ವಿದ್ಯಾವಂತರೇ ಹೆಚ್ಚು ಪರಿಸರವನ್ನು ಹಾಳು ಮಾಡುತ್ತಿರುವ ಇಂದಿನ ದಿನಗಳಲ್ಲಿ ಪರಿಸರ ರಕ್ಷಣೆ ಬಗ್ಗೆ ವಿಶೇಷ ಒಲವು ಮೂಡುವಂತೆ ಮಾಡಬೇಕಿದೆ. ಶಾಲಾ ಕಾಲೇಜುಗಳಿಂದಲೇ ಪರಿಸರದ ಬಗ್ಗೆ ಅರಿವು ನೀಡಬೇಕಾಗಿದೆ. ಪ್ರಕೃತಿಯ ಜೊತೆ ಮಕ್ಕಳ ಬೆರೆಯುವಂತಾದರೆ ಪರಿಸರವು ತಾನಾಗಿಯೇ ಉಳಿಯುತ್ತದೆ.ನಮ್ಮ ಪೂರ್ವಜರು ಪ್ರಕೃತಿ ಜೊತೆಗೆ ಬದುಕಿದವರು,
ವಿದ್ಯೆಯಲ್ಲಿ ಹಿಂದಿದ್ದರೂ ಪರಿಸರದ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದರು. ಆದರೆ ನಾಗರೀಕತೆ ಬೆಳದಂತೆ ಪ್ರಕೃತಿಯ ಮಾರಣ ಹೋಮವೇ ನಡೆಯುತ್ತಿದೆ. ಪರಿಸರದ ಕಾಳಜಿ ಯಾರಿಗೂ ಇಲ್ಲದಂತಾಗುತ್ತಿದೆ.
ನಿಯಂತ್ರಣ: ಪರಿಸರದ ಉಳಿವಿಗಾಗಿ ನಾವು ಸಾಕಷ್ಟು ಶ್ರಮ ವಹಿಸಬೇಕಾಗಿದೆ. ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸಾದ್ಯವಾದಷ್ಟು ಕೆಲವು ಸಂಗತಿಗಳನ್ನು ನಿಯಂತ್ರಣ ಮಾಡಬೇಕಿದೆ.
ವಾಯು ಮಾಲಿನ್ಯ, ಜಲಮಾಲಿನ್ಯ, ಭೂಮಿ ಮಾಲಿನ್ಯ ಮಾಡುವುದನ್ನು ನಿಲ್ಲಿಸಬೇಕು.
ವಿದ್ಯುತ್ ಬಳಕೆ ಕಡಿಮೆ ಮಾಡುವುದು. ನೀರು ಪೋಲಾಗದಂತೆ ಮಿತವಾಗಿ ಬಳಸುವುದು, ಪೆಟ್ರೊಲ್, ಡೀಸೆಲ್ ವಾಹನಗಳ ಬಳಕೆ ಕಡಿಮೆ ಮಾಡುವುದು ಅಗತ್ಯವಿದೆ. ಸೌರಶಕ್ತಿಯನ್ನು ಉಪಯೋಗಿಸಬೇಕು.
ಅರಣ್ಯನಾಶ ಮಾಡಬಾರದು. ಹಸಿರು ಸಸ್ಯ ಬೆಳೆಸುವುದು ರಾಸಾಯನಿಕ ಬಳಕೆ ಮತ್ತು ಪ್ಲಾಸ್ಟಿಕ ಬಳಕೆ ಕಡಿಮೆ ಮಾಡಬೇಕು