ಮೇಯುವುದನ್ನು, ಹಾಗು ಅವನ್ನು ಪದೇ ಪದೇ ಕಡಿಯುವುದನ್ನು ತಡೆಯಬೇಕು.